ಬಾ ಇಲ್ಲಿ ಸಂಭವಿಸು!

ಬಾ ಇಲ್ಲಿ ಸಂಭವಿಸು!

ತುಂಬಾ ಹಿಂದೆ ಭಾವಗೀತೆಗಳ ಬಗ್ಗೆ ಇಲ್ಲಿ  http://sampada.net/blog/savithru/02/06/2008/9071 ಬರೆಯಲು ಹೊರತು ಸುಮ್ಮನಾಗಿದ್ದೆ.

ಇವತ್ತು ಕುವೆಂಪು ಅವರ "ಬಾ ಇಲ್ಲಿ ಸಂಭವಿಸು"  ಗೀತೆಯ ಬಗ್ಗೆ ಬರಿಯೋಣ ಅಂತ ಕೂತ್ಕೊಂಡೆ.

ಉ ಹೂ... ಅನೇಕ ಬಾರಿ ಹಾಡು ಕೇಳಬೇಕು ಅನ್ನುಸ್ತು, ಮತ್ತು ಕೇಳಿದೆನೋ ಹೊರತು.. ಈ ಹಾಡಿನ ಬಗ್ಗೆ ಏನೂ ಬರಿಯಕ್ಕೆ ಪದಗಳು ಸಿಗಲಿಲ್ಲ.

ಕುವೆಂಪು ಅವರಿಗೆ, ಅವರ ಕಾವ್ಯ ಶಕ್ತಿಗೆ ನಮಸ್ಕಾರ ಹಾಕ್ತಾ ಈ ಸಾಹಿತ್ಯ ಮತ್ತು ಹಾಡು.

baa illi sambavisu...

ಸಾಹಿತ್ಯ :: 

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ..
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿಹೇ ಭವ ವಿದೂರಾ

ನಿತ್ಯವೂ ಅವತರಿಪ ಸತ್ಯಾವತಾರಾ 
ನಿತ್ಯವೂ ಅವತರಿಪ ಸತ್ಯಾವತಾರಾ

|| ಬಾ ಇಲ್ಲಿ ||

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದೆನ್ನಾ  ನರ ರೂಪ ಚೇತನದೀ...
ಮೂಡಿ ಬಂದೆನ್ನಾ ನರ ರೂಪ ಚೇತನದಿ
ನಾರಾಯಣತ್ವಕ್ಕೆ  ದಾರಿ ತೋರ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ ,
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ,

ಅವತರಿಸು ಬಾ...
ಅವತರಿಸು ಬಾ...

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

|| ಬಾ ಇಲ್ಲಿ ||

Rating
Average: 5 (1 vote)

Comments