ನೀನೆಲ್ಲಿ?

ನೀನೆಲ್ಲಿ?

ಸುತ್ತಲೂ ಸುಳಿದರು ಗಾಳಿ
ಉಸಿರು ಕಟ್ಟಿತು ಕೇಳಿ
ನನ್ನವಳಿಲ್ಲದ ಜಗದಲ್ಲಿ.

ಮರುಭೂಮಿ ನೆಲದಲ್ಲಿ
ಮಲೆನಾಡ ತಂಪು
ನನ್ನವಳು ಜೊತೆಯಲ್ಲಿ
ಕೈ ಹಿಡಿದು ನಡೆವಾಗ.

ಪಾರ್ಕಿನಲ್ಲಿಯ ಬೆಂಚುಗಳು
ಮನೆಯ ಸೂರಿನ ಹಂಚುಗಳು
ಕೇಳುವವು ನನ್ನನ್ನು
"ಅವಳೆಲ್ಲಿ? "ಯೆಂದು.
ಮನೆಯ ಗೋಡೆಗಳು
ನಕ್ಕು ಹೇಳುವವು
ಅವಳಿಲ್ಲದ ನೀನು "ಶೂನ್ಯ "
ಬೀಸುವ ಗಾಳಿಗೂ ಗೊತ್ತು
ನಿನ್ನ ಇರುವಿನ ಅರಿವು
ಇಲ್ಲದಿದ್ದರೆ ಬಿಸಿಗಾಳಿ
ಇದ್ದರೆ ತಂಗಾಳಿ.

ಹಬ್ಬದ ಹೋಳಿಗೆ
ಮನೆಯ ಮಾಳಿಗೆ
ಮನೆಯಲ್ಲಿರುವ ಪುಸ್ತಕ
ನನ್ನಲ್ಲಿರುವ ಮಸ್ತಕ
ಎಲ್ಲವೂ ಕೇಳುವವು ನಿನ್ನನ್ನ.

ನೀ ನೋಡಿಕೊಳ್ಳುವ ಕನ್ನಡಿ
ಕೇಳುವದು ನನ್ನ
ತನ್ನ 'ಪ್ರತಿಬಿಂಬ' ಎಲ್ಲೆಂದು?
ಎಲ್ಲರೂ ಕೇಳುವರು
ನಾನೂ ಕೇಳುತಿಹೆ
ನೀನೆಲ್ಲಿ? ನೀನೆಲ್ಲಿ ?

Rating
No votes yet