ಬಾಳಿನ ವಿರೋದೋಕ್ತಿ

ಬಾಳಿನ ವಿರೋದೋಕ್ತಿ

ಬಾಳಿನ ವಿರೋದೋಕ್ತಿ

ಸಮುದ್ರಕ್ಕಿಳಿದರೂ ಮಂಡಿಯವರೆಗೆ ನೀರು!
ಅದು ಸ್ವಯಂವಿರೋದೋಕ್ತಿ ವಿಧಿಯ ತೋರು.
ತಿರುಪತಿಗ್ಹೋದರೂ ದೊರಕದೆ ಮೋಕ್ಷ!
ಸ್ವರ್ಗದಲು ದೈವಮಾರ್ಗ ಅನಿರೀಕ್ಷ?
*
ಕಾರಣಕರ್ತನ ಮಾಯೆಯೆ, ಕಾರಣವೇನು?
ಹೂತೋಟದಲಿ ಕುರುಡನ ನೋಟವೇನು?
ಸರ್ವರಿಗಿರದು ಸರಿಸಮಾನ ಮಟ್ಟ
ಅದಾವ ವಿಧಿಯಾಟ ಅದಾವತೆರನ ದಿಟ?
*
ಎಲ್ಲವು ಇರುವ ಕಡೆ ಏನಿಲ್ಲದೆ ತಡೆ,
ಎಲ್ಲರಿಗುಂಟು ಪಡೆ ಸ್ವಯಂನಿಸ್ಚಿತ ನಡೆ,
ಎಲ್ಹೋದರು ಕಡೆ ದೊರಕದೆ ಪಡೆ,
ಎಂಥಾ ನಡೆತ ಬಾಳಿಗ್ಹೊಡೆತ ಪೀಡೆ!
*
ಅದೆಂತ ದೋಷ ಅದಾವ ವೇಶ
ಎಂಥ ಪರಿವೇಷ ರಾಹುವಿನ ಶೇಶ
ಇರಬಾರದು ವಿಷ ಅದು ದೈವದೇಶ.
ಅಲ್ಲಿಹನೆ ಸರ್ವೇಶ ಪರಿಹರಿಸೆ ನಾಶ?
*
ಎಲ್ಲಿನೋಡಿದರಲ್ಲಿಹುದು ಸ್ವಯವಿರೋದೋಕ್ತಿ,
ನ್ಯಾಯಾನ್ಯಾಯ ಅಸರಿಸಮ ಸಮಾಜದಲಿ ಕುಯುಕ್ತಿ,
ಅನುರಕ್ತಿಗಿಲ್ಲದೆ ವಿಮುಕ್ತಿ ಎಲ್ಲೆಡೆ ಕಪಟ ಭಕ್ತಿ,
ತನ್ನತನ ಪ್ರೀತಿ ಹೋಯಿತೆಲ್ಲಿ ಕೃತಜ್ಞತೆ ಅನುರಕ್ತಿ?
*
ಇರಬಹುದೆ ಸದವಕಾಶಕೂ ಮುಟ್ಟಿದರೆ ಮುನಿ?
ಅವನಿವನೆಂಬ ಪಕ್ಷಪಾತ ಹಾಯ್ಕೆಯ ಏಣಿ?
ಎಲ್ಲೆಡೆ ಅಜಯ ಪ್ರಯತ್ನವೆಲ್ಲಕೆ ಪರಾಜಯ,
ಕಡೆಗೆ ನಿರಾಶೆ ಅಪೇಕ್ಷೆಗಳಾಗುತ ಮಂಗಮಾಯ!
*
ಎನಗರಿಯದವನ ಸರಿಸಮಾನತ್ವ ಭರವಸೆ
ವೇದಗಳಲ್ಹುದುಗಿಹ ತತ್ವಪರಿವಷೆ ವರಸೆ
ಜ್ಞಾನದಾಸೆಗೆ ತಡೆಏಕೆ ಮುನ್ನಡೆಗೆ ಕಡೆಬೇಕೆ?
ತೇರ್ಗಡೆ ವರ ಯಶಸ್ಸಿನ ಚರ ಪಡೆವತನಕೆ?
- ವಿಜಯಶೀಲ
*

Rating
No votes yet