ವರ್ತೂರಣ್ಣನ ವರಾತ

ವರ್ತೂರಣ್ಣನ ವರಾತ

ಬರಹ

ವರ್ತೂರು ಪ್ರಕಾಶ್‌. ಮಾಧ್ಯಮಗಳ ಪಾಲಿಗೆ ಫೈರ್‍ ಬ್ರಾಂಡ್‌. ಕೋಲಾರದ ಜನತೆಗೆ ಆಪದ್ಭಾಂದವ. ವತೂರು ಗ್ರಾಮ ಪಾಲಿಗೆ ವಂಚಕ. ಹೀಗೆ ಕೋಲಾರದ ಪಕ್ಷೇತರ ಶಾಸಕನಿಗೆ ಯಡಿಯೂರಪ್ಪ ಶಾಕ್‌ ನೀಡಿದೆ. ಸರ್ಕಾರದ ಈ ನಿರ್ಧಾರ ನಿರೀಕ್ಷಿತವಾದ್ರೂ ಪ್ರಕಾಶ್‌ರಿಗೆ ಅರಗಲು ಸ್ವಲ್ಪ ಕಾಲವಕಾಶ ಬೇಕೇ ಬೇಕು.

ಸರ್ಕಾರದ ಈ ನಿರ್ಧಾರ ಖುಷಿ ನೀಡಿರೋದು ಮಾಜಿ ಸಚಿವ ಎ. ಕೃಷ್ಣಪ್ಪಗೆ. ಇದಕ್ಕೂ ಹೆಚ್ಚಿನ ಪರಮಾನಂದ ಆಗಿದೆ ಹೊಡಕೋಟೆ ಮಾಜಿ ಶಾಸಕ ಎಂಟಿಬಿ ನಾಗರಾಜ್‌ ಅವರಿಗೆ. ಯಾಕೆಂದ್ರೆ, ಮೂಲತಃ ವರ್ತೂರು ಇವರ ಗರಡಿಯಲ್ಲಿ ಪಳಗಿ ಬಂದಿರೋದು. ಅದ್ರಲ್ಲೂ ಎಂಟಿಬಿ ಜೊತೆ ಗಳಸ್ಯ-ಕಂಠಸ್ಯ ನಂಟಸ್ಥಕ್ಕೆ ಮಾರಕವಾಗಿದು ಇವನ(ರ) ವಂಚನೆ ಮತ್ತು ಮಿತ್ರ ದ್ರೋಹ. ಎಂಟಿಬಿ ಹೇಳಿ ಕೇಳಿ ಉದ್ಯಮಿ. ಧಶಕಗಳ ಕಾಲ ಇಟ್ಟಿಗೆ ಉದ್ಯಮದಲ್ಲಿ ಸಾಕಷ್ಟು ದುಡಿದವರು. ನೂರಾರು ಎಕರೆ ಜಮೀನು, ಕೋಟ್ಯಾಂತರ ರೂಪಾಯಿ ಸಂಪಾದ್ನೆ ಮಾಡಿದ್ದು ಇದೇ ಬಿಜಿನೆಸ್‌ನಿಂದ.

ಹಾಲು ಕುಡಿದಷ್ಟು ಖುಷಿ ಆಗಿರೋದು ಎ, ಕೃಷ್ಣಪ್ಪಗೆ. ಒಂದು ಕಾಲದ ಮಿತ್ರ. ಆಮೇಲೆ ಭಯ ಕಾಡಲಾರಂಭಿಸಿತು ಕೃಷ್ಣಪ್ಪರಿಗೆ. ವರ್ತೂರು ವಿಧಾನ ಸಭಾ ಕ್ಷೇತ್ರದ ಪ್ರತಿನಿಧಿಯಗಿದ್ದಾಗ ಮತಗಳಿಕೆಗೋಸ್ಕರ ಕೃಷ್ಣಪ್ಪ ಅವಲಂಬಿಸಿದು ಇದೇ ವರ್ತೂರು ಪ್ರಕಾಶ್‌ನನ್ನು. ಸಮಾಜದ ಮಟ್ಟಿಗೆ ಆಗ ತಾನೆ ತಲೆ ಇಡುತ್ತಿದ್ದ ವರ್ತೂರು ಬೀಡು ಬೀಡು ವರ್ತನೆ ಮತಗಳಿಸಲು ಅನುಕೂಲ ಆಗುತ್ತೆ ಅನ್ನೋದಾಗಿತ್ತು ಕೃಷ್ಣಪ್ಪರದ್ದು. ದಶಕಗಳ ಕಾಲ ಒಟ್ಟಿಗೆ ಕೆಲಸ ಮಾಡಿ ರಾಜಕೀಯದಲ್ಲಿ ವರ್ತೂರು ಪಳಗುತ್ತಿದ್ದಾಗ ಕ್ರಮೇಣ ಕಣ್ಣು ಕೆಂಪಾಯ್ತು ಕೃಷ್ಣಪ್ಪನಿಗೆ.

ಇದಕ್ಕೂ ಕಾರಣವೂ ಇಲ್ಲದಿಲ್ಲ. ಅಷ್ಟರಲ್ಲಿ ಸಾಕಷ್ಟು ಪ್ರಭಾವಿ ನಾಯಕನಾಗಿ ಬೆಳೆದಿದ್ದ ಪ್ರಕಾಶ್‌. ತನ್ನಧೇ ಆದ ಸಮಾಜ (ಕುರುಬ)ದಲ್ಲಿ ಗಣ್ಯ ವ್ಯಕ್ತಿಯಾಗಿದ್ದ ದುಡ್ಡು ಚೆಲ್ಲಿ. ಮದುವೆ, ಮುಂಜಿ ಇನ್ನಿತರ ಕಾರ್ಯಕ್ರಮಗಳಿಗೆ ದುಡ್ಡಿನ ಹೊಳೆ ಹರಿಸಿದ್ದ. ಅದುವೇ ಎಂಟಿಬಿ ಮಿತ್ರನಾಗಿಸಿದ್ದ ಪ್ರಕಾಶಣ್ಣನನ್ನು. ಕೆರೆಕುಂಟೆ, ಗೋಮಾಳ ಸೇರಿದಂತೆ ಸರ್ಕಾರಿ ಜಮೀನುಗಳನ್ನು ಲಪಟಾಯಿಸಲು ಅನುವು ಆಗಿದ್ದ ವರ್ತೂರು, ನೂರಾರು ಎಕರೆ ಲೇಔಟ್‌ಗಳ ಮೂಲಕ ಕೃಷ್ಣಪ್ಪ ಹಾಗೂ ತಮ್ಮ ಗೋಪಾಲನಿಗೂ ಕೋಟಿಗಟ್ಟಲೆ ಹಣ ಹರೀತು. ಕ್ರಮೇಣ ಕೃಷ್ಣಪ್ಪರ ಬುಡಕ್ಕೆ ಕೈ ಹಾಕಿದ. ಹೇಂಗೆಂದ್ರೆ, ವರ್ತೂರು ಕ್ಷೇತ್ರಕ್ಕೆ ನಾನೆ ಕಾಂಗೈ ಅಭ್ಯಥಿ‌ð ಅಂತ ಸ್ನೇಹಿತರ ಬಳಿ, ಹೋದಲೆಲ್ಲಾ ಗುನುಗಲಾರಮಭಿಸಿದ. ಇದ್ರಿಂದ ಕೃಷ್ಣಪ್ಪ ನನಗೊಬ್ಬ ಪ್ರತಿಸ್ಪರ್ಧಿ ರೂಪುಗೊಂಡ ಅಂತ ಒಳಗೊಳಗೆ ಬೇಯುತ್ತಿದ್ದ. ಆ ಮಟ್ಟದಲ್ಲಿ ಕಾಂಗ್ರೆಸ್‌ ಮುಖಂಡನಾಗಿ ಬೆಳೆಯುತ್ತಿದ್ದ ಪ್ರಕಾಶ್‌. ಜಾಣ ಕೃಷ್ಣಪ್ಪ ದಾಳವೊಂದನ್ನು ಎಸೆದ.

ಅದು ಏನಪ್ಪಾ ಅಂದ್ರೆ ವರ್ತೂರುನ್ನು ನಿಧಾನವಾಗಿ ಒಂದೇ ಕೋಮಿನ ನಾಯಕರಾದ ಎಂಟಿಬಿಗೆ ಪರಿಚಯಿಸಿ ನಿಧಾನವಾಗಿ ಸ್ನೇಹ ಕಡಿದುಕೊಳ್ಳೋಕೆ ನಿಂತ. ಅಷ್ಟರಲ್ಲಿ ಚೆನ್ನಾಗಿ ತಿಂದು ತೇಗಿದ್ದ ವರ್ತೂರು ಹಣವನ್ನು ನೀರಿನಂತೆ ಚೆಲ್ಲಲಾರಂಭಿಸಿದ. ಅಲ್ಲದೆ, ಎಂಟಿಬಿ ವ್ಯವಹಾರದಲ್ಲಿ ಆಪ್ತನಾದ. ಕೊನೆಗೆ ಬಿರುಕು ಬಂತು ಇವರ ಸ್ನೇಹದಲ್ಲಿ. ಅಷ್ಟರಲ್ಲಿ ನೂರಾರು ಎಕರೆ ಜಮೀನು ಹೊಂದಿದ್ದ ಎಂಟಿಬಿ ಹೊಸದಾಗಿ ಖರೀದಿಸುತ್ತಿದ್ದ ಜಮೀನನ್ನೆಲ್ಲಾ ವರ್ತೂರು ಹೆಸರಿಗೆ ನೊಂದಾಯಿಸುತ್ತಿದ್ದ. ಇದರ ಸದುಪಯೋಗ ಪಡೆದ ವರ್ತೂರು ಕಡೆಗೊಮ್ಮೆ ನಾಗರಾಜನಿಗೆ ಸರಿಯಾಗಿ ಕೈ ಕೊಟ್ಟ. ಹೀಗಾಗಿ, ಕೃಷ್ಣಪ್ಪ ಹಾಗೂ ನಾಗರಾಜ್ ಇಬ್ರೂ ಇವನನ್ನು ದೂರವಿಟ್ರು.

ಇಷ್ಟೆಲ್ಲಾ ಆದ್ಮೇಲೆ ಬುದ್ದಿವಂತ ವರ್ತೂರು ಹೊಸ ಯೋಜನೆ ಮಾಡಿದ. ಕುರುಬರು ಹಾಗೂ ಮುಸಲ್ಮಾನರು ಹೆಚ್ಚಾಗಿರೋ ಕೋಲಾರದ ಕಡೆ ಗಮನ ಹರಿಸಿದ. ಚುನಾವಣೆಗಾಗಿ ಸಾಕಷ್ಟು ತಯಾರಿನೂ ಮಾಡ್ಕೊಂಡ. ವರ್ಷದ ಮೊದಲಿಂದಲು ಪ್ರಚಾರ ಆರಂಭಿಸಿದ ವರ್ತೂರು ಕಾಂಗ್ರೆಸ್ ಪಕ್ಷ ಟಿಕೆಟ್‌ ಕೊಡದಿದ್ದಾಗ ಪಕ್ಷೇತರನಾಗಿ ಅಖಾಡಕ್ಕಿಳಿದ. ಇದಕ್ಕೆ ಕೇಂದ್ರ ಸಚಿವ ಮುನಿಯಪ್ಪ ಕೂಡ ಹೆಲ್ಪ್ ಮಾಡಿದ ಅನ್ನೋದು ಬಹಿರಂಗ ಸತ್ಯ. ಕಡೆಗೆ ಶ್ರೀನಿವಾಸಗೌಡ ಕೈ ಪಕ್ಷದ ಅಧಿಕೃತ ಅಭ್ಯರ್ಥಿ ಆದ್ರೂ ಮಣ್ಣು ಮುಕ್ಕಿದ. ವರ್ತೂರು ಪ್ರಕಾಶ್‌ ಕೇಕೆ ಹಾಕಿದ.

ಅದೃಷ್ಟ ಖುಲಾಯಿಸಿದ್ದು ಇಲ್ಲಿ. ಚುನಾವಣೆ ಬಳಿಕ ಅತಂತ್ರ ಫಲಿತಾಂಶ ಬಂದಾಗ ಶುಕ್ರದೆಸೆ ಬಂತು. ಚಂಚಲ ಮನಸ್ಸಿನ ವರ್ತೂರು ಸುಮ್ಮನಿದ್ದಿದ್ರೆ ಮಂತ್ರಿಯೂ ಆಗ್ತಿದ್ದ. ಆದ್ರೆ, ಅವಿವೇಕಿ ಮಾಡಿದ್ದೇ ಬೇರೆ. ಸಿದ್ರಾಮಣ್ಣ ನಮ್ಮ ನಾಯಕ. ನಾನು ಅವರನ್ನು ಕೇಳಿ ಹೇಳ್ತೀನಿ ಅಂತ ಸಂಪರ್ಕೀಸಿದ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ. ಅಲ್ಲಿ ಅವನ ಅವಿವೇಕತನ ಪ್ರದರ್ಶನ ಆಯ್ತು ಅಂತಾರೆ ಕೆಲ ಮಂದಿ. ಅಲ್ಲದೆ, ಸಿದ್ದಣ್ಣ ಇವನ್ನು ಕರೆದು ಮುಠಾಳ ಕಳ್ಕೊಂಡೊಲ್ಲ ಗೂಟದ ಕಾರಿನ ಓಡಾಟ ಅಂತ ಉಗಿದಿದ್ದಾರೆ. ಆದ್ರೂ ಬಿಜೆಪಿಗೆ ಕೋರಂ ಪ್ರಾಬ್ಲಂ ಎದುರಾಗಿ ಬಾರಪ್ಪ ನಮ್ಮ ಬಗಲಿಗೆ ಅಂತ ಕರೆದು ರಾಜ್ಯ ಕೊಳಚೆ ಮಂಡಳಿ ನಿರ್ಮೂಲನ ಮಂಡಳಿ ಅಧ್ಯಕ್ಷರಾಗಿಸಿದ್ರು ಸಿಎಂ.

ಅಧಿಕಾರ ಬಂದ ಮೇಲೆ ಈ ಪುಣ್ಯಾತ್ಮನ ಚಂಚಲತೆಗೆ ಬ್ರೇಕ್ ಹಾಕಿಲ್ಲ. ನಾಲಗೆ ಹರಿದಂಗೆ ಬಿಟ್ಟ. ಸಿದ್ರಾಮಣ್ಣ ಜೊತೆ ಹೋರಾಡಿ, ಹೊಸ ಪಕ್ಷ ಕಟ್ತೀನಿ ಅಂತ ಅದ್ರ ನೇತೃತ್ವ ವಹಿಸ್ಕೊಂಡು ಊರೂರು ಅಲೆದ. ಸದಾ ಹೆಜ್ಜೆ ಹೆಜ್ಜೆಯಲ್ಲೂ ಬಿಜೆಪಿಗೆ ನುಂಗಲಾರದ ತುತ್ತಾಗಿದ್ದ. ಇದು ಸಿಎಂಗೆ ಗೊತ್ತಿದ್ರೂ ಸುಮ್ಮನಿದ್ರು. ಕಡೆಗೂ ಇವನ ಪಾಪದ ಕೊಡ ತುಂಬಿತ್ತು. ರಾಜೀನಾಮೆ ಕೊಡಿ ಅಂದ್ರೂ ಕೊಡಲ್ಲ ಅಂದನಂತೆ ಭಂಡ ಪ್ರಕಾಶಣ್ಣ. ನೀ ಕೊಡದಿದ್ರೆ ಪರವಾಗಿಲ್ಲ ಅಂತ ಸರ್ಕಾರವೇ ಕಿತ್ತು ಹಾಕಿದೆ. ಈ ಮೂಲಕ ೧ ವರ್ಷದ ಪ್ರಕಾಶನ ತಿಕ್ಕಲುತನಕ್ಕೆ ಕೊಕ್ಕೆ ಬಿದ್ದಿದೆ. ಒಟ್ನಲ್ಲಿ ನಾನೇ ಬೇರೆ.. ನನ್ನ ಸ್ಟೈಲೇ ಬೇರೆ ಅಂತ ಮೆರದಾಡಿದ ವರ್ತೂರಣ್ಣ ಕಡೆಗೂ ಗೊತ್ತಿಲ್ಲದಂಗೆ ಬಿಸಿ ಉಸಿರು ಬಿಟ್ಟ. ಅಯ್ಯೋ ಹೋಯ್ತಲ್ಲಾ ಅಧಿಕಾರ ಅಂತ ಕೊರಗಿದ್ದಾನೆ. ಆದ್ರೂ ಹಣದ ಮುಂದೆ ಇದರ ಪ್ರಖರತೆ ಕ್ಷೀಣವೇ ಸರಿ.

ಸೋ ಸ್ಯಾಡ್‌ ಪಕಾಸಣ್ನ. ಬೆಸ್ಟ್‌ ಅಫ್‌ ಲಕ್‌ ನೆಕ್ಸ್ಟ್‌ ಟೈಮ್‌. ಸಿದ್ರಾಮಣ್ಣು ಎನಾದ್ರು ಮುಂದೆ ಸಿಎಂ ಆದ್ರೆ, ನೀ ಕಾಂಗ್ರೆಸ್‌ಗೆ ಸೇರಿದ್ರೆ ನಿನಗೆ ಗೂಟದ ಕಾರು ಸಿಗ್ಬೋದು..

- ಬಾಲರಾಜ್ . ಡಿ. ಕೆ