ನೆನಪುಗಳು ಕಾಡುತಿವೆ ಪದೆ ಪದೆ....
ನೆನಪುಗಳು ಕಾಡುತಿವೆ ಪದೆ ಪದೆ...
ಹರಕಲು ಚಡ್ಡಿಯಲ್ಲಿ ಕುರುಕಲು ತಿಂಡಿ ತಿಂದ ನೆನಪು
ಬಳಪ ತಿಂದಾಗ ಕೈ ಗಿಣಿಗೆ ಹೊಡೆದ ಮೆಡಮ್ ನ ನೆನಪು
ಓಡುವ ಪಂದ್ಯ ಕಟ್ಟಿ ಬಿದ್ದು ಮೊಣಕಾಲಿಗೆ ಆದ ಗಾಯದ ನೆನಪು..
!!ನೆನಪುಗಳು!!
ಪರೀಕ್ಷೆ ಮುಗಿದ ಕೊನೆಯ ದಿನ ಏನೊ ಸಾಧಿಸಿರುವಂತೆ ನೆಡೆದು ಬರುತ್ತಿದ್ದ ಗೆಳೆಯರು..
ರಜೆಯ ಮಜ ಸವಿಯಲು ಅಜ್ಜಿಯ ಊರಿಗೆ ಹೊರಟಾಗ ರಾತ್ರಿಯೆಲ್ಲ ನಿದ್ದೆ ಇಲ್ಲದ ನೆನಪು..
ಮತ್ತೆ ಶಾಲೆ ಶುರುವಾದಾಗ ಬೇಸರದಿಂದ ತೆರಳುತಿದ್ದ ನೆನಪು...
!!ನೆನಪುಗಳು!!
ಕೊನೆಯ ಬೆಂಚಿನಲ್ಲಿ ಕುಳಿತು ಮಾಡಿದ ಕೀಟಲೆಗಳು..
ಸ್ನೆಹಿತ ತರುತ್ತಿದ್ದ ಬಾಲ ಮಂಗಳ ಪುಸ್ತಕವನ್ನು ಪ್ರತಿ ವಾರವು ಚಾಚು ತಪ್ಪದೆ ಓದುತ್ತಿದ್ದ ನೆನಪು
ಆಟಕೆಂದು ಶಾಲೆ ಬಿಟ್ಟಾಗ ಗೆಳೆಯನೊಂದಿಗೆ ಕದ್ದು ಹೊಗುತ್ತಿದ್ದ ನೆನಪು....
!!ನೆನಪುಗಳು!!
ಕಾಡ, ಟಿಂಗ, ಅಮ್ರ ,ಹೆಡ್ಡ, ಎಂದು ಮಾಸ್ತರರಿಗೆ ಇಟ್ಟಿದ ಅಡ್ಡ ಹೆಸರುಗಳು.
ಹತ್ತನೆ ತರಗತಿ ಮುಗಿದು ಕೊನೆಯ ದಿನ
ಆಕಾಶವೇ ಕಳಚಿ ಬಿದ್ದಂತೆ ಗೆಳೆಯರಲ್ಲಿ ತುಂಬಿದ ದುಗುಡ..
!!ನೆನಪುಗಳು!!
ಶಾಲೆ ಮುಗಿದು ತಿಂಗಳಾದರು ಅದೇ ಗುಂಗಿನಲ್ಲೆ ಕಾಲೇಜಿಗೆ ಹೋಗುತ್ತಿದ್ದ ನೆನಪು
ಮತ್ತೆ ಹೊಸ ಗೆಳೆಯರ ಪರಿಚಯ
ಕ್ಲಾಸ್ ಬಂಕ್ ಮಾಡಿ ನೋಡಿದ ಸಿನಿಮಾ
!!ನೆನಪುಗಳು!!
ಬೊರ್ ಹೊಡೆಸುತ್ತಿದ ಕ್ಲಾಸ್ ನ್ನು ದಿಕ್ಕರಿಸಿ
ಘಂಟೆಗಟ್ಟಲೆ ಕುಳಿತು ಮಾತಾಡುತ್ತಿದ್ದ ಸೊಮಾರಿ ಕಟ್ಟೆ..
ಮತ್ತೆ ಕೊನೆಯ ಬೆಂಚಿನಲ್ಲಿ ಕುಳಿತು ಮಾಡುತ್ತಿದ್ದ ಕೀಟಲೇಗಳು..
ಲೇಚರ್ ಗಳನು ಅನುಕರಿಸಿ ಮಾತಾಡುತ್ತಿದ ಜೋಕುಗಳು..
ಹಾಡುಗಳನ್ನು ರಿಮಿಕ್ಸ್ ಮಾಡಿ ಹಾಡುತ್ತಿದ್ದ ಪೋಲಿ ಜೋಕುಗಳು....
ನೆನಪುಗಳು ಕಾಡುತಿವೆ ಪದೆ ಪದೆ....
ಏಷ್ಟು ಹೇಳಿದರು ಮುಗಿಯದ ನೆನಪುಗಳು..
ಏಷ್ಟು ಹೇಳಿದರು ಉಳಿಯುವುದು ನೆನಪು ಮಾತ್ರವೇ...........