ವೈವಾಹಿಕ ಜೀವನ ತೊರೆದ ನಂತರ.....

ವೈವಾಹಿಕ ಜೀವನ ತೊರೆದ ನಂತರ.....

                ಎಂದಿನಂತೆ ಇವತ್ತೂ ಕೂಡ ಬೆಳಗ್ಗೆ ನನ್ನ ಮೆಚ್ಚಿನ ಎಫ್.ಎಮ್.ರೈನ್ ಬೋ ಹಾಕಿದಾಗ ನೆನಪಿನ ದೋಣಿ ಆಗ್ಲೇ ಅರ್ಧ ದಾರಿ ಬಂದುಬಿಟ್ಟಿತ್ತು...ನಂತರದ ಕಾರ್ಯಕ್ರಮ ಕಾಕಂಬಿ...ಕೆಲಸದ ನಡುವೆಯೂ ಕಿವಿ ಕಾರ್ಯಕ್ರಮ ಕೇಳ್ತಾ ಇತ್ತು...ಇವತ್ತಿನ ಅತಿಥಿ ಡಾ//ಮಿನಾಕ್ಷಿ ರವಿ. ಕಾಕಂಬಿಯ ವಿಶೇಷವೇ ಹಾಗೇ ಅತಿಥಿಗಳ ಪರಿಚಯ, ಕುಟುಂಬ ಹಿನ್ನೆಲೆ, ಅವರ ಇಂದಿನ ಸ್ಥಿತಿಗೆ ಕಾರಣಗಳು ಹೀಗೇ ಹತ್ತು ಹಲವು ವಿಚಾರಗಳನ್ನ ಕೇಳುಗರಿಗೆ ಕೊಡುತ್ತೆ...ಇವತ್ತಿನ ಅತಿಥಿ ಖ್ಯಾತ ಸಂಗೀತ ಚಿಕಿತ್ಸಕರು. ತಮ್ಮ ವೈವಾಹಿಕ ಜೀವನದ ಬಗ್ಗೆ ಹೇಳ್ತಾ  ನಾನು ನನ್ನ ಪತಿ ಚೆನ್ನಾಗೇ ಇದ್ವು ಆದ್ರೆ ಅವರ ಮನೆಯ ವಾತಾವರಣ ನಂಗೆ ಪೂರಕವಾಗಿರ್ಲಿಲ್ಲ ಅದಿಕ್ಕೆ ನಾನದ್ರಿಂದ  ಹೊರಬರಬೇಕಾಯ್ತು...ಅಂತ  ಹೇಳ್ತಾ ತುಂಬಾ  ಭಾವುಕರಾದ್ರು...  ನಂತರ ಅವ್ರು ಅದರಿಂದ ಹೊರಬಂದು ಏನೆಲ್ಲಾ ಸಾಧಿಸಿದ್ರು, ಮತ್ತಿನ್ನೇನು ಸಾಧಿಸೋದಿದೆ ಅಂತ ಹೇಳಿದ್ರು...ಇದೇ ರೀತಿ ತುಂಬ ಜನರನ್ನ ನಾನ್ ನೋಡಿದ್ದೇನೆ, ಒಂದು ಹೆಣ್ಣು ತನ್ನ ವೈವಾಹಿಕ ಜೀವನ ಮುರಿದು ಬಿದ್ರೂ, ಮಕ್ಕಳನ್ನೂ ಕಟ್ಟಿ ಕೊಂಡು ಏನೆನೆಲ್ಲಾ ಸಾಧನೆಗಳನ್ನ ಮಾಡಿದ್ದಾರೆ! ಆದ್ರೆ ಅದೇ ಒಬ್ಬ ಪುರುಷ ತನ್ನ ವೈವಾಹಿಕ ಜೀವನ ಮುರಿದು ಬಿದ್ರೆ ದುಶ್ಚಟಗಳ ದಾಸನಾಗೋ ಇಲ್ಲಾ ಬೇರೊಂದು ಸಂಬಂಧ ಮಾಡಿಕೊಂಡೋ ತನ್ನ ಜೀವನ ಸಾಗಿಸೋದು ಸರ್ವೇ ಸಾಮಾನ್ಯ...ಮಕ್ಕಳ ಜವಾಬ್ದಾರಿ ಕೂಡ ಆತನಿಗಿರೋದಿಲ್ಲ! ಆದ್ರೂ ಸಾಧಕರ ಸಾಲಿನಲ್ಲಿ ನಿಲ್ಲುವವರು ತುಂಬಾ ಕಡಿಮೆ(ದುರ್ಬೀನು ಹಾಕಿ ಹುಡುಕ ಬೇಕು). ಆದ್ರೆ ಒಂದು ಹೆಣ್ಣು ತನ್ನ ವೈವಾಹಿಕ ಜೀವನವನ್ನ ತೊರದ ನಂತರವೂ ಎಷ್ಟೆಲ್ಲಾ ಕಷ್ಟ, ತೊಂದರೆಗಳನ್ನ ಅನುಭವಿಸಿ ಏನಾದ್ರು ಸಾಧಿಸಿ ತೋರಿಸಿದ್ದಾಳೆ. ಇಷ್ಟಾದ್ರೂ ಆಕೆ ತನ್ನ ಹಿಂದಿನ ದಿನಗಳನ್ನ ಮರೆತಿರೋದಿಲ್ಲ! ಯಾವ್ದಾದ್ರೂ ಒಂದು ಘಳಿಗೆಯಲ್ಲಿ ಅವಳ ಆ ಸುಪ್ತ ಮನ ಪಶ್ಚಾತ್ತಾಪದ ಸುಳಿಯೊಳಗೆ ಅವಳನ್ನೆಳೆದು ಅವಳನ್ನ ಭಾವುಕಳನ್ನಾಗಿ ಮಾಡಿಬಿಡುತ್ತೆ...ಅವಳ ನಿರ್ಧಾರ ತಪ್ಪೋ ಸರಿಯೋ ಅಂತ ಒಮ್ಮೆ ಒಮ್ಮೆ ಹಿಂತಿರುಗಿ ನೋಡುವಂತೆ ಮಾಡೋ ಅಂಥ ಆ ಮನದಾಳದ ಭಾವನೆಗಳು ಗಂಡಸರಲ್ಲಿ ಅತ್ಯಂತ ವಿರಳ....   

Rating
No votes yet

Comments