ಕಪಿಯಿಂದ 8 ಪ್ಯಾಕ್ಸ್ ವರೆಗೂ ರೂಪಾಂತರಗೊಂಡ ಹನುಮಂತ

Submitted by manjunath s reddy on Fri, 06/19/2009 - 22:40

ರಾಮಾಯಣದ ಒಂದು ಸನ್ನಿವೇಶ.... ಸೀತೆಯನ್ನು ಹುಡುಕುತ್ತಾ ಬಂದ ಕೋತಿಗಳ ಗುಂಪು ರಾಮೇಶ್ವರದ ಬಳಿಯ ಸಮುದ್ರ ತೀರಕ್ಕೆ ಬರುತ್ತದೆ. ಅಲ್ಲಿಂದ ಸೀತೆಯನ್ನು ಹುಡುಕಲು ಅವರು ಸಮುದ್ರವನ್ನು ದಾಟಬೇಕಾಗುತ್ತದೆ. ಆಗಿನ್ನೂ ಫ್ಲೈಟು, ಗ್ಯಾಸ್ ಬಲೂನು, ಹೆಲಿಕಾಪ್ಟರು ಇರಲಿಲ್ಲವಾದ್ದರಿಂದ ಅವರು ಯಾವುದೇ ಸಹಾಯವಿಲ್ಲದೇ ದಾಟಬೇಕಾಗಿರುತ್ತದೆ. ನೀರಲ್ಲಿ ಹೋಗೋದಿಕ್ಕೆ ಅವರಿಗೆ ದೋಣಿಯ ಐಡಿಯಾ ಇನ್ನೂ ಬಂದಿರಲಿಲ್ಲವೇನೊ... ಅಷ್ಟು ದೂರ ಈಜಿ ಗಿನ್ನಿಸ್ ರೆಕಾರ್ಡ್ ಮಾಡೋ ಐಡಿಯಾನೂ ಇರ್ಲಿಲ್ಲವೇನೋ.

ಇನ್ನೇನು ಮಾಡೋದು ಅವರೆಲ್ಲಾ ಮರದಿಂದ ಮರಕ್ಕೆ ಹಾರೋ ತಮ್ಮ ವಂಶಪಾರಂಪರ್ಯ ವಿದ್ಯೆಯನ್ನೆ ನಂಬಿಕೊಳ್ಳಬೇಕಾಯ್ತು. ಆದ್ರೆ ಅವರಿಗೆ ಮರದಿಂದ ಮರಕ್ಕೆ ಹಾರೋಕ್ಕೆ ಬರುತಿತ್ತೇ ಹೊರತು ಸಮುದ್ರಗಳನ್ನಲ್ಲಾ... ಸರಿ ತುಂಬಾ ಚಿಂತೆಯಲ್ಲಿದ್ದ ಅವರಲ್ಲಿ ಸ್ವಲ್ಪ ಬುದ್ದಿವಂತನಾದ ಹಿರಿ ಕಪಿಗೆ ಸಡನ್ನಾಗಿ ನೆನಪಿಗೆ ಬಂತು... ಅದೇನೆಂದರೆ ಮಾನವನ ಗುಣವುಳ್ಳ ಕಪಿಯೊಂದು ನಮ್ಮಲ್ಲಿದೆಯಲ್ಲಾ ಅದನ್ನೇ ಹಳ್ಳಕ್ಕೆ ನೂಕಿದರೆ ಹೇಗೆ ಅಂತ.

ದಾಟಿದರೆ ನಮ್ಮ್ ಲಕ್ಕು, ಇಲ್ಲಾಂದ್ರೆ ಬ್ಯಾಡವಾದ ಲಕ್ಕು.
ಸರಿ ಕುರಿನ ಹಳ್ಳಕ್ಕೆ ನೂಕೋ ಪ್ರೋಗ್ರಾಮು ಶುರುವಾಯಿತು... ಆ ಕುರೀನೆ ಹಳ್ಳಕ್ಕ್ ಬೀಳಿಸೋದಿಕ್ಕೆ ಕಾರಣ ಅವನಲ್ಲಿ ಮಾನವನ ವಿಶೇಷ ಅಂಶ ಇದ್ದಿದ್ದು. ಅದೇನೆಂದರೆ ಸ್ವಲ್ಪ ಗಾಳಿ ಪಂಪ್ ಮಾಡಿದ್ರೂ ಸಾಕು ಫುಲ್ ಉಬ್ಬೋಗೋದು.ಅದು ಸರಿಯಾಗೇ ವರ್ಕೌಟ್ ಆಯ್ತು.. ಆ ಕಪಿ ಹನುಮಂತನಾಗಿ ಸಮುದ್ರ ದಾಟೇ ಬುಟ್ಟ...

ಅದಾದ ನಂತರ ಆ ಕಪಿ ಮತ್ತೆ ಹನುಮಂತನಾಗೋದಿಕ್ಕೆ ಸತತ ಮೂರು ಯುಗಗಳೇ ಬೇಕಾಯ್ತು. ಅಂದರೆ ಈಗಿನ ಕಲಿಗಾಲದವರೆಗೂ ಕಾಯಬೇಕಾಯ್ತು... ರವಿವರ್ಮ, ಎಸ್.ಎಂ ಪಂಡಿತ್ ಹಾಗು ಚಂದಮಾಮ ಖ್ಯಾತಿಯ ಎಂ.ಟಿ.ವಿ.ಆಚಾರ್ಯ ರಂತಹ ಪಾಶ್ಚಿಮಾತ್ಯ ಶೈಲಿಯ ಅಂಗರಚನಾಶಾಸ್ತ್ರದ ಪ್ರಭಾವಿತ ಕಲಾವಿದರು ಬರುವವರೆಗೂ ಕಪಿಯಾಗೇ ಇದ್ದ ಈ ಹನುಮಂತ ಇವರಂತಹ ಕಲಾವಿದರು ಬಂದು ಇವನಲ್ಲಿದ್ದ ಮಾನವ ಗುಣಕ್ಕೆ ಮಾನವನದೇ ದೇಹದ ರೂಪ ಕೊಡಲು ಪ್ರಾರಂಭಿಸಿದ ಮೇಲೆ, ಸಮುದ್ರ ದಾಟುವಾಗ ಉಬ್ಬಿದಂತೆ ಉಬ್ಬುತ್ತಾ ಉಬ್ಬುತ್ತ ಕೊನೆಗೆ ಸಿಕ್ಸ್ ಪ್ಯಾಕ್, ಎಯ್ಟ್ ಪ್ಯಾಕ್ ಹನುಮಂತನವರೆಗೂ ಉಬ್ಬಿಹೋದ.

ಸದಾ ಶಾಸ್ತ್ರದ ಗುಂಗಲ್ಲೇ ಇರುವ ಶಾಸ್ತ್ರಬದ್ದ ಕಲಾವಿದರೂ ಸಹ ಕಪಿ ಹನುಮಂತನಾದದ್ದನ್ನು ಖುಶಿ ಖುಶಿಯಾಗಿ ಅಪ್ಪಿಕೊಂಡರು,ಒಪ್ಪಿಕೊಂಡರು .

ಮುಂದೆ ಹೀಗಾದರು ಒಪ್ಪುತ್ತಾರೊ ಇಲ್ವೊ ನೋಡಬೇಕು..
ಆದ್ರೆ ನಮ್ಮ ಮುಂದಿನ ಹನುಮಂತ ಉಬ್ಬಿಸಿದರೆ ಉಬ್ಬೋಗದೆ ಈರೀತಿ ಎಂಜಾಯ್ ಮಾಡ್ಬೋದು ಅಂತ ನನ್ನ ಅನಿಸಿಕೆ..

Rating
No votes yet

Comments