ಮೂರುಲೋಕದೊಳಗಿನ ಮುಂಗಾರುಮಳೆ...

ಮೂರುಲೋಕದೊಳಗಿನ ಮುಂಗಾರುಮಳೆ...

ಮೊನ್ನೆ ಒಂದು ದಿವಸ ತುಂಬಾ ಕೆಲಸವಿದ್ದ ಕಾರಣ, ಸ್ವಲ್ಪ ಲೇಟಾಗಿ ಆಫೀಸ್ ಬಿಟ್ಟೆನು. ಜೊತೆಗೆ ಕುಲಕರ್ಣಿಯವರು ಇದ್ದರು. ಸಾರೀ ನಾನು ಕುಲಕರ್ಣಿಯಲ್ಲವಾ ಹೆಸರು ಹೇಳುತ್ತೇನೆ. ಸಂಜೀವ ಅಂತ, ಅವರು ನಮ್ಮ ಕೇರಿಯವರೇ ... ಸಾರೀ... ಊರಿನವರು ಮತ್ತು ಏರಿಯಾದವರು ಕೂಡ . ಧಾರವಾಡದವರಿಗೆ ಪ್ರಾಸಬದ್ದವಾಗಿ ಮಾತನಾಡುವದು ಸಹಜ ವಿಚಾರ . ಪ್ರಾಸವೆಂದ ಮೇಲೆ ಹಳೆಯ ಸ್ವಲ್ಪ ವಿಚಾರಗಳನ್ನು ಹೇಳ ಬಯಸುತ್ತೇನೆ. ಒಂದು ದಿವಸ ನನ್ನ ಗೆಳೆಯ ಏನೋ ಹುಡುಗಿ.. ಗಿಡುಗಿ.. ನೋಡಿದಿ ಏನೋ ಎಂದ(ಮದುವೆಗ್ರಿ). ಹುಡಿಗಿನ ನೋಡಿದ್ದೇನೆ ಗಿಡುಗನ್ನ ಬೇಕಾದರೆ ನಿನಗೆ ಕೊಡಿಸ್ತೀನಿ Ok ನಾ ... ಎನ್ದೆ ತುಂಬಾ ಕೊಪಿಸ್ಕೊಂಡ. ಹಾಗೇ ತಮಾಷೆಗೆ ಅಂತ ಸಮಾಧಾನ ಮಡಿ Gee party ಕೊಡಿಸಿದೆ , ಮತ್ತೆ ಕ್ಷಮಿಸಿ Tea Party. ಮತ್ತೊಂದು ದಿನ ಅತ್ತೆ ಮನೆಗೆ ಹೋಗುತ್ತಾ ಇದ್ದ್ವಿ ಪೇಡ , ಗಿಡ ತೊಗೊಂಡು ಹೋಗೋಣ ಎಂದರು ನನ್ನ ತಾಯಿ. ಅವರ ಮನೇಲಿ ಗಿಡ ತಿನೋಲ್ಲ ಅಂತೆ , ಪೇಡ ಏನೋ ತೊಗೊಂಡು ಹೋಗಬಹುದು, ಆದ್ರೆ ಎಲ್ಲರಿಗು ಸಕ್ಕರೆ ಕಾಯಿಲೆ, ಯಾಕೆ ಸುಮ್ಮನೆ ದುಡ್ಡು ವೇಸ್ಟ್ ಹಾಗೆ ಹೋಗೋಣ ಅನ್ದೆ. ನನ್ನ ತಾಯಿಯ ಪಿತ್ತ ನೆತ್ತಿಗೇರಿತ್ತು ಅದು ಪದ್ಧತಿ ಕಣೋ ಎಂದರು . ನನ್ನ Purseಗೆ 200 ರೂಪಾಯಿಗಳ ಕತ್ತರಿ ಬಿತ್ತು .

ಮತ್ತೆ ವಿಷಯಕ್ಕೆ ಬರೋಣ , ಅವತ್ತಿನ ಟ್ರಾಫಿಕ್ ತುಂಬಾ ಜೋರಾಗೆ ಇತ್ತು. ಆದರು ಕುಲಕರ್ಣಿಯವರಿಗೆ ಏನೋ ಅರ್ಜೆಂಟ್ ಇತ್ತೋ ಗೊತ್ತಿಲ್ಲ ಸಂದಿಗೊಂದಿ ಇಂದ ಗಾಡಿ ಓಡಿಸಿ ನೋಡುವಸ್ಟರಲ್ಲೇ ಮಾಯವಾಗಿಬಿಟ್ಟಿದ್ದರು. ನಾನು petrol, desiel ಗಳ ಸುವಾಸನೆಗಳ್ಳನ್ನು ಸವಿಯುತ್ತ ಸಾಗಿದ್ದೆ. ಸುರ್ರ .... ಎಂದು ಆಟೋಗಳು ಸಹ ನನ್ನ ಹಿಂದಿಕ್ಕಿ ಹೋಗಿದ್ದವು. ಆಗಲೇ ಯೋಚನೆ ಬಂದಿದ್ದು, ಅಭಿಮನ್ಯುವಿಗೆ ಏನಾದರು ಬೇ೦ಗಳೂರಿನಲ್ಲಿ ಡ್ರೈವ್ ಮಾಡಿ Practice ಇದ್ದರೆ , ಚಕ್ರವ್ಯೂಹವನ್ನು easy ಯಾಗಿ ಭೆಧಿಸುತ್ತಿದ್ದ ಅಂತ. ತುಂಬಾ ಮೋಡ ಕವಿದಿದ್ದರಿಂದ ನನಗು ಸ್ವಲ್ಪ ಬೇಗನೆ ಹೋಗಬೇಕೆಂದು ಅನಿಸಿ, Accelerator ತಿರುವಿದೆ ಅದು ನನ್ನ Accelerator ಅಥವಾ ಸೈಡ್ ನಲ್ಲಿರುವ ಹುಡುಗಿ Accelerator ಗೊತ್ತಾಗಲಿಲ್ಲ . ಅವಳು ಸಹ ನನ್ನನ್ನು ಹಿಂದಿಕ್ಕಿ ಹೋಗಿದ್ದಳು. ಇರಲಿ ಇದು ನನ್ನ Bike "ಹಣೆ ಬರಹ " ಇದನ್ನು ಚೇಂಜ್ ಮಾಡಲಾಗುವದಿಲ್ಲವೆಂದು ಸ್ವಲ್ಪ ದೂರ ಹೋಗುತ್ತಿದ್ದ ಹಾಗೆ ಮಳೆರಾಯ ಜೋರಾಗಿ ಬರತೊಡಗಿದ. ತೋಯಿಸಿಕೊಂಡು ಹೋಗುವದು ಇಷ್ಟವಿರಲಿಲ್ಲ ಒಂದು ಮರದ ಕೆಳಗೆ ಹೋಗಿನಿಂತೆ . ಆಗಲೇ Bike ಗೆ ಚರಂಡಿಯ ನೀರಿನಿಂದ ಸ್ನಾನವಾಗಿತ್ತು , Mostly ಚರಂಡಿಗೆ ಗೊತ್ತಿರಬೇಕು, ಈ ನನ್ನ ಮಗ Bike ನ್ನ ಎಷ್ಟು ದಿನಗಳ ಹಿಂದೆ Clean ಮಾಡಿದ್ದು ಅಂತ. ಮೇಲಿಂದ ಕಾಗೆ ,ಗುಬ್ಬಿ ಗಳು ಸೂಸು ಮಾಡಿದವೋ , ಅಥವಾ ಮಳೆಹನಿಗಳು ಮರದಿಂದ ನನ್ನನ್ನು ಸ್ನಾನ ಮಾಡಿಸಿದಾಗ ನನ್ನ Bike ಗೆ ಸಮಾಧಾನವಗಿರಬೇಕು , ನನ್ನನ್ನು ನೋಡಿ ನಗಹತ್ತಿತ್ತು (ನೀರಿನ ರಭಸದಿಂದ ನನ್ನ ಕಡೆಗೆ ಬೈಕ್ ಸರಿದಿತ್ತು ).ಸ್ವಲ್ಪ ಮಳೆ ನಿಂತ ಮೇಲೆ Bike ಸ್ಟಾರ್ಟ್ ಮಾಡಹತ್ತಿದೆನು . Bike ನಖರಾ ಮಾಡಲು ಶುರು ಮಾಡಿತ್ತು . ಚೆನ್ನಾಗಿ ಮಳೆ ಮತ್ತು ಚರಂಡಿ ನೀರಿನಿಂದ ಮಿಂದ Bike ಚಳಿಯಿಂದ ನಡುಗಲಾರಮ್ಬಿಸಿತ್ತು. ಬಟ್ಟೆಯಿಂದ ಚೆನ್ನಾಗಿ ಕ್ಲೀನ್ ಮಡಿ ಕಿಕ್ ಹೊಡೆದು Bike ಸ್ಟಾರ್ಟ್ ಮಾಡಿ ಹೊರಟೆ. ನನ್ನ ಕಿಕ್ಕ್ಗೆ ನಶೆ ಏರಿದ ಕುಡುಕನಂತೆ ಹೊರಟಿತ್ತು . ಸ್ವಲ್ಪ ದೂರ ಹೋಗುವಸ್ಟರಲ್ಲೇ ನನಗೆ ಪಾತಾಳ ಲೋಕದ ದರ್ಶನವಾಗಿತ್ತು , ನೀರಿದ್ದರಿಂದ ಗೊತ್ತಾಗದೆ ತೆಗ್ಗಿನಲ್ಲಿ Bike ಓಡಿಸಿದ್ದೇ . "ಬದುಕಿದೆಯಾ ಬಡಜೀವವೇ " ಎಂದು ಶ್ರೀರಾಮನನ್ನು ಮನಸ್ಸಿನಲ್ಲಿ ನೆನಸಿಕೊಂಡೆನು.( ನಾನೊಬ್ಬನೇ ಏಕೆ ನೆನೆಯಬೇಕು ನೀವೇ ಹೇಳಿ ? ನನ್ನ ಪ್ರೀತಿಯ ಶ್ರೀರಾಮನು ನೆನೆಯಲಿ ಎಂದು ). ಮತ್ತೆ ಸ್ವಲ್ಪ ದೂರ ಹೊಗುವಸ್ಟರಲ್ಲಿ ನನಗೆ ಸ್ವರ್ಗ ಲೋಕದ ದರ್ಶನ ಆಯಿತು. ಇದೇನಪ್ಪ, ಇದು ಎಲ್ಲ ಲೋಕಗಳ ಇವತ್ತೇ ದರ್ಶನ ಭಾಗ್ಯ ಸಿಗಬೇಕೆ ಎಂದುಕೊ೦ಡೆನು. ತಿರುಗಿ ನೋಡಿದಾಗೆ ತಲೆಯಲ್ಲಿ ನಕ್ಷತ್ರಗಳೇ ಓಡಾಡಿದವು ಅದು ದೊಡ್ಡದಾದ ನರಕಸದ್ರಶವಾದ "Hump". ಇರಲಿ ತೋಯಿಸಿಕೊಂಡು ಹೋದರು ಪರವಾಗಿಲ್ಲ ಸ್ಲೋ ಆಗಿಯೇ ಹೋಗೋಣ ಎಂದು ಹೊರಟು ಮನೆ ತಲುಪಿದೆ.

ಮನೆಗೆ ಹೋದ ತಕ್ಷಣ ನನ್ನ ಮಗ ನನ್ನ ಅವಸ್ಥೆ ನೋಡಿ ಅಪ್ಪ "ಚಂದಮಾಮ ಸೂಸು" ಎಂದ . ನಾನು ತಮಾಷೆಗೆ ರಾತ್ರಿ ಮಳೆ ಹುಯಿದರೆ ಚಂದಮಾಮ ಸೂಸು ಮಾಡುವನೆಂದು ಮತ್ತೆ ಬೆಳಿಗ್ಗೆ ಮಳೆ ಹುಯಿದರೆ ಸೂರ್ಯ ಸೂಸು ಮಾಡುವನೆಂದು ಹೇಳುತ್ತಿದ್ದೆ . ಆಗ ಅನ್ನಿಸಿತು ಇನ್ನು ಸ್ವಲ್ಪ ಹೊತ್ತೆನಾದರೂ ನಿಂತಿದ್ದರೆ ಭೂಮಿ ಮಾಮಿ ನು ಸೂಸು (ಚರಂಡಿ ನೀರಿನಿಂದ ) ಮಾಡುತ್ತಿದ್ದಳು ಎಂದು.

ಹೇಗಿದ್ದರೂ ತೊಯಿಸ್ಕೊಂಡು ಹೋಗಿದ್ದರಿಂದ ಹಾಗೆ ಸ್ವಲ್ಪ ಸೋಪ್ ಉಜ್ಜಿ Clean ಗೊಂಡು ಸೋಫಾ ಮೇಲೆ ವಕ್ಕರಿಸಿದೆ. ಸ್ವಲ್ಪ ನ್ಯೂಸ್ ನೋಡೋಣ ವೆಂದು Tv ಹಾಕಿದಾಗ "ಅಭಿಷೇಕ್" ಎನ್ನುವ ಹುಡುಗನ ನ್ಯೂಸ್ ತೋರಿಸುತ್ತಿದ್ದರು. ಅವನು ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ . ಗಂಟಲು ಗದ್ಗತಿತವಾಗಿ ಕರಳು ಕಿತ್ತು ಬಂದ ಹಾಗೆ ಅನ್ನಿಸಿ ಸಂಕಟ ತಡಿಯೋಕಾಗದೆ ಚಾನೆಲ್ ಚೇಂಜ್ ಮಾಡಿದೆ. U2 ನಲ್ಲಿಯ ಹಾಡು ತುಂಬಾ ಇಂಪಾಗಿ ಬರುತ್ತಾ ಇತ್ತು "ಹಳೆ ಪಾತ್ರೆ , ಹಳೆ ಕಬ್ಬಿಣ ......ಭೂಮಿನ ಭಾಡಿಗೆ ಕೊಡು". ಭೂಮಿ ಬಿಟ್ಟು ಹಾಕಿ , ಬೆ೦ಗಳೂರೆನಾದ್ರು ಸಿನಿಮಾದವರು ಭಾಡಿಗೆ ಕೇಳಬೇಕ್ಕಿತ್ತು ಅನ್ನಿಸಿತು. ಈ ಹಾಡಿನ ಹಾಗೆ ಚೆನ್ನಾಗಿ Maintain ಮಾಡುತ್ತಿದ್ದರೋ ಏನೋ ಅನ್ನಿಸಿತು .

ಆಮೇಲೆ ಫೋನ್ ಮಾಡಿ ಸಂಜೀವ ಅವರಿಗೆ ಕೇಳಿದಾಗ ಗೊತ್ತಾಯಿತು Signal Cross ಮಾಡುವಾಗ Traffic Police ಮಾವನ ಕಡೆ ಸಿಕ್ಕು 100 ರೂಪಾಯಿಗಳ ಪ್ರಸಾದ ಕೊಟ್ಟಿದ್ದಾರೆಂದು .ನಾನೇ ಪರವಾಗಿಲ್ಲ ಎಂದು ನನ್ನ ಮಮತೆಯ ಮಡದಿ ಮಾಡಿದ ಹೊಸರುಚಿಯನ್ನು ಸವಿಯುತ್ತ ನಿದ್ದೆಗೆ ಜಾರಿದೆ..
(Note:ನಿಮಗೂ ನನ್ನ ಹೆಂಡತಿಯ ಹೊಸರುಚಿಯೇನಾದ್ರು ಸವಿಯಬೇಕೆನ್ದಿದ್ದರೆ ಮಡದಿ ಹಾರಿಸಿದ Missile..... ಎಂಬ ನನ್ನ Article ಓದಿ).

Rating
No votes yet