ಗುರುರಾಜರ ಈ ಕೃತಿಯ ಸಾಲಿನ ಅರ್ಥವೇನೆಂದು ಹೇಳಬಲ್ಲಿರಾ?

ಗುರುರಾಜರ ಈ ಕೃತಿಯ ಸಾಲಿನ ಅರ್ಥವೇನೆಂದು ಹೇಳಬಲ್ಲಿರಾ?

Comments

ಬರಹ

ನಮಗೆಲ್ಲರಿಗೂ ಗೊತ್ತಿರುವಂತೆ  ಗುರುರಾಜ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಏನಗೆ ಗೋವಿಂದ.." ಕನ್ನಡದಲ್ಲಿ ಅವರು ಬರೆದ ಅಪರೂಪದ ಕೃತಿಗಳಲ್ಲಿ ಒಂದು.ಇದರಲ್ಲಿ ಬರುವ ಒಂದು ಸಾಲುಃ


"ಧಾರುಣಿಯೊಳು ಭೂಭಾರಜೀವ ನನಾಗಿ, ದಾರಿತಪ್ಪಿ ನೆಡೆದೆ ಸೇರಿದೆ ಕುಜನರ"


ಇದರಲ್ಲಿ ಬರುವ ಒಂದು ಸಾಲು ಸ್ವಾಮಿಗಳು ಸ್ವತಹಃ ತಮಗೆ ತಾವೇ ಹೇಳಿಕೊಂಡಿದ್ದರೆಯೇ("ದಾರಿತಪ್ಪಿ ನೆಡೆದೆ ಸೇರಿದೆ ಕುಜನರ")ಎಂದು ನನ್ನ ಅನಿಸಿಕೆ? ಏಕೆಂದರೆ ನಮಗೆಲ್ಲಾ ತಿಳಿದಿರುವಂತೆ ಅವರು ಕಡುಬಡತನದ ಕುಟುಂಬದಿಂದ ಬಂದು, ಅನೇಕ ಕಷ್ಟಕಾರ್ಪಣ್ಯ ಎದುರಿಸಿ, ನಂತರ ವಾಗ್ದೇವಿಯ ಅನತಿಯಂತೆ ಗುರು ಪದವಿಗೇರಿದವರು...ಆದರೂ ಅವರು "ದಾರಿತಪ್ಪಿ ನೆಡೆದೆ ಸೇರಿದೆ ಕುಜನರ" ಎಂದು ಹೇಳುವ ಅವಶ್ಯಕತೆ ಏನಿದ್ದಿರಬಹುದು? ಇಲ್ಲಾ ಅವರು ಆ ಕೃತಿಯ ಭಾಗವಾಗಿ ಹೇಳಿದ್ದರೋ? ನೀವು ಹೇಳಬಲ್ಲಿರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet