ಉಬುಂಟು ಲೀನಕ್ಸಿನಲ್ಲಿ ನಾನು ಗಮನಿಸಿದ ಒಂದು ಅನುಕೂಲ
ಈಗ ಒಂದು ದೊಡ್ಡ ಕಡತವನ್ನ ಓದ್ತಿದೀರಿ ( ಪೀಡಿಎಫ್ ಅಥವಾ ವರ್ಡ್ ನಂಥ ಕಡತ) ಅಂದ್ಕೊಳ್ಳಿ . ಎಷ್ಟೋ ಪುಟ ಓದಿ ಅದನ್ನ ಮುಚ್ಚುತೀರಿ , ಸ್ವಲ್ಪ ಹೊತ್ತಿನ ಮೇಲೆ ಅಥವಾ ಒಂದು ಸಲ ಕಂಪ್ಯೂಟರ್ ಆರಿಸಿ ಮತ್ತೆ ಹಚ್ಚಿ ( ಬೂಟ್ / ರೀಬೂಟನ್ನು ಕನ್ನಡದಲ್ಲಿ ಹೇಳ್ತಿದ್ದೀನಿ !! ) ಓದನ್ನು ಮುಂದುವರೆಸೋಣ ಅಂತ ತೆರೆಯುತ್ತೀರಿ ಅಲ್ಲವೇ ?
ವಿಂಡೋಸ್ ನಲ್ಲಿ ತೆರೆದಾಗ ಆ ಕಡತದ ಪ್ರಾರಂಭದಲ್ಲಿ ಇರ್ತೀರಿ . ನೀವು ನಿಲ್ಲಿಸಿದ ಜಾಗಕ್ಕೆ ಅನೇಕ ಸಲ ಪೇಜ್ ಡೌನ್ ಒತ್ಕೊಂಡೋ ಅಥವಾ ವರ್ಟಿಕಲ್ ಸ್ಕ್ರೋಲ್ ಬಾರ್ ಬಳಸಿಯೋ ಹೋಗಬೇಕಾಗುತ್ತದೆ ಅಲ್ಲವೇ ?
ಅದೇ ಉಬುಂಟು-ಲೀನಕ್ಸಿನಲ್ಲಿ ನೀವು ಆ ಕಡತವನ್ನ ಮುಚ್ಚುವಾಗ ಎಲ್ಲಿರ್ತೀರೋ ಅದನ್ನ ಮತ್ತೆ ತೆರೆದಾಗಲೂ ಅಲ್ಲೇ ಇರ್ತೀರ !! ಇದು ನನಗೆ ತುಂಬ ಅನುಕೂಲಕರ ಅನ್ನಿಸಿದೆ !
Rating
Comments
ಉ: ಉಬುಂಟು ಲೀನಕ್ಸಿನಲ್ಲಿ ನಾನು ಗಮನಿಸಿದ ಒಂದು ಅನುಕೂಲ
In reply to ಉ: ಉಬುಂಟು ಲೀನಕ್ಸಿನಲ್ಲಿ ನಾನು ಗಮನಿಸಿದ ಒಂದು ಅನುಕೂಲ by amg
ಥ್ಯಾಂಕ್ಸ್ amg, ಉಪಯುಕ್ತ ಮಾಹಿತಿ
ಥ್ಯಾಂಕ್ಸ್ amg, ಉಪಯುಕ್ತ ಮಾಹಿತಿ.
In reply to ಉ: ಉಬುಂಟು ಲೀನಕ್ಸಿನಲ್ಲಿ ನಾನು ಗಮನಿಸಿದ ಒಂದು ಅನುಕೂಲ by amg
ಉಬುಂಟು ನಾನು ಡೌನ್ಲೋಡ್ ಮಾಡಿ
ಉಬುಂಟು ನಾನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ ಅದರಲ್ಲಿ ವರ್ಕ್ ಮಾಡಿ ಆಮೇಲೆ ನೋಡುವೆ..
ಈ ತರಹದ ತಂತ್ರಜ್ಞಾನ ಸಂಬಂಧಿ ಮಾಹಿತಿಗಳ ಬಗ್ಗೆ ನನಗೋ ಮೊದಲಿಂದಲೂ ಕುತೂಹಲ..ಈ ಪುಟ್ಟ ಬರಹದ ಮೂಲಕ ನೀವು ಒಂದು ಒಳ್ಳೆ ವಿಷ್ಯ ತಿಳಿಸಿದಿರಿ..
ನನ್ನಿ
ಈ ಹಿಂದೆ ಪ್ರಸನ್ನ ಎಸ ಪಿ ಮುಂತಾದವರು ಈ ತರಹದ ತಂತ್ರಜ್ಞಾನ ಸಂಬಂಧಿ ಮಾಹಿತಿ ಇರುವ ಬರಹ ಬರೆಯುತ್ತಿದ್ದರು ಈಗ ಅವರು ಫೆಸ್ಬುಕ್ಕಲ್ಲಿ ಜಾಸ್ತಿ ಬಿಜಿ...!!!
ಈ ತರಹದ ಲೇಖನ ಬರಹಗಳನ್ನು ನಿಮ್ಮಿಂದ ಮತ್ತಸ್ತು ನಿರೀಕ್ಷಿಸುವೆ...!!
ಶುಭವಾಗಲಿ..
\।