ಅಷ್ಟಕ್ಕೂ ಅವರು ಮಾಡಿದ ತಪ್ಪಾದರೂ ಏನು?

ಅಷ್ಟಕ್ಕೂ ಅವರು ಮಾಡಿದ ತಪ್ಪಾದರೂ ಏನು?

ಬಹುಶ: ನಿಮಗೆ ಗೊತ್ತಿರಬಹುದು, ಸುಮಾರು ೪-೫ ವರ್ಷದ ಹಿಂದೆ ಅನ್ಸತ್ತೆ. ಇಂಟೆಲ್ ಉದ್ಯೋಗಿ ಒಬ್ರನ್ನ ಅವರ ಹೆಂಡತಿಯಾಗುವವಳು  ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದು.  ಆ ಮನುಷ್ಯ ಅವರ ಪಾಡಿಗೆ ಅವ್ರಿದ್ರು, ಯಾರದೋ ಪ್ರೀತಿಗೆ ಇನ್ಯಾರೋ ಬಲಿಯಾಗಬೇಕಾಯ್ತು, ಅದೂ ಅಲ್ಲದೆ ಅವರನ್ನೇ ನಂಬಿಕೊಂಡಿದ್ದ ಅವರ ಅಪ್ಪ ಅಮ್ಮಂದಿರ ನೋವನ್ನು ಕೇಳುವವರಾರು?

ಅವಳ ತೆವಲಿಗೆ ಇನ್ಯಾರೋ ಬಲಿಪಶು.
........................

ಮೊನ್ನೆ ನಡೆದ ವಿಷಯಕ್ಕೆ ಬರೋಣ. ತಪ್ಪು ಮಾಡಿದ್ದು ಆನಂದ್ ಮತ್ತೆ ಪ್ರಿಯಾಂಕ, ಆದರೆ ತಿರುಮಲಾ ಬಲಿಪಶು. ಅವರಿಬ್ಬರ ಮೂರ್ಖತನ ಇನ್ನೊಂದು ಕುಟುಂಬಕ್ಕೆ ದುರ್ಗತಿ. ಪ್ರಿಯಾಂಕ ಮೂರ್ಖಳಾದದ್ದು ನಿಜ, ಆದರೂ ನಿಧಾನವಾಗಿ ಎಚ್ಚೆತ್ತುಕೊಂಡಿದ್ದಾಳೆ.

ಅವರಿಬ್ಬರ ತೆವಲಿಗೆ ತಿರುಮಲಾ ಬಲಿ.

.......................................................

ಇನ್ನೊಬ್ಬರ ಜೀವನವನ್ನ ಹಾಳು ಮಾಡೋ ಈ ವಿಕೃತ ಮನಸ್ಸು ಏಕೆ?

Rating
No votes yet

Comments