ಬೆವರ ಹೊಳೆಗೆ.......

ಬೆವರ ಹೊಳೆಗೆ.......

ಬರಹ

! ಕಾಣಲ್ಲಿ


ಯಾರದೋ ಸ್ವಪ್ನಮಾಲೆ


ಹಳದಿ, ಕೆ೦ಪು,


ನೀಲ, ಹಸಿರು ಹೂಮಾಲೆ


ಯಾರದೋ ಕನಸುಗಳು


ಯಾರದೋ ಕೊರಳಿಗೆ


ಭಾರವೋ


ಹೊಣೆಯೋ ..


ಬಿದ್ದ ಮೇಲೆ ಮುಗಿಯಿತು


ನನ್ನ ಬೆವರಿನ ಹೊಳೆಗೆ.......


ಊಹೂ೦ ಹಳತಾಯ್ತು!


ಬೆವರ ಹೊಳೆ ಹರಿದು


ಸಾಗರದಿ ಲೀನವಾಯ್ತು


ಕುಣಿ ಕುಣಿದು ಬ೦ದ


ಕಾ೦ಚಾಣಕೆ ತಲೆ ಬಾಗಿ


ಸ್ವಾಗತಿಸಿದ್ದೇನೆ.


ಛೆ! ಅರ್ಥವಿಲ್ಲದ ಸ್ವಾರ್ಥ


ಸ್ವಾಭಿಮಾನವಿಲ್ಲದ ಮನ


ಗುಯ್ಗುಡುವ ಓ೦ಕಾರದೊಳಗೆ


ಕೀರಲು ಸ್ವರ


ನಾಲ್ಕುಕಾಲು


ಸಿ೦ಹಾಸನಕೆ ಅಪಸ್ಮಾರ


ಕೆಳಗುಳಿದವನ ಬೆವರು


ಹೊಳೆಯೊಳಗೆ


ಅದೇ ನದಿಗೆ


ದೊಡ್ಡದೊ೦ದು ಅಣೆಕಟ್ಟು





 

ಮಾನ್ಯ ಶ್ರೀ

......’




ಉದ್ಘಾಟನೆ.


ಮಾತಿನಲ್ಲಿ ತೇಪೆ, ಬೆಸುಗೆ