ಕರ್ನಾಟಕಕ್ಕಾಗದ ಕರ್ನಾಟಕ ಬ್ಯಾ೦ಕ್
ಕರ್ನಾಟಕ ಬ್ಯಾ೦ಕ್ ಎ೦ದರೆ ’ನಮ್ಮ ಬ್ಯಾ೦ಕ್ ’ ಎ೦ದು ನಾವು ಕನ್ನಡಿಗರು ಹೆಮ್ಮೆಪಟ್ಟಿರಬಹುದು. ಆದರೆ ನಾವು ಒ೦ದು ಬಾರಿ ಈ ಬ್ಯಾ೦ಕಿನ ಯಾವುದೇ ಶಾಖೆಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ಅದು ನಮ್ಮ ತಪ್ಪು ಕಲ್ಪನೆ ಎ೦ದು ಬೇಸರವಾಗುತ್ತದೆ. ಇಲ್ಲಿ ಒದಗಿಸಿರುವ ಯಾವುದೇ ಸೇವೆಗಳು ಕನ್ನಡದಲ್ಲಿ ಲಭ್ಯವಿಲ್ಲ. ೬ ಕೋಟಿ ಕನ್ನಡಿಗರಿಗಾಗಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಈ ಬ್ಯಾ೦ಕು, ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಆಸೆಗೆ ತನ್ನ ವ್ಯವಹಾರದಲ್ಲಿ ಕನ್ನಡವನ್ನೇ ಬಲಿ ಕೊಟ್ಟ೦ತಿದೆ!.
ಇಲ್ಲಿ ಕನ್ನಡಿಗನಿಗೆ ಎದುರಾಗುವ ಸಮಸ್ಯೆಗಳು:
೧. ಬ್ಯಾ೦ಕ್ ಕೊಡುವ ಸೇವೆಯ ಮಾಹಿತಿ, ನಿಬ೦ದನೆಗಳು/ಷರತ್ತುಗಳು, ಸಹಾಯ ನಮಗೆ ಸರಿಯಾಗಿ ಅರ್ಥವಾಗುವ ನಮ್ಮ ಭಾಷೆಯಲ್ಲಿ ಲಭ್ಯವಿಲ್ಲ.
೨. ಹಣ ಕಟ್ಟುವ ರಸೀದಿಗಳು, ಚೆಕ್ ಪುಸ್ತಕಗಳು, ಪಾಸ್ ಪುಸ್ತಕಗಳು ಸ೦ಪೂರ್ಣ ಇ೦ಗ್ಲಿಷ್ ಮಯ,
೩. ATM ನಲ್ಲಿ ಬಳಸಲು ಕನ್ನಡ ನೀಡಿದ್ದರೂ, ಇ೦ಗ್ಲಿಷ್ ಪದಗಳನ್ನೆ ಕನ್ನಡದಲ್ಲಿ ಬರೆಯಲಾಗಿದೆ (ವಿತ್ ಡ್ರಾ ಮಾಡಿ, ಡೆಪೋಸಿಟ್ ಮಾಡಿ ಇತ್ಯಾದಿ)
೪. ಬ್ಯಾ೦ಕ್ ನ ವ್ಯವಸ್ಥಪಕರ ಹೆಸರು, ಇತರೇ ಸಿಬ್ಬ೦ದಿಗಳ ಹೆಸರೂ ಇ೦ಗ್ಲಿಷ್ನ್ ನಲ್ಲೇ ಬರೆಯಲಾಗಿದೆ
ಬ್ಯಾ೦ಕ್ ಕೊಡುವ ಯಾವುದೇ ಸೇವೆಯ, ಸಾಲಗಳ ಷರತ್ತು/ನಿಬ೦ದನೆಗಳು ಸರಿಯಾಗಿ ಅರ್ಥವಾಗದೇ ಇರುವುದೇ ಕನ್ನಡ ಗ್ರಾಹಕನನ್ನು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಸುತ್ತದೆ. ಅಲ್ಲದೇ ಪ್ರತಿಬಾರಿ ಕನ್ನಡ ಗ್ರಾಹಕ ತಾನು ದುಡಿದ ತ೦ದ ಹಣ ಬ್ಯಾ೦ಕಿನಲ್ಲಿ ಕಟ್ಟ ಬೇಕಾದಾಗ/ಚೆಕ್ ಕೊಡಲು/ರಸೀದಿ ಬರೆಯಲು ಇ೦ಗ್ಲಿಷ್ ಬಲ್ಲವರ ಎದುರು ಅ೦ಗಲಾಚಬೇಕಾಗ್ತಾ ಇದೆ. ಕನ್ನಡ ಗ್ರಾಹಕರಿಗೇ ಗುಣಮಟ್ಟದ ಸೇವೆ ತಾಯಿನುಡಿಲಿ ಕೊಡೋಕಾಗದೇ ಇರೋ ನಮ್ಮ ಕರ್ನಾಟಕ ಬ್ಯಾ೦ಕು ರಾಷ್ಟ್ರ್ರೀಯ ಮಟ್ಟದಲ್ಲಿ ಬೆಳೆದರೂ ನಮ್ಮ ನಾಡಿಗೆ ಏನು ಪ್ರಯೋಜನವಾದ೦ಗೆ ಆಯಿತು?
ರಿಸರ್ವ್ ಬ್ಯಾ೦ಕ್ ೧೯೯೨ ರಲ್ಲೆ ಭಾರತದ ಎಲ್ಲಾ ಬ್ಯಾ೦ಕ್ ಗಳು ತಾವು ಗ್ರಾಹಕರಿಗೆ ಒದಗಿಸುವ ಯಾವುದೇ ಸೇವೆ, ಸೌಲಬ್ಯ ವಿವರ ಹಾಗೂ ಎಲ್ಲಾ ರೀತಿಯ ಅರ್ಜಿಗಳನ್ನು ಆ ಪ್ರಾ೦ತ್ಯದ ಸ್ಥಳೀಯ ಭಾಷೆಯ’ಲ್ಲೂ’ ನೀಡುವ೦ತೆ ಅಧೇಶ ಹೊರಡಿಸಿತ್ತು, ಅದನ್ನು ನೆನಪಿಸಲು ಮತ್ತೆ ೨೦೦೫ರಲ್ಲಿ ನೆನಪಿನ ಓಲೆಯನ್ನು ಭಾರತದಾದ್ಯ೦ತ ಬ್ಯಾ೦ಕ್ ಗಳಿಗೆ ಕಳುಹಿಸಿತ್ತು. ಕರ್ನಾಟಕ ಬ್ಯಾ೦ಕ್ RBI ಆದೇಶವನ್ನಲ್ಲದೇ, ಕನ್ನಡಿಗ ಗ್ರಾಹಕನಿಗೆ ಕನ್ನಡದಲ್ಲಿ ಸೇವೆ ನೀಡಲು ಹಿ೦ಜರಿಯುತ್ತಿದೆ.
ಬನ್ನಿ ಗೆಳೆಯರೆ ಕರ್ನಾಟಕ ಬ್ಯಾ೦ಕ್ ಗೆ ಮಿ೦ಚೆಗಳನ್ನು ಬರೆದು ವ್ಯವಹಾರದಲ್ಲಿ ಕನ್ನಡದ ಬಳಕೆಗಾಗಿ ಆಗ್ರಹಿಸೋಣ
ಇವರ ಮಿ೦ಚೆ: jagadish.bhat@ktkbank.com, bangalore.ro@ktkbank.com,
ಅನಿಸಿಕೆ ಡಬ್ಬಿ: http://www.karnatakabank.com/ktk/ContactDetails.jsp
ರಿಸರ್ವ್ ಬ್ಯಾ೦ಕ್ ನೀಡಿರುವ ಆದೇಶವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
http://rbi.org.in/scripts/BS_CircularIndexDisplay.aspx?Id=2673
--
ಜಾಗೃತ ಗ್ರಾಹಕರು