ವರ್ತೂರು ನಾರಾಯಣ ರೆಡ್ದಿ

ವರ್ತೂರು ನಾರಾಯಣ ರೆಡ್ದಿ

ನಿನ್ನೆ ಹಾಸನದಲ್ಲಿ ಒಬ್ಬ ಸರಳ ವ್ಯಕ್ತಿಯ ಮಾತು ಕೇಳುವ ಅವಕಾಶ ದೊರೆಯಿತು. ಹೆಸರು ವರ್ತೂರು ನಾರಾಯಣ ರೆಡ್ಡಿ.ವಯಸ್ಸು ಸುಮಾರು ೮೦ ವರ್ಷ. ಒಂದು ತುಂಡು ಪಂಚೆ,ಒಂದು ಶರ್ಟ್, ಕೊರಳಲ್ಲಿ ಒಂದು ಟವಲ್. ಅವರ ಬಟ್ಟೆಯ ಒಟ್ಟು ಬೆಲೆ ೧೨೦ ರೂಪಾಯಿ. ಆರೀತಿಯ ಮೂರು ಜೊತೆ ಬಟ್ಟೆ ಅವರಿಗಿದೆಯಂತೆ. ಕೃಷಿಯನ್ನೇ ತಪಸ್ಸಾಗಿ ಸ್ವೀಕರಿಸಿರುವ ಇವರು ದಿನವೂ ಮರಒಂದನ್ನು ನೆಡದೆ ಊಟ ಮಾಡುವುದಿಲ್ಲ. ದೇಶೀಯ ಗೋವುಗಳೆಂದರೆ ಪಂಚ ಪ್ರಾಣ. ಹಸು ಮತ್ತು ಭೂಮಿ ಇವೆರಡೇ ದೇವರೆಂದು ನುಡಿಯುವ ಇವರು ಮನುಷ್ಯನ ಭೋಗ ಜೀವನ ಇದೇ ರೀತಿ ಮುಂದುವರೆದರೆ ಮುಂದೆ ನಮ್ಮ ಮಕ್ಕಳು ಮೊಮ್ಮಕ್ಕಳ ಕಾಲಕ್ಕೆ ಕುಡಿಯಲು ನೀರೂ ಸಿಗುವುದಿಲ್ಲ, ಉಸಿರಾಡಲು ಶುದ್ಧ ಗಾಳಿಯೂ ಸಿಗುವುದಿಲ್ಲ ಎಂದು ಮರುಗುತ್ತಾ ಈ ಬಗ್ಗೆ ಜರನ್ನು ಕೈ ಮುಗಿದು ಕೇಳಿಕೊಳ್ಳುತ್ತಾರೆ " ಪ್ರಕೃತಿಗೆ ಹಾನಿ ಮಾಡುವುದನ್ನು ನಿಲ್ಲಿಸಿ!!" ಆರೇಳು ದೇಶಗಳನ್ನು ಸುತ್ತಿರುವ ಇವರು ಈಗಲೂ ಒಂದು ಹಳೆಯ ಸೈಕಲ್ ತುಳಿದುಕೊಂಡೇ ತಮ್ಮೂರಲ್ಲಿ ಓಡಾಡುತ್ತಾರೆ. ಆಧುನಿಕತೆ ಹೆಸರಲ್ಲಿ ಯುವಕರು ಧರಿಸುತ್ತಿರುವ ಉಡಿಗೆತೊಡಿಗೆಯನ್ನು ಕಂಡು ಇದು ಜನರ ಹುಚ್ಚುತನವೆಂದು ಬಣ್ಣಿಸುತ್ತಾರೆ. ಹೋಟೆಲಿನಲ್ಲಿ ಕಾಫಿ ಲೋಟ ತೊಳೆದುಕೊಂಡು ಹತ್ತಾರು ವರ್ಷ ಬದುಕಿರುವ ನನ್ನನ್ನು ಇಂದು ಪ್ರಪಂಚವು ಗುರುತಿಸಿದೆ ಎಂದರೆ ಅದಕ್ಕೆ ಕಾರಣ ನನ್ನ ಭೂಮಿತಾಯಿಯ ಪೂಜೆ ಎಂದು ಗದ್ಗತಿತರಾಗುತ್ತಾರೆ. ಅವರ ಬಗ್ಗೆ ಬರೆಯುವುದು ತುಂಬಾ ಇದೆ. ಆದರೆ ಅವರ ಮಾತಿನಿಂದಲೇ ಕೇಳಿದರೆ ಚೆನ್ನ. ಈಗಾಗಲೇ ನಾನು ಕೇಳಿ ಮೆಚ್ಚಿರುದ ಭಾಷಣಗಳ ಧ್ವನಿಯನ್ನು ಕೇಳಿಸುವ ಪ್ರಯತ್ನಮಾಡಿರುವೆ. ಅವರ ಧ್ವನಿ ಕೇಳಬೇಕೆನ್ನುವವರು ದಯಮಾಡಿ ನನಗೆ ಮೇಲ್ ಮಾಡಿದರೆ ಅವರಿಗೆ ಕಳಿಸಿಕೊಡುವೆ ಅಥವಾ ಸಂಪದದಲ್ಲಿ ಪೇರಿಸಬೇಕೆಂದರೆ ಪೇರಿಸುವೆ.

---------------------------------------------------

ಸ್ನೇಹಿತರ ಇಚ್ಛೆಯಂತೆ ರೆಡ್ದಿಯವರ ಧ್ವನಿಯ ಕೊಂಡಿ ನೀಡಿರುವೆ.

ಹರಿಹರಪುರಶ್ರೀಧರ್

೨೬.೧೧.೨೦೦೯ ರಾತ್ರಿ ೯:೫೦

http://www.binfire.com/rel/?page=hotlink&id=226145:0:0

 

Rating
No votes yet

Comments