ನಾನ್ ಯಾಕ್ ತಮಿಳ್ ಕಲಿಬೇಕು!?

ನಾನ್ ಯಾಕ್ ತಮಿಳ್ ಕಲಿಬೇಕು!?

ಎಂದಿನಂತೆ ಇವತ್ತ್ ಬೆಳಿಗ್ಗೆ ಜಾಗಿಂಗ್ ಆದ್ಮೇಲೆ ಕುಟ್ಟಿ ಚಾ ಅಂಗಡಿ ಹೋದವ ಚಾ ಹೀರುತಿದ್ದೆ.ಎದುರಿಗೆ ಕುಳಿತಿದ್ದ ತಾತ ಅದೇನೋ ತಮಿಳಿನಲ್ಲಿ ಆ ಕುಟ್ಟಿಗೆ ಹೇಳ್ತಿದ್ರು.ನನ್ನ ನೋಡಿದವರೇ ಆ ಕುಟ್ಟಿ ಅವರಿಗೆ ರಂಜಾನ್ ಬಿರಿಯಾನಿ ಕೊಡಿಸಿಲ್ಲ ಅಂತ ಅಂತ ತಮಿಳಿನಲ್ಲಿ ಹೇಳಿದ್ರು, ಅಲ್ಪ ಸ್ವಲ್ಪ ಅರ್ಥ ಆಗೋದ್ರಿಂದ ನಕ್ಕು ಸುಮ್ಮನಾದೆ. ಕೆಲ ಹೊತ್ತಿನ ಬಳಿಕ ತಾತ ಮತ್ತೆ ನನ್ನ ಜೊತೆ ತಮಿಳಲ್ಲಿ ಏನೋ ಹೇಳೋಕೆ ಬಂದ್ರು, ನಾನ್ ನನ್ನ ಅರೆ ಬರೆ ತಮಿಳಿನಲ್ಲಿ 'ಯನಕ್ ತಮಿಳ್ ತೆರಿಯಾದ್' ಅಂದೆ.
ಆ ತಾತಪ್ಪ ತಮಿಳ್ ಸ್ಟೈಲ್ ಕನ್ನಡದಲ್ಲಿ 'ನಿಂದ್ ಯಾವ್ ಭಾಷೆ?' 
ನಾನು, 'ಕನ್ನಡ'.
ಆದ್ರೆ ನೀನಕ್ ತಮಿಳ್ ಕೊತ್ತಿರಬೇಕು!
ಹೌದಾ!?ಯಾಕೆ? ನಂಗ್ಯಾಕ್ ಗೊತ್ತಿರಬೇಕು? ಅಂತ ನಾ ಸ್ವಲ್ಪ ಬಿಸಿಯಾದೆ.
'ನೋಡಿ ಸರ್, ಬ್ರಿಟಿಷರ ಕಾಲದಲ್ಲಿ ಕರ್ನಾಟಕ,ತಮಿಳು ನಾಡು,ಕೇರಳ,ಆಂಧ್ರ ಎಲ್ಲವನ್ನ ತಮಿಳುನಾಡಿನ್ನಿಂದ ನಿಯಂತ್ರಿಸ್ತ ಇದ್ರೂ.ಬ್ರಿಟಿಷರು ಎಲ್ಲ ಕಡೆ ತಮಿಳರನ್ನೇ ಕೆಲ್ಸಕ್ಕೆ ಕರ್ಕೊಂಡ್ ಹೋಗ್ತಾ ಇದ್ರೂ'
'ಹ್ಞೂ , ಇರಬಹುದು, ಬ್ರಿಟಿಷರಿಗೆ ಕೆಲಸ ಮಾಡಿಕೊದಕ್ಕು ನಾನ್ ಕನ್ನಡ ಕಲಿಯೋಕು ಏನ್ರಿ ಸಂಬಂಧ? ಅಷ್ಟಕ್ಕೂ ಬ್ರಿಟಿಶರೆನು ನಿಮ್ಮ ಮೇಲಿನ ಪ್ರೀತಿಯಿಂದ ಮಾಡಿದ್ರ ಅವ್ರಿಗೆ ಬೇಕಿತ್ತು ಮಾಡಿದ್ರು ಅಷ್ಟೇ!' ಅಂದೆ
ತಾತಪ್ಪ ಶುರು ಹಚ್ಚಿಕೊಳ್ತು 'ನೋಡಪ್ಪ, ಬ್ರಿಟಿಷರು ಬಂದಿದ್ದೆ ನಮ್ಮನ್ನ ಉದ್ಧಾರ ಮಾಡೋಕೆ'
'ಒಹ್! ಹೌದಾ? ಇಲ್ಲಾಂದ್ರೆ ಏನಾಗ್ತಾ ಇತ್ತು? ಅವ್ರು ಬರಕ್ಕಿಂತ ಮುಂಚೆ ನಾವ್ ಹೇಗಿದ್ವು ಗೊತ್ತ? ಅಷ್ಟಕ್ಕೂ ಅವ್ರು ಇಲ್ಯಾಕೆ ಬಂದ್ರು ಅಂತ ತಮಗೆ ಗೊತ್ತಾ!?
ಹ್ಞೂ! ನಮ್ಮನ್ನ ಉದ್ಧಾರ ಮಾಡೋಕೆ!
ಹೇ ಸುಮ್ನಿರ್ರಿ, ಅವ್ರು ಬಂದಿದ್ದೆ ಕೊಳ್ಳೆ ಹೊಡೆಯೋಕೆ, ದುಡ್ಡ ಬೇಕಿತ್ತು ಅವ್ರ ಸ್ವಾರ್ಥಕ್ಕೆ ಬಂದ್ರು, ನಿಮ್ಮನ್ತವ್ರನ್ನ ನಂಬಿಸಿ ನಮ್ಮ ಮೇಲೆ ಸವಾರಿ ಮಾಡಿದ್ರು ಅಷ್ಟೇ.
ಹೇಯ್ ಹಂಗೆಲಿಪ್ಪ, ನಾನ್ ಹೇಳೋದು ಕೇಳು, ಹಾಗೆ ಮಾಡಿದ್ದು ಮೊಘಲ್ ಅವ್ರು, ಇವರಲ್ಲ.
ರೀ ಸ್ವಾಮೀ ಅವ್ರು,ಇವ್ರು ಎಲ್ಲ ಅಷ್ಟೇ.ಅವ್ರು ಸವಾರಿ ಮಾಡ್ಕೊಂಡೆ ಬಂದ್ರು. ಇವ್ರು ಕೈ ಮುಗಿದು ಒಳ ಬಂದು ಕತ್ತು ಕುಯ್ದರು.
ಉನುಕು ಹಿಸ್ಟರಿ ತೆರಿಮ?
ನಿಮ್ಮಷ್ಟಿಲ್ಲ ಸ್ವಾಮೀ, ಕೊಂಚ ಕೊಂಚ ಗೊತ್ತು! , ಆದ್ರೆ ನಿಮ್ಮಂತವರು ಹೇಳೋ ಸುಳ್ಳು ಕಥೆ ಅರ್ಥವಾಗುತ್ತೆ  ಸುಮ್ನಿರಿ,ಅಂತೇಳಿ ಆಫಿಸಿಗೆ ಟೈಮ್ ಆಗ್ತಾ ಇದೆ ಅಂತ ಹೊರ ಬರ್ತಾ ಇದ್ರೆ,
ಆ ಕಡೆಯಿಂದ ತಾತ 'ಹೇಯ್, ನೀ ಈಗ ಹೋಗಿ ಬಂದ್ಯಲ್ಲ ಆ ಜಾಗಿಂಗ್ ಅದನ್ನ ಅವ್ರೆ ಹೇಳಿಕೊಟ್ಟಿದ್ದು,ಅವ್ರು ಬರಲಿಲ್ಲ ಅಂದ್ರೆ ನಿಮಗೆ ಫುಟ್ ಬಾಲ್,ವಾಲೀ ಬಾಲ್ ಯಾವ್ದು ಗೊತ್ತಾಗ್ತಾ ಇರಲಿಲ, ಬರಿ ಕಬ್ಬಡ್ಡಿ ,ಕೋಕೋ ಆಡ್ಬೇಕಿತ್ತು!'
ಈ ತಾತಂದು ಯಾಕೋ ಜಾಸ್ತಿ ಆಯ್ತು ಅನ್ನಿಸಿ ಮತ್ತೆ ವಾಪಸ್ ಹೋಗಿ ಹೇಳಿ ಸ್ವಾಮೀ ಅವ್ರು ಇಲ್ಲಿ ಬರೋಕೆ ಮುಂಚೆ ನಾವ್ ಹೇಗಿದ್ವಿ ಅಂದೆ?
'ಹೇ ಏನ್ ಹುಡ್ಗಾನೋ ಹೇಳಿದ್ದ ಅರ್ಥಾನೆ ಆಗೋಲ್ಲ ನಿಂಗೆ' ಅಂತ ತಾತಪ್ಪ ಅಲ್ಲಿಂದ ಎಸ್ಕೇಪ್.

ಆಮೇಲೆ ಚಾ ಅಂಗಡಿ ಕುಟ್ಟಿ ಹೇಳಿದ ಆ ತಾತಪ್ಪ ನಿವೃತ್ತ ಸೈನಿಕ ಅಂತ. ಮತ್ತೆ ಆ ತಾತ ಸಿಕ್ಕಿದ್ರೆ ಬ್ರಿಟಿಷರನ್ನ ಪಕ್ಕಕ್ಕಿಟ್ಟು 'ನಾನ್ ಯಾಕ್ ತಮಿಳ್ ಕಲಿಬೇಕು!?' ಅಂತ ಕೇಳ್ತೀನಿ ;)

Rating
No votes yet

Comments