ಹೃದಯದ ಭಾವ

Submitted by makrumanju on Fri, 06/19/2009 - 09:47
ಹೃದಯದ ಭಾವನೆ ಅರಳಿ
ಪ್ರೀತಿಯ ಕಡಲು ಉಕ್ಕುತ್ತಿದೆ
ಕನಸಿನ ಪ್ರೀತಿಯ ಹಕ್ಕಿ
ಎದೆಯ ಗೂಡಲಿ ಅವಿತಿದೆ
ಬಂಧವ ಬೆಸೆಯುವ ಪ್ರೀತಿ
ಕಣ್ಣಿಗೆ ಲೋಕವ ಮರೆಮಾಡಿದೆ
 
ಪ್ರೀತಿಯ ಸಿಂಚನ ಮಿಡಿದು
ಮನದ ಹಕ್ಕಿ ಹಾರುತ್ತಿದೆ
ಬದುಕಿನ ಅಲೆಗಳು ಕಲೆತು
ಪ್ರೀತಿಯ ಸಾಗರವ ಸೃಷ್ಟಿಸಿವೆ
ಕನಸಿಗೆ ಚೈತನ್ಯ ಮೂಡಿ
ಮನಸಿನ ಭಾರ ಕರಗುತ್ತಿದೆ
 
ಎದೆಯ ಬಾಂದಳದ ತೋಟದಲ್ಲಿ
ಬಣ್ಣ ಬಣ್ಣದ ಹೂವುಗಳು ಅರಳುತ್ತಿವೆ
ಜೀವದೊಳಗಿನ ಮೌನ ಮುರಿದು
ಪ್ರೀತಿಯ ನುಡಿಯ ಹಾಡುತ್ತಿವೆ
ಬಾಳಿನ ಕತ್ತಲ ಬಾನಿನಲ್ಲಿ
ಸುಂದರ ನಕ್ಷತ್ರ ಮಿನುಗುತ್ತಿದೆ.
 
- ಮಾ.ಕೃ.ಮಂಜು  
Rating
No votes yet

Comments