"zindagi mein life": ಇದನ್ನೊಪ್ಪಿದವರಿಗೆ ಮಾರುಕಟ್ಟೆಯಲ್ಲಿ "ಬಿಸ್ಕೆಟ್" ಗ್ಯಾರೆಂಟಿ!

"zindagi mein life": ಇದನ್ನೊಪ್ಪಿದವರಿಗೆ ಮಾರುಕಟ್ಟೆಯಲ್ಲಿ "ಬಿಸ್ಕೆಟ್" ಗ್ಯಾರೆಂಟಿ!

ಬ್ರಿಟಾನಿಯ ಕಂಪನಿ ಬಹಳ ಹೆಸರುವಾಸಿ.
ಈ ಕಂಪನಿಯು ತನ್ನ ವ್ಯಾಪಾರದ ಗುರುತನ್ನು (brand statement) "eat healthy, think better" ಅಂತ ಇಷ್ಟು ದಿನ ಇರಿಸಿಕೊಂಡಿತ್ತು.
ಈಗ ಅದನ್ನು ಬದಲಾಯಿಸಿ, "zindagi mein life" ಅಂತ ಮಾಡಿಕೊಂಡಿದೆ. ಚೀಸ್, ಬ್ರೆಡ್ಡು, ಕೇಕು, ಕುಕಿ ಮುಂತಾದ ಹೊಸ ಉತ್ಪನ್ನಗಳನ್ನು ಈ ಹೊಸ ಗುರುತಿನೊಂದಿಗೆ ಬಿಡುಗಡೆ ಮಾಡಿದೆ. ಒಂದು ಉತ್ಪನ್ನವನ್ನು ಜನರು ಸಂಪೂರ್ಣವಾಗಿ ಒಪ್ಪಬೇಕಾದರೆ, ಅದರ ವ್ಯಾಪಾರ ಗುರುತು ಮಹತ್ವವುಳ್ಳದ್ದಾಗಿರಬೇಕು ಎಂಬುದು ಕಂಪನಿ ಮರೆತಂತೆ ಕಾಣುತ್ತದೆ.

ಇಂತಹ ಹಿಂದಿ + ಇಂಗ್ಲಿಷ್ ನಲ್ಲಿ ಬರೆದ "brand statement"-ನ ಸುತ್ತ ಎಂತಹುದೇ ಜಾಹೀರಾತು ಹೆಣೆದರೂ ಕರ್ನಾಟಕದ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಿಲ್ಲ. ಇವರ ಮಾರುಕಟ್ಟೆ ಅಂಗವು ಕರ್ನಾಟಕದಲ್ಲಿ ಹಿಂದಿ ಜಾಹೀರಾತು ಸೂಚಿಸಿ, ಕಂಪನಿಯ ಹಣವನ್ನು ಪೋಲು ಮಾಡಿಸುತ್ತಿರುವಂತಿದೆ. ಈ ರೀತಿಯ "ಉತ್ಪನ್ನ ಗುರುತು"ಗಳಿಂದ ಕನ್ನಡಿಗರನ್ನು ಆಕರ್ಷಿಸಲು ಬ್ರಿಟಾನಿಯ ವಿಫಲವಾಗ್ತಿರೋದು ಎದ್ದು ಕಾಣ್ತಿದೆ.

ಇವರೇನಾದ್ರೂ ಕನ್ನಡದಲ್ಲಿ ತಮ್ಮ "ಉತ್ಪನ್ನದ ಗುರುತನ್ನು" ಹೊ೦ದಿದ್ದರೆ, ಜನರನ್ನು ಮುಟ್ಟುವ ಹಾಗೆ ಜಾಹೀರಾತನ್ನು ಹೆಣೆಯುವುದು ಸುಲಭವಾಗುತ್ತಿತ್ತು, ಜನರನ್ನು ಪರಿಣಾಮಕಾರಿಯಾಗಿ ಮುಟ್ಟಲು ಸಾಧ್ಯವಾಗುತ್ತಿತ್ತು ಮತ್ತು ಮಾರಾಟವೂ ಹೆಚ್ಚುತ್ತಿತ್ತು. "ನಿಜವಾಗಲೂ ಇವರ ಬಿಸ್ಕತ್ತುಗಳಲ್ಲಿ ಏನೋ ಮಜಾ ಇದೆ" ಅನ್ನೋದು ಸುಲಲಿತವಾಗಿ ಕನ್ನಡ ಮಕ್ಕಳ ಮನಸ್ಸು ತಲುಪುತ್ತಿತ್ತು. ಈ ನಿಟ್ಟಿನಲ್ಲಿ, "zindagi mein life" ಸ್ವಲ್ಪವೂ ಸಹಾಯಕಾರಿ ಎಂದು ತೋರುತ್ತಿಲ್ಲ.

ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಅವರದ್ದೇ ಭಾಷೆಯಲ್ಲಿ ಬಯಲರಿಗೆಗಳನ್ನು (advertisement) ಕೊಟ್ಟಾಗ ಮಾತ್ರ ಲಾಭ ಹೆಚ್ಚಿಸಲು ಸಾಧ್ಯ ಎ೦ದು ಕ೦ಪನಿಗಳು ಕ್ರಮೇಣ ಅರಿಯುತ್ತಿವೆ. ಇಲ್ಲದಿದ್ದರೆ, ಇತ್ತೀಚೆಗೆ ಬ೦ದ ಕೋಕಾ ಕೋಲಾ ಜಾಹೀರಾತಿನಲ್ಲಿ ಚಿತ್ರನಟ ಗಣೇಶನ ಬದಲು ಹಿ೦ದಿ ಸಿನೆಮಾ ಕಲಾವಿದರೇ ಇರುತ್ತಿದ್ದರು. ಜನ ಮಾತಾಡೋ ಭಾಷೆನೇ ನಾವು ಮಾತಾಡ್ಬೇಕು ಅನ್ನೋ ಬುನಾದಿಯ ಅ೦ಶವನ್ನು ಬ್ರಿಟಾನಿಯಾ ಮರೆತಿರುವುದು ಸ್ಪಷ್ಟವಾಗಿದೆ.

"The sooner you use their language in your marketing efforts, the sooner you become part of the group. When you use the words your customer uses - in the way they use them - you gain Trust and Trust IS Gold"
Courtesy: http://www.pandecta.com/customers-language.html

ಕರ್ನಾಟಕದಲ್ಲಿ ಕನ್ನಡವನ್ನು ಬಳಸಿ ತನ್ನ ಗ್ರಾಹಕರನ್ನು ಪರಿಣಾಮಕಾರಿಯಾಗಿ ಮುಟ್ಟಬಹುದು, ಗ್ರಾಹಕನ ಭಾಷೆಯಲ್ಲಿ ಆ ಶಕ್ತಿಯಿದೆ ಎ೦ದು ಇವರಲ್ಲಿ ಅರಿವು ಮೂಡಿಸೋಣ ಬನ್ನಿ. ನಮ್ಮ ಜನರನ್ನು ಹಿಂದಿ ಮತ್ತು ಇಂಗ್ಲಿಷ್ ಮೂಲಕ ತಲುಪಬಹುದು ಎಂಬ ತಪ್ಪು ಕಲ್ಪನೆ ಇವರಿಂದ ಹೋಗಲಾಡಿಸೋಣ.
ಈ ನಿಟ್ಟಿನಲ್ಲಿ ಬ್ರಿಟಾನಿಯಾಗೆ ನಿಮ್ಮ ಸಲಹೆಯನ್ನು ಇಲ್ಲಿ ಬರೆಯಿರಿ: http://www.britannia.co.in/talktous.htm

Rating
No votes yet

Comments