ಮಹೇಶ್ ಭಟ್ ಮುಸ್ಲಿಂ ಪ್ರೇಮ!

ಮಹೇಶ್ ಭಟ್ ಮುಸ್ಲಿಂ ಪ್ರೇಮ!

Comments

ಬರಹ

  ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮಗ ರಾಹುಲ್ ಭಟ್ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಜೊತೆ ಸಂಪರ್ಕ ಹೊಂದಿದ್ದುದು ದೃಢಪಟ್ಟಿದೆ. ರಾಹುಲ್‌ನನ್ನೂ ಮತ್ತು ಅವನಪ್ಪ ಮಹೇಶ್ ಭಟ್ ಅವರನ್ನೂ ಪೋಲೀಸರು ನಿರ್ದಾಕ್ಷಿಣ್ಯವಾಗಿ ವಿಚಾರಣೆಗೊಳಪಡಿಸಿ ಸಕಲ ಸತ್ಯವನ್ನೂ ಬಯಲಿಗೆಳೆಯಬೇಕು.


  ಭಾರತದ ಯಾವುದೇ ಮೂಲೆಯಲ್ಲಿ ಕೋಮುಸಂಬಂಧಿ ಘರ್ಷಣೆ ಸಂಭವಿಸಲಿ, ಈ ಮಹೇಶ್ ಭಟ್ ಅಲ್ಪಸಂಖ್ಯಾತರ (ಅದರಲ್ಲೂ ಮುಸ್ಲಿಮರ) ವಕ್ತಾರನಂತೆ ಮಾತನಾಡುವುದನ್ನು ನಾವು ಗಮನಿಸಿದ್ದೇವೆ. ಮುಸ್ಲಿಂ ಉಗ್ರರೊಂದಿಗಿನ ತನ್ನ/ತನ್ನ ಮಗನ ಸಂಪರ್ಕವನ್ನು ಮುಚ್ಚಿಹಾಕಿಕೊಳ್ಳಲು ಈತ ಈ ರಕ್ಷಣಾವಿಧಾನವನ್ನು ಅನುಸರಿಸುತ್ತಿದ್ದಾನೆಯೇ ಎಂಬ ನಿಟ್ಟಿನಲ್ಲಿಯೂ ಪೋಲೀಸರು ತನಿಖೆ ಕೈಗೊಳ್ಳಬೇಕು. ಭೂಗತ ಪಾತಕಿಗಳು, ಮುಸ್ಲಿಂ ಉಗ್ರರು ಮತ್ತು ದಾವೂದ್ ಇಬ್ರಾಹಿಂ ಇವರ ಜೊತೆ ಬಾಲಿವುಡ್‌ಗೆ ಇರಬಹುದಾದ ಯಾವುದೇ ರೀತಿಯ ನಂಟಿನ ಬಗ್ಗೆಯೂ ತನಿಖೆ ನಡೆಯಬೇಕು. ಈ ನಂಟಿನ ಒಂದು ಭಾಗವೇ ರಾಹುಲ್-ಹೆಡ್ಲಿ ಸಂಪರ್ಕ ಹಾಗೂ ಮಹೇಶ್ ಭಟ್ ಮುಸ್ಲಿಂ ಪ್ರೇಮ ಇರಬಹುದು.


  ಯಾವ ರಾಜಕೀಯ ಒತ್ತಡಕ್ಕೂ ಮಣಿಯದೆ ಭಾರತದ ತನಿಖಾಧಿಕಾರಿಗಳು ಎಫ್‌ಬಿಐ ನೆರವಿನೊಂದಿಗೆ ತನಿಖೆ ಮುಂದುವರಿಸಬೇಕು. ಇಬ್ಬರು ಭಟ್‌ಗಳೂ ನಿರಪರಾಧಿಗಳೆಂದು ಸಾಬೀತಾದರೆ ಬಹಳ ಸಂತೋಷ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet