ಮುಗ್ಧ ಮನಸಲಿ ಕೋಲಾಹಲ

ಮುಗ್ಧ ಮನಸಲಿ ಕೋಲಾಹಲ

ನಮ್ಮಅಬಾಕಸ್‌ ಕ್ಲಾಸ್‌ಗೆ ಚಿಕ್ಕವರಿಂದ ಹಿಡಿದು ಒಂಬತ್ತನೇ ತರಗತಿಯವರೆಗೆ ಮಕ್ಕಳು ಬರುತ್ತಾರೆ . ಹುಡುಗರು, ಹುಡುಗಿಯರು ಇದ್ದಾರೆ.


ನೆನ್ನೆ ರವಿ ಬಂದು


"ಮೇಡಮ್ ರಘು ಚಂದನಾಗೆ ಪ್ರಪೋಸ್ ಮಾಡಿದನಂತೆ . ಅವಳ ಮನೆಯ ಹತ್ತಿರ ಎಲ್ಲಾ ಆಡಿಕೊಂದು ನಗ್ತಾ ಇದ್ದಾರಂತೆ " ಎಂದಾಗ ನನಗೆ ಕಕ್ಕಾಬಿಕ್ಕಿ ಜೊತೆಗೆ ನಗು.


ರಘು ಈಗ ತಾನೆ ಒಂಬತ್ತನೆ ತರಗತಿಯ ಹುಡುಗ.  ಒಳ್ಳೇಯ ಹುಡುಗ. ಜೊತೆಗೆ ಅರ್ಚಕರ ಮಗ. ಮುಂದೆ ಡೈರೆಕ್ಟರ್ ಆಗಬೇಕೆಂಬ ಆಸೆ ಇದೆ ಎಂದು ಹೇಳಿದ್ದ. ಬುದ್ದಿವಂತ


ಚಂದನಾ ಆರನೆ ತರಗತಿಯ ಪೋರಿ. ಅಗಲ ಕಣ್ಣಿನ ಚಿಟ ಪಟ ಮಾತಿನ ಮುದ್ದು ಹುಡುಗಿ. ಆದರೆ ಹೀಗೆಲ್ಲಾ ಆಡುತ್ತಾನೆಂದರೆ ನಂಬಲಾಗಲಿಲ್ಲ


ಚಂದನಾಳನ್ನೇ ಕರೆಸಿದೆ


"ವಾಟ್ ಹ್ಯಾಪ್ಪೆನ್ಡ್ ಚಂದನಾ"


"ಮ್ಯಾಮ್ ಹಿ ಓನ್ಲ್ಯ್ ಆಸ್ಕ್ಡ್ ಮಿ ಟು  *****" ಎಂದಂದು ತಲೆ ತಗ್ಗಿಸಿದಳು


ಅರ್ಥವಾಯ್ತು.


"ಮ್ಯಾಮ್  ಹಿ ಹ್ಯಾಸ್ ಟೋಲ್ಡ್ ಎವೆರಿಬಡಿ ನಿಯರ್ ಅವರ್ ಹೌಸ್. ಇಫ್ ಮೈ ಫಾದರ್ ಕಮ್ಸ್ ಟು ನೋ *************"ಎಂದು ಕಣ್ಣಲ್ಲಿ ನೀರು ಹಾಕಿದಳು.


"ಓಕೆ ಡೋಂಟ್ ವರಿ" ಎಂದು ಅವಳನ್ನು ಕಳಿಸಿದೆ


ಇಂಥಾ ಸಂದರ್ಭದಲ್ಲಿ ಏನು ಮಾಡಬೇಕು ಎಂದು  ತೋಚುವುದಿಲ್ಲ


ಆತ ದೊಡ್ಡವನಾಗಿದ್ದರೆ ಬೈಯ್ಯಬಹುದು .ಆದರೆ ಆತ ಇನ್ನೂ ಚಿಕ್ಕವನು ಮನಸಲ್ಲಿ ಚಂದನಾ ಇಷ್ಟವಾಗಿದ್ದಾಳೆ ಅದನ್ನೇ ಪ್ರೀತಿ ಎಂದು ತಿಳಿದುಕೊಂಡಿದ್ದಾನೆ. ಬೈದರೆ ಅದು ಯಾವ ಮಟ್ಟಕ್ಕಾದರೂ ಹೋಗಬಹುದು. ಬುದ್ದಿ ಹೇಳಿದರೆ ಕೇಳಿ ಮತ್ತೆ ಅದೇ ಮಾಡಬಹುದು.


ಸ್ವಲ್ಪ ಹೊತ್ತು ಯೋಚಿಸಿದೆ


ನಂತರ ಅವನನ್ನೇ ಕರೆಸಿದೆ


"ಏನಪ್ಪ ಹೀಗೇಕೆ ಕೇಳಿದೆ "ಎಂದೆ


"ಮ್ಯಾಮ್ ಶರಣ್ಯಾನೇ ನಿಂಗೆ ಮೀಟರ್ ಇದ್ರೆ ಅವಳಿಗೆ ಹೇಳು ಅಂತ ಒತ್ತಾಯ ಮಾಡಿದಳು . ಅದಕ್ಕೆ ನಾನು ಹೇಳ್ದೆ" ಎಂದ


"ಹಾಗಿದ್ರೆ ನಿಂಗೇನು ಅವಳ ಬಗ್ಗೆ ಅಂತಾ ಭಾವನೇ ಇಲ್ವಾ?"


"ಇದೆ ಮೇಡಮ್ ಆದರೆ ನಾನು ಹೇಳ್ತಿರಲಿಲ್ಲ" ಎಂದ


ಈಗ ನನ್ನ ಮಾತಿನ ವರಸೆ ಶುರು ಮಾಡಿದೆ


"ರಘು ನೀನು ಡೈರೆಕ್ಟರ್ ಆಗಬೇಕಂತ ಇದ್ದೀಯಲ್ಲಾ?" ಎಂದೆ


"ಹೌದು ಮೇಡಮ್"


"ನೀನು ಚಂದನಾ ಬಗ್ಗೆ ಈ ಥರ ಫೀಲಿಂಗ್ಸ್ ಇಟ್ಕೊಂಡ್ರೆ ಓದೋಕಾಗದೆ ಒದ್ದಾಡ್ತೀಯಾ ಆಮೇಲೆ ಎಕ್ಸಾಮ್ ಬರೆಯೋಕಾಗಲ್ಲ. ಚೆನ್ನಾಗಿ ಓದೋಕಾಗಲ್ಲ. ಮುಂದೆ ಫಿಲ್ಮ್ ಡೈರೆಕ್ಟ್  ಮಾಡ್ಬೇಕೂ ಅಂತ  ಇರೋಛಲ ಇರಲ್ಲ. ಈಗಲೇ  ಪ್ರೀತಿ ಪ್ರೇಮ ಅಂತ  ಓಡಾಡಿದರೆ ಅವಳ ಖರ್ಚಿಗೆ ದುಡ್ಡು ತರಬೇಕಾಗುತ್ತೆ. ಆಮೇಲೆ ಅಪ್ಪ ಅಮ್ಮ ನಿನ್ ಬಗ್ಗೆ ಏನಂದುಕೋತಾರೆ. ಇದೆಲ್ಲಾ ಸುಮ್ಮ್ನೆ ಬೇಡದ ಜವಾಬ್ದಾರಿ . ನಿನ್ನ ಮೇಲೆ ಚೆನ್ನಾಗಿ ಓದಿ  ಮುಂದೆ ಬರಬೇಕು ಅನ್ನೋ ರೆಸ್ಪಾನ್ಸಿಬಿಲಿಟಿ ಇದೆ. ಅದನ್ನ ಮೊದಲು ನಿಭಾಯ್ಸು . ನೀನು ಡೈರೆಕ್ಟರ್ ಆದರೆ ಯಾರಿಗೆ ಗೊತ್ತು ಚಂದನಾನೆ ನಿನ್ನಫಿಲ್ಮ್‌ ನಲ್ಲಿ ಆಕ್ಟ್ ಮಾಡ್ತೀನಿ ಅಂತ ಬರಬಹುದು. ಅಲ್ವಾ"  ಎಂದೆ


"ಹೌದು" ಎಂದು ತಲೆ ಆಡಿಸಿದ


"ಹಾಗೆ ಇದು ಬರೀ ಇಷ್ಟ ಪ್ರೀತಿ ಅಲ್ಲಾ . ನಮಗಿಷ್ಟ ಆಗೋದೆಲ್ಲಾ ನಮ್ಮದಾಗಬೇಕು ಅಂತ ಅನ್ನುತ್ತೆ ಈ ನಿನ್ನ ವಯಸು . ಆದರೆ ನೀನು ಪಾಸಿಟಿವ್ ಆಗಿ ಯೋಚಿಸು. ನೆಗೆಟೀವ್ ಥಾಟ್ಸ್ ಬರೋಕೆ ಅವಕಾಶ ಕೊಡಬೇಡ. ಆಗ ನಿನಗೆ ಪ್ರೀತಿ ಮತ್ತೆ ಇಷ್ಟದ ನಡುವಿನ ವ್ಯತ್ಯಾಸ ಗೊತ್ತಾಗುತ್ತೆ "


"ಹಾಗೆ ನಾನುನಿನ್ನ ಮನೆ ಹತ್ತಿರಾನೆ ಇರೋದು ಅದನ್ನು ನೆನಪಿಟ್ಟುಕೊಂಡಿರು "ಎಂದೆ ಅದು ಕೊನೆಯ ಡೋಸ್


ಅವನ ಕಣ್ಣಲ್ಲಿ ಮಿಂಚು ಕಾಣಿಸಿತು


"ಓಕೆ ಮೇಡಮ್ "ಎಂದು ಹೇಳಿ ಹೊರಗೆ ಹೋದವ ಕೊಂಚ ಹೊತ್ತಿನ ನಂತರ ಬಂದ


"ಮ್ಯಾಮ್ ಐ ವಾಂಟ್ ಟು ಆಸ್ಕ್ ಸಾರಿ ವಿಥ್ ಚಂದನಾ "ಎಂದ


ಅವಳನ್ನೂ ಕರೆಸಿದೆ


"ಸಾರಿ ಚಂದನಾ   ವಾಂಟ್ ಟು ಬಿ ಯುವರ್ ಫ್ರೆಂಡ್ " ಎಂದ


ಅವಳು ಸೇ ಎನ್ನುತ್ತಾ ಹೆಬ್ಬೆಟ್ಟನ್ನು ತೋರಿಸಿದಳು


ಅವನೂ ಹಾಗೆ ಮಾಡಿದ


ಇಬ್ಬರೂ ಶೇಕ್ ಹ್ಯಾಂಡ್ ಕೊಡಲು ಹೇಳಿದೆ.ಶೇಕ್ ಹ್ಯಾಂಡ್ ಕೊಟ್ಟುಕೊಂಡು ಇಬ್ಬರೂ  ಹೀಗೊಂದು ವಿಷ್ಯ ನಡೆಯಿತು ಎನ್ನುವುದನ್ನೆ ಮರೆತವರಂತೆ ಒಬ್ಬರ ಜೊತೆ ಒಬ್ಬರು ಮಾತಾನಾಡುತ್ತಾ ಹೊರಟರು


ರಾತ್ರಿ ನಮ್ಮ ಮನೆಯವರ ಜೊತೆ ಮಾತನಾಡಿದಾಗ ಈ ವಿಷ್ಯ ಹೇಳಿದೆ


"ಅಯ್ಯೋ ಅವನು ಒಂಬತ್ತೆನೇ ಕ್ಲಾಸಲ್ಲಿ ಲವ್ ಮಾಡಿದ. ನಾನು ಏಳನೇ ಕ್ಲಾಸಲ್ಲೇ ಲವ್ ಮಾಡಿದ್ದೆ ಗೊತ್ತಾ" ಎಂದರು


ನಾನು ಮುಖ ಉಬ್ಬಿಸಿಕೊಂಡು


"ಯಾರು" ಎಂದು ಕೇಳಿದೆ


"ನಮ್ಮ ಮಿಸ್" ಎಂದರು ನನಗೆ ನಗು ತಡೆಯಲಾಗಲಿಲ್ಲ


ಒಟ್ಟಿನಲ್ಲಿ ಮಕ್ಕಳ ದಿನಾಚರಣೆಯಹಿಂದಿನದಿನ ಮಕ್ಕಳ ಮನಸಿನ ಮತ್ತೊಂದು ಮಗ್ಗುಲು ಪರಿಚಯವಾಯ್ತು


ಇವರನ್ನು ನೋಡಿ ಸಿನಿಮಾ ತೆಗೆಯುತ್ತಾರೋ ಅಥವ ಸಿನಿಮಾ ನೋಡಿ ಇವರು ಹೀಗಾಡುತ್ತಾರೋ ಗೊತ್ತಿಲ್ಲ


ಆದರೂ  ಯೋಚನೆ ಮಾಡದೆ ಬರುವ ಆ ಪ್ರೀತಿಯೇ ನಿಜವಾದ ಪ್ರೀತಿ ನಿಷ್ಕಲ್ಮಶ ಪ್ರೀತಿ ಎಂದು ನನಗನ್ನಿಸುತ್ತದೆ ಸ


ನಿಮಗೆ ಏನನ್ನಿಸುತ್ತದೆ?


 


 

Rating
No votes yet

Comments