ಸೋಲಾರ್ ಇಂಪಲ್ಸ್ - ವಿಶ್ವದ ಸುತ್ತ ಒಂದು ಸುತ್ತು

ಸೋಲಾರ್ ಇಂಪಲ್ಸ್ - ವಿಶ್ವದ ಸುತ್ತ ಒಂದು ಸುತ್ತು

ಬರಹ

ವಿಶ್ವಪರ್ಯಟನೆಗೆ ಇಲ್ಲೊಂದು ತಂಡ ಸಿದ್ಧವಾಗಿ ನಿಂತಿದೆ... ಪರಿಸರ ಪ್ರೇಮಿಗಳೂ ಕೂಡ ಇದನ್ನು ಮೆಚ್ಚುವುದಂತೂ ನಿಜ. ಹೌದು... ಈ ವಿಶ್ವಪರ್ಯಟನೆಗೆ ಬೇಕಿರುವ ಇಂದನ ಸೌರಶಕ್ತಿ. ಸೂರ್ಯನಿಂದ ಬರುತ್ತಿರುವ ಅಗಾಧ ಬೆಳಕಿನ್ನೂ ಕೂಡ ವಿಮಾನದಂತಹ ಮಾನವ ನಿರ್ಮಿತ ಹಕ್ಕಿಯನ್ನು ಹಾರಿಸಲಿಕ್ಕೆ ಉಪಯೋಗಿಸಬಹುದು ಎಂದು ತೋರಿಸಲು ಸೋಲಾರ್ ಇಂಪಲ್ಸ್ ಎಂಬ ಸ್ವಿಡ್ಜರ್ಲ್ಯಾಂಡ್ ನ ಒಂದು ತಂಡ ಮುಂದಾಗಿದೆ. ವಿಶ್ವದ ೪೦-೫೦ ವಿಜ್ಞಾನಿಗಳು ಈ ಒಂದು ಪ್ರಯೋಗದಲ್ಲಿ ನೆರವಾಗುತ್ತಿದ್ದಾರೆ.

ಸೋಲಾರ್ ಇಂಪಲ್ಸ್

ಸೋಲಾರ್ ಇಂಪಲ್ಸ್ ಒಬ್ಬ ವ್ಯಕ್ತಿಯನ್ನು ಹೊತ್ತೊಯ್ಯಬಲ್ಲ, ೪ ಸೋಲಾರ್ ಮೋಟಾರುಗಳಿಂದ ಮಾಡಲ್ಪಟ್ಟ ಹಗುರ ವಿಮಾನ. ಇದೀಗ ಇದರ ಮೊದಲ ಮಾದರಿ ವಿಮಾನ ತನ್ನ ರನ್-ವೇ ಪರೀಕ್ಷೆ ಮುಗಿಸಿದೆ. ವಿಜ್ಞಾನಿಗಳು ವೇಗ, ಹಾರಾಟ ಇತ್ಯಾದಿಗಳ ಪ್ರಯೋಗ ಮುಂದುವರೆಸಿದ್ದು, ಮುಂದಿನ ವರ್ಷದಲ್ಲಿ ವಿಮಾನ ಹಾರಾಡಲಿಕ್ಕೆ ಶುರುಮಾಡಲಿದೆ. ಪ್ರಯೋಗ ಫಲಪ್ರದವಾದಲ್ಲಿ ಈ ವಿಮಾನ ೨೦-೨೫ ದಿನಗಳ ಪೂರ್ಣಪ್ರಮಾಣದ ವಿಶ್ವಪರ್ಯಟನೆಗೆ ಮುಂದಾಗುತ್ತದೆ.

ಸೋಲಾರ್ ಇಂಪಲ್ಸ್ ಒಂದೇ ಸೌರ ಶಕ್ತಿ ಇಂದೆ ಕೆಲಸ ಮಾಡುವ ವಿಮಾನವಲ್ಲ, Odysseus ಅನ್ನೋ ಇನ್ನೊಂದು ವಿಸ್ಮಯದ ಬಗ್ಗೇ ನೀವೇ ಓದಿ ತಿಳಿಯಿರಿ.