ಲೂಕನ ಜೋಕು
ನಮ್ಮ ಮನೆಯಲ್ಲಿ ಅಡಕೆ ಕಿಳಬೇಕೆಂದರೆ ಲೂಕನೆ ಬರಬೇಕು. ಇಂತಿಪ್ಪ ಲೂಕ ಶಾಲೆಗೆ ಹೋದ ಕಥೆ.
ನಮ್ಮ ಲೂಕನ ಅಪ್ಪ ಮಗನೂ ಶಾಲೆಯ ಮುಖ ನೋಡದ ತನ್ನಂತ ನಿರಕ್ಷರಿಯಾಗಬಾರದೆಂದು ಮಗನನ್ನು ಶಾಲೆಗೆ ಸೇರಿಸಲೆಬೇಕೆಂಬ ಹಂಬಲದಿಂದ ಶುಕ್ರವಾರ ಜೂನ್ ಒಂದನೇ ತಾರೀಕು
ನಮ್ಮೂರಿನ ಸರಕಾರೀ ಶಾಲೆಗೆ ಸೇರಿಸಿದನಂತೆ. ಶುಕ್ರವಾರ ನೋಂದಣಿಎಲ್ಲ ಮುಗಿಯುವ ಹೊತ್ತಿಗೆ ಸಂಜೆಯಾಗಿತ್ತು.
ಸರಿ ನಾಳೆಯಿಂದ ಶಾಲೆಗೆ ಬರುವೆನಂದ ಲೂಕ ಮನೆ ಕಡೆಗೆ ನಡೆದ. ಶನಿವಾರ ಲೂಕ ಎದ್ದಾಗಲೇ ತಡವಾಗಿತ್ತು,
ಅವನಮ್ಮ ಯಾಕೋ ಈಗ ಶಾಲೆಗೆ ಹೋಗುತ್ತಿ? ಮಧ್ಯಾನ್ಹದ ಮೇಲೆ ಹೋದರೆ ಸಾಕು, ಅಂದಾಗ ಲೂಕನಿಗೆ ಸರಿ
ಅನ್ನಿಸಿತ್ತಂತೆ. ಗಡದ್ದಾದ ಊಟ ಮುಗಿಸಿ ಶಾಲೆ ತಲುಪಿದಾಗ ಶಾಲೆ ಮುಚ್ಚಿತ್ತು, ಸರಿ ನಾಳೆ ಹೋದರಾಯಿತು ಎಂದು
ವಾಪಸು ಬಂದ ಲೂಕ ಮರುದಿನ ಬೆಳಗ್ಗೆ ಐದು ಘಂಟೆಗೆ ಎದ್ದು ಶಾಲೆಗೆ ಹೋಗುತ್ತಾನೆ ಶಾಲೆಯ ಬಾಗಿಲು ಮುಚ್ಚಿದೆ.
ಅಯ್ಯೋ ನಿನ್ನೆ ಮದ್ಯಾನ್ಹ ಬಂದೆ, ಇವತ್ತು ಬೆಳಗ್ಗೆ ಬಂದೆ ಬಾಗಿಲು ಮುಚ್ಚಿದೆ, ಸರಿ ಶಾಲೆಗೆ ನಾಳೆ ಸಂಜೆ ಬರೋಣ
ಎಂದು ವಾಪಸು ನಡೆದ ಲೂಕ.
ಮರುದಿನ ಸಂಜೆ ಐದು ಘಂಟೆಗೆ ಬಂದು ನೋಡಿದರು ಬಾಗಿಲು ತೆರೆದಿಲ್ಲ, ಸರಿ ನನಗು ಶಾಲೆಗೂ ಸರಿ ಬರಲ್ಲ
ಎಂದುಕೊಂದ್ದು ಅವತ್ತು ಅಡಕೆ ಕೀಳಲು ಹೊರಟ ಲೂಕ ನಿಗೆ ಇಂದಿಗೂ ಅಡಕೆ ಮರದಲ್ಲಿ ನೇತಾಡುತಿದ್ದಾನೆ.
ಶಾಲೆ ಕಲಿತು ನಿರುದ್ಯೋಗಿಗಳಾಗಿರುವ ತನ್ನ ಸ್ನೇಹಿತರನ್ನು ಕಂಡು ಅಂದು ಶಾಲೆ ಮುಚ್ಚಿದ್ದದ್ದು ಕುಶಿಯಾಗಿದೆ
ಎನ್ನುತಾನವನು.
Comments
ಉ: ಲೂಕನ ಜೋಕು
ಉ: ಲೂಕನ ಜೋಕು