ಜಲ್ದಾನ... ಜಲ್ದಾನ

Submitted by bhavanilokesh mandya on Thu, 06/18/2009 - 11:47

ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆವು ಮದುವೆಯ ಸಮಾರಂಭವೊಂದಕ್ಕೆ. ನನ್ನ ನಾಲ್ಕು ವರ್ಷದ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದೆ. ಮದುವೆ ಮುಗಿಸಿ ಊರಿಗೆ ಹೋದನಂತರ ಒಂದು ದಿನ ಮಗಲ ಬಾಯಲ್ಲಿ ಜಲ್ದಾನ... ಜಲ್ದಾನ ಅನ್ನುವ ಪದವನ್ನು ಕೇಳಿದೆ. ಏನಿದು ??? ನನಗೆ ಕುತೂಹಲ ತಡೆಯಲಾಗಲಿಲ್ಲ. ಅವಳನ್ನೇ ಕೇಳಿದೆ .ಏನ್ ಹೇಳ್ತಿದ್ದೀ ಪುಟ್ಟಾ ಅಂತ... ಅವಳು ಹೇಳಿದ್ದು ಹೀಗೆ.. " ಅಮ್ಮಾ ನಾವು ಟ್ರೇನಲ್ಲಿ ಹೋಗಿದ್ವಲ್ಲಾ ಅದು ಜಲ್ದಾನ... ಜಲ್ದಾನ ಅಂತ ಶಬ್ಧ ಮಾಡ್ತಿತ್ತು ! ಅಂದ್ಲು. ಅವಳು ಆ ರೈಲಿನ ಗಾಲಿಗಳ ಉರುಳುವಿಕೆಯನ್ನ ಅಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಳು. ನೀವೂ ಒಮ್ಮೆ ಕಣ್ಣು ಮುಚ್ಚಿ ಆ ಪದಗಳನ್ನು ಹೇಳಿಕೊಳ್ಳಿ. ಅದು ನಿಜ ಅನ್ಸುತ್ತಲ್ವೇ? ನನಗೆ ಆಶ್ಚರ್ಯ ಮಗಳ ಗಮನಿಸುವಿಕೆಯ ಬಗೆಗಿನದು. ಇಷ್ಟೂ ದಿನ ನಾವು ದೊಡ್ಡವರು ಹೇಳಿಕೊಟ್ಟ ಚುಕುಬುಕು ರೈಲು ಅಂತಲೇ ತಿಳಿದಿದ್ದೆವೇ ಹೊರತು, ಅದನ್ನೆಂದೂ ಸೂಕ್ಷ್ಮವಾಗಿ ಗಮನಿಸಿರಲಿಲ್ಲ. ಇವತ್ತಿನ ಪೀಳಿಗೆಯ ಮಕ್ಕಳಲ್ಲಿರುವ ಗ್ರಹಿಕೆಯ ಬಗ್ಗೆ ಹೆಮ್ಮೆಯುಂಟಾಯ್ತು. ಇದು ಅಂತ ವಿಶೇಷವಾದ ವಿಷಯ ಅಲ್ಲದಿರಬಹುದು. ಸುಮ್ನೆ ನಿಮಗೆ ಹೇಳ್ಬೇಕನ್ನಿಸ್ತು.

Rating
No votes yet