ಋಣವಿದ್ದಷ್ಟೂ...2

Submitted by Seetharmorab on Sat, 06/20/2009 - 13:57

ನಮ್ಮ ಮುದ್ದಿನ ಟೆಡ್ಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ಲಾಟ್ಗೆ ಬಂದಮೇಲೆ ಅದರ ದಿನಚರಿ ಬದಲಾಗಿತ್ತು. 3ನೇ ಮಹಡಿಯಿಂದ ಕೆಳಗೇನೋ ಇಳಿದು ಹೋಗೋದು ಮತ್ತೆ ಬರಕ್ಕೆ ಗೊತ್ತಾಗ್ತಾ ಇರಲಿಲ್ಲ. ಲಿಫ್ಟ್ ಮುಂದೆ ಕೂತ್ಕೊಂಡಿರ್ತಿತ್ತು. ವಾಚ್ಮನ್ ಮೇಲಕ್ಕೆ ಕರ್ಕೊಂಡು ಬಂದು ಬಿಡೋನು.
ಒಂದುದಿನ ವಾಕಿಂಗ್ ಬರಕ್ಕೆ ತಯಾರಿಲ್ಲ ಸುಮ್ಮನೆ ಮಲ್ಕೊಂಡಿತ್ತು ಯಾಕೋ ಅಂತ ಎಬ್ಬಿಸಿ ನಿಲ್ಲಿಸಿದ್ರೆ ಬಿದ್ ಹೋಗೋದು. ತತ್ ಕ್ಷಣ ಡಾಕ್ಟರ್ಗೆ ಪೋನ್ ಮಾಡಿ ಮನೆಗೆ ಕರೆಸಿದ್ವಿ ಅವರು ನೋಡಿ ಇಂಜಕ್ಷನ್ ಕೊಟ್ಟು, ಆಸ್ಪತ್ರೆಗೆ ತೋರಿಸಿ ಹೊಟ್ಟೆಯಲ್ಲಿ ಗೆಡ್ಡೆ ಆಗಿದೆ ಅಂದರು. ಆದಿನವೆ ಆಸ್ಪತ್ರೆಗೆ ತೋರಿಸಿದೆವು. ಅಲ್ಲಿ ಹೊಟ್ಟೆಯಲ್ಲಿ ಗೆಡ್ಡೆಯಾಗಿದೆ ಆಪರೇಷನ್ ಮಾಡಬೇಕು 2ದಿನಬಿಟ್ಟು ಬನ್ನಿ ಅಂತ ಬರ್ಕೊಟ್ಟರು.
ಆಪರೇಷನ್ ಮಾಡಿಸಿದೆವು ನಮ್ಮನೆಯವರು ಮಗೂನ ಎತ್ತಿಕೊಂಡ ಹಾಗೆ ಎತ್ಕೊಂಡು ಬಂದರು. ನಾನು ಹೋಗಿರಲಿಲ್ಲ. ಎತ್ಕೊಂಡು ಒಳಗೆಬಂದೆ. ಪಿಳಿ ಪಿಳಿ ಕಣ್ಣು ಬಿಟ್ಕೊಂದು ಮಲಗಿತ್ತು. ವಿಪರೀತ ಚೂಟಿ ಸುಮ್ಮನೆ ಮಲಗಿತ್ತು. ಕೆಳಗೆ ಮೃದುವಾದ ಹಾಸಿಗೆ ಹಾಸಿ ಅದನ್ನು ಮಲಗಿಸಿದ್ದಾಯ್ತು. ಇರುವೆ ಹೋಗಬಾರದೆಂದು ಸುತ್ತಲೂ ಲಕ್ಷ್ಮಣ ರೇಖೆ ಬರೆದೆವು. ಮಾರನೇ ದಿನವೇ ಮಾಮೂಲಿನಂತೆ ಓಡಾಡಲು ಶುರುಮಾದಿತು. ಡಾಕ್ಟರ್ ಬೆಡ್ ರೆಷ್ಟ್ ಹೇಳಿದ್ರೂ ಕೂಡ. (ಅದು ಮನುಷ್ಯರಿಗೆ ಮಾತ್ರ) ದಿನಾ ಇನ್ಜೆಕ್ಷನ್ ಕೊಡಿಸುತ್ತಿದ್ದೆವು.
ಟೇಬಲ್ ಮೇಲೆಅಲಗಿಸಿ ಡಾಕ್ಟರ್ ಚೆಕ್ ಮಾಡ್ತಿದ್ರು ನಮ್ಮನೆಯವರು ಔಷಧಿತರಲು ಹೋದರು. ನಾನು ಟೆಡ್ಡಿ ಹಿಡ್ಕೊಂಡಿದ್ದೆಯಾವಮಾಯದಲ್ಲಿ ನೆಗೆದು ಅವರ ಹಿಂದೆ ಹೋಯ್ತೋ ನಾನೂ ಕೂಕ್ಕೊಂಡು ಅದರ ಹಿಂದೆ ಓಡಿದೆ.ಇವ್ರೂ ನನ್ನನ್ನೇ ಬೈದರು ಬಿಗಿಯಾಗಿ ಹಿಡ್ಕೋಬಾರ್ದಾ ಅಂತ. ಯಾರಕೈಗೂ ಸಿಗಲಿಲ್ಲ ಕಾರ್ ಒಂದು ರೌಂಡ್ ಬಂತು ಅಲ್ಲಿದ್ದವರೆಲ್ಲಾ ನೋಡಿ ನಗ್ತಿದ್ರು. ಕೊನೇಗೆ ಆಕಡೆಯಿಂದ ಈಕಡೆಯಿಂದ ಇಬ್ರೂ ಒಟ್ಟಿಗೇ ಅಟ್ಯಾಕ್ ಮಾಡಿದ್ವಿ. ನಾವೂ ನಗ್ತಿದ್ವು. ಕುತ್ತಿಗೆಗೆ ಕಾಲರ್ ಬೇರೆ ಹಾಕೊಂಡಿ ಬ್ಲಾಕ್ ಟೆಡ್ಡಿ ವೈಟ್ ಕಾಲರ್.
ಮತ್ತೆ ಡಾಕ್ಟರ್ ಹತ್ರ ಎತ್ಕೊಂಡ್ ಹೋದ್ವಿ. ಹೊಲಿಗೆ ಬಿಚ್ಚಿತ್ತು. ನಾವು ಬೈಸಿಕೋಬೇಕಾಯ್ತು. ಮತ್ತೆ ಹೊಲಿಗೆಹಾಕಿ ಕಳಿಸಿದ್ರು. ಬಹಳ ಜೋಪಾನವಾಗಿ ನೋಡಿಕೊಂಡೆವು. 15ದಿನದ ವರೆಗೂ ದಿನಾ ಇನ್ಜಕ್ಷನ್ ಕೊಡಿಸಬೇಕಾಗಿತ್ತು ನಾವಿರುವ ಜಾಗದಿಂದ ಆಸ್ಪತ್ರೆಗೆ 12 ಕಿ. ದೂರವಿತ್ತು. ಅಬ್ಬ ಮುಗಿಯಿತು ನಿಟ್ಟುಸಿರಿಟ್ಟೆವು. ಬಹಳ ಬೇಗ ಚೇತರಿಸಿಕೊಂಡು ಬಿಟ್ಟಿತು.
ನಂತರ ನನ್ನ ದೊಡ್ಡಮಗ ವಾಕಿಂಗ್ ಕರ್ಕೊಂಡು ಹೋಗೋನು. ಅವನ ಮಾತು ಕೇಳ್ತಿರ್ಲಿಲ್ಲ ತುಂಬಾ ರಾಂಗ್ ಮಾಡೋದು. ಅವನು ಕರ್ಕೊಂಡು ಹೋಗೋತನಕ ಅವನಹಿಂದೆ ಬಾಲ ಅಲ್ಲಾಡಿಸಿಕೊಂಡು ಸುತ್ತೋದು. ಹೋಗಿ ಬಂದಮೇಲೆ ಅವನಿಗೇ ಬೋಗಳೋದು. ಇದನ್ನು ನೋಡಿ ಅವನು ನಗ್ತಿದ್ದ.
ಇನ್ನೊಂದು ವಾರಕ್ಕೆ ಬೆಂಗಳೂರಿನಲ್ಲಿ ನಮ್ಮನೆ ಗೃಹ ಪ್ರವೇಶವಿತ್ತು. ನಾವೆಲ್ಲಾ. ಬೆಂಗಳೂರಿಗೆ ಹೋಗಲು ಸಿದ್ದ ಮಾಡ್ಕೋತಿದ್ವಿ. ಟೆಡ್ಡಿಗೆ ನನ್ನಮಗ ಸ್ನಾನ ಮಾದಿಸಿದ ಸ್ವಲ್ಪ ನಿಃಶ್ಶಕ್ತಿ ಥರ ಕಾಣುಸ್ತು. ಊಟ ಹಾಕುದ್ರೆ ಊಟ ಮಾಡಿರಲಿಲ್ಲ. ಉಪವಾಸ ಮಾಡತ್ತೇನೋ ಅಂದ್ಕೊಂಡೆ. ಆದಿನ ನಾವೆಲ್ಲಾ ಹೊರಗೆ ಹೋಗಿದ್ವಿ ಬರ್ಬೇಕಾದ್ರೆ ರೊಟ್ಟಿ ತೊಗೊಡ್ಬಂದ್ವು. ಅದಕ್ಕೆ ರೊಟ್ಟಿ ಅಂದ್ರೆ ತುಂಬಾ ಇಷ್ಟ. ಒಳಕ್ಕೆ ಬಂದ್ರೆ ಅದು ಎದ್ದು ಬರ್ಲೇ ಇಲ್ಲ. ನಮ್ಮನ್ನು ನೋಡಿ ಎದ್ದು ಕುಣಿದಾಡೋದು. ಸೋಫಾ ಕೆಳಗೆ ಮಲ್ಕೊಂಡಿತ್ತು. ಯಾವಾಗ್ಲೂ ಅಲ್ಲಿ ಮಲಗ್ತಿರಲಿಲ್ಲ. ನನಗೆ ಅನುಮಾನ ಬಂತು. ಎತ್ತಿ ಬೆಡ್ ಶೀಟ್ ಮೇಲೆ ಮಲಗಿಸಿದೆ. ಯಾಕೋ ನಡುಗುತ್ತಿತ್ತು. ಏನಾಯ್ತಮ್ಮಟೆಡ್ಡಿ ಅಂದೆ. ದೀನವಾಗಿ ನನ್ನ್ಕಡೆ ನೋಡಿತು ನೀರು ಕುಡಿಸಿದೆವು. ತಲದಸಿಯಲ್ಲಿ ನಾನು ನಿಂತಿದ್ದೆ ಚಿಕ್ಕ್ಮಗ ಅಳೋಕ್ಕೆ ಶುರುಮಾಡಿದ ಎಲ್ಲರನ್ನೂ ಒಮ್ಮೆ ನೋಡಿ ಪ್ರಾಣ ಬಿಟ್ಟಿತು. ನಾವೆಲ್ಲಾ ತುಂಬಾ ಗೋಳಾಡಿದಿ ಅತ್ತೆವು. ಈಗಲೂ ಕಣ್ಣೋರೆಸಿಕೊಂಡೇ ಬರೀತಿದ್ದೀನಿ. ಟೆಡ್ಡಿ ಮರೆಯಾಗಿ ಒಂದು ವರ್ಷದ ಮೇಲಾಯಿತು ಇನ್ನೂ ಮರೆಯಲಾಗಿಲ್ಲ. 11ವರ್ಷ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ದೂರಾಗಿಲ್ಲ ನಮ್ಮಮನದಿಂದ. ಬೇರೊಂದನ್ನು ಸಾಕಲು ಯಾರೂ ಒಪ್ಪುತ್ತಿಲ್ಲ.
"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ"
ನಾವೆಲ್ಲರೂ ದಿನಕ್ಕೆ 10 ಬಾರಿಯಾದರೂ ನೆನಪಿಸಿಕೊಳ್ಳುತ್ತೀವಿ ಟೆಡ್ಡಿ ನೀನೆಲ್ಲಿದ್ದರೂ ನಿನಗೆ ಚಿರಶಾಂತಿ ಇರಲಿ.

ಅನುಭವ ಕಥನ http://sampada.net/blog/seetharmorab/30/04/2009/19737

ಸೀತ ಆರ್. ಮೊರಬ್

Rating
No votes yet

Comments