ಬರೆಯುವಾಗ ಚಿಂತೆ

ಬರೆಯುವಾಗ ಚಿಂತೆ

ಬರೆಯುವಾಗ ಚಿಂತೆ

ನಮಗೆಲ್ಲಿ ದೊರಕುವುದು ಸಮಾಪ್ತಿ ತಲುಪುವತನಕ ಅಂತ್ಯ.
ಪ್ರತಿ ದಿನ ಅಧ್ಯಾಯಗಳ ಸಂಯುಕ್ತ ತೆರಪುಗಳ ಗ್ರಂಥ್ಯ.
ನಾಟಕದಲಿ ಬೀಳುವ ತೆರೆಯ ತರ ಪರಿಚ್ಛೇಧಗಳು ದಿನವಾದ್ಯಂತ
ನವದಿನ ನವತನ ತರುತ ಸೇರುತ ನವೀನ ಅನುಭವಪ್ರಾಂತ್ಯ!
*
ಕಟ್ಟಕೊನೆಯ ಮುಕ್ತಾಯ ಮುಟ್ಟುವ ನಿರ್ಧಾರ ಅವನಾಧಿಪತ್ಯ,
ಬಿಟ್ಟುಕೊಡಲು ಕೃತಿಯ ಉಪಸಂಹಾರ ಕೃತಕ ಪಾರುಪತ್ಯ.
ಆಸೆ ಹಸಿವು ಉಸಿರಾಟ ಸಂಹರಿಕೆ ಆಶಿಸರಾರು ಆಕೈರು.
ಉಷೆಯನುಭವ ಆಗುವ ತನಕ ಬಾಳಿಗೆ ನವಗಡಿಯ ತೋರು.
*
ನವಪ್ರಾರಂಭ ಸಮಸ್ಯೆ ಸಾದಾರಣ ಸರ್ವರಿಗೆ ಸತತ
ನಿತ್ಯಸುಲಭ ಮಿಂಚಿನಂತೆ ಕಲ್ಪನೆ ಹೊಳೆದರೆ ಸುಕೃತ.
ರೂಪಿಸೆ ಲೇಖನಸ್ವರೂಪ ಪತ್ರಕವನ ಶೃಂಗಾರ ಸಮೇತ,
ನಿರೂಪಣೆಯ ಭ್ರಾಂತಿ ವಿಕಸನ ಚಿಂತೆ ಬರುವತನಕ ಮುಗಿತ.

- ವಿಜಯಶೀಲ
*

Rating
No votes yet