ಪ್ರಶ್ನೆ ಮತ್ತು ಉತ್ತರ!!!

ಪ್ರಶ್ನೆ ಮತ್ತು ಉತ್ತರ!!!

ಪ್ರಶ್ನೆ-ಉತ್ತರ ಇವೆ ನೋಡಿ
ಅವು ಹಕ್ಕಿಗಳಂತೆ ಜೋಡಿ


ಸಖೀ ಮತ್ತು ನಾನಿರುವಂತೆ
ಇವೂ ಸದಾ ಜೊತೆಯಂತೆ


ಇವು ಒಂದಕ್ಕೊಂದು ಪೂರಕ
ಆಗಬಾರದವೆಂದೂ ಮಾರಕ


ಪ್ರಶ್ನೆ ಇದ್ದಲ್ಲೆಲ್ಲಾ ಉತ್ತರ ಇದೆ
ಉತ್ತರ ಇದ್ದಲ್ಲೆಲ್ಲಾ ಪ್ರಶ್ನೆ ಇದೆ


ಉತ್ತರವೇ ಇರದ ಪ್ರಶ್ನೆ ಇದ್ದಲ್ಲಿ
ಕಾಡುವುದೀ ಬಾಳು ನಮ್ಮನ್ನಿಲ್ಲಿ


ಪ್ರಶ್ನೆ ಇರದ ಉತ್ತರವು ಇರಲು
ನೀವೇ ಹೇಳಿ ಅದ್ಯಾರ ಪಾಲು


ಪ್ರಶ್ನೆ ಅನಿಸಬಹುದು ರೋಚಕ
ಇದ್ದಾಗ ಅದರುತ್ತರವು ರೋಚಕ


ಉತ್ತರ ಅನಿಸಿದರೆಮಗೆ ನಿಸ್ಸಾರ
ಆ ಪ್ರಶ್ನೆಯಲೂ ಇರದೇನು ಸಾರ


ಪ್ರಶ್ನೆ ಮೇಲೋ ಉತ್ತರ ಮೇಲೋ
ಕೇಳ್ವವನೋ ಪೇಳ್ವವನು ಮೇಲೋ


ಎಂಬ ಜಂಜಾಟವೇ ಇರಬಾರದಿಲ್ಲಿ
ಎಲ್ಲರೂ ನಿಜದಿ ಸರಿ ಸಮಾನರಿಲ್ಲಿ


ಉತ್ತರವನರಿತು ಪ್ರಶ್ನೆ ಕೇಳುವವನು
ಅರಿಯದವಗಲ್ಲಿ ತಿಳಿ ಹೇಳುವವನು


ತಾನರಿಯದಲೆ ಪ್ರಶ್ನೆ ಕೇಳುವವನು
ಅರಿತವನಿಂದ ಅರಿತು ಕೊಳ್ಳುವವನು


ಪ್ರಶ್ನೆ ಇದ್ದಲ್ಲಿ ಸದಾ ಉತ್ತರವೂ ಇರಲಿ
ಉತ್ತರಗಳೇ ಇಲ್ಲದ ಪ್ರಶ್ನೆಗಳಿಲ್ಲದಿರಲಿ
********************


 


-ಆತ್ರಾಡಿ ಸುರೇಶ್ ಹೆಗ್ಡೆ.

Rating
No votes yet