ಉತ್ತರ ಕರ್ನಾಟಕದ ನಾರಿಗೆ ಭಾರತೀಯ ಸಂಸ್ಕೃತಿಯೇ ಮುಳುವಾಗಿದೆ ಇಲ್ಲಿ?

ಉತ್ತರ ಕರ್ನಾಟಕದ ನಾರಿಗೆ ಭಾರತೀಯ ಸಂಸ್ಕೃತಿಯೇ ಮುಳುವಾಗಿದೆ ಇಲ್ಲಿ?

Comments

ಬರಹ

''ಉತ್ತರ ಕರ್ನಾಟಕ ನೆರೆ ಹಾವಳಿ ಪರಿಸ್ಥಿತಿ ಮತ್ತು ಪರಿಹಾರ' ಮಹಿಳಾ ಅಧ್ಯಯನ ಪೀಠ, ಕನ್ನಡ ಹಂಪಿ ವಿಶ್ವ ವಿದ್ಯಾನಿಲಯವು ಇತ್ತೀಚಿಗೆ ಒಂದು ಬಹು ಮುಖ್ಯ ವರದಿ ಬಿಡುಗಡೆ ಮಾಡಿತು. ಇಂಥಹ ವಿಷಯಗಳ ಕುರಿತು ಬೇರಾವ ಶಿಕ್ಷಣ ಸಂಸ್ಥೆಗಳು ಪ್ರಯತ್ನ ನಡೆಸಿರುವುದು ಕಮ್ಮಿ.

ಅದಿರಲಿ, ವಿಷ್ಯ ಏನಪ್ಪಾ ಅಂದ್ರೆ, ಅಧ್ಯಯನ ತಂಡಗಳು ನೆರೆ ಹಾವಳಿ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನತೆಯ ಜೊತೆ ಮಾತಾಡಿದಾಗ ಗೊತ್ತಾಗಿದ್ದು: ಅಲ್ಲಿ ನೆರೆಯಿಂದ ಅತ್ಯಂತ ಹೆಚ್ಚಿನ ಸಂಕಷ್ಟಕ್ಕೆ ಒಳಗಾದವರು ಮಹಿಳೆಯರು ಮತ್ತು ದಲಿತರು ಹಾಗು ಅಲ್ಪ ಸಂಖ್ಯಾತರು. ಅದರಲ್ಲೂ ಮಹಿಳೆಯರಿಗೆ ನಮ್ಮ ಸಮಾಜ ಪುರುಷರಂತೆ ಎಲ್ಲ ವಿದ್ಯೆಗಳನ್ನ  ಕಲಿಸುವುದಿಲ್ಲ. ಮನೇಲಿ ಇರೋಳಿಗೆ ಇವೆಲ್ಲ ಯಾಕೆ ಎಂದು ತಾತ್ಸಾರ ಮೂಡಿಸುವುದು/ ನಿರಾಕರಿಸುವುದು. ಈಜು ಕಲಿಯದ್ದರಿಂದ ಅವರು ಪಟ್ಟ ಪಾಡು ಅವರೇ ಬಲ್ಲರು. ಎಲ್ಲದಕ್ಕೂ ಗಂಡಸರನ್ನೇ ಅವಲಂಬಿಸಬೇಕಾಯ್ತು. ಇನ್ನು ಸೀರೆ ಉಡುಪು, ಅವರು ಬಹು ಸುಲಭವಾಗಿ ಎಲ್ಲೆಂದರಲ್ಲಿ ನೆರೆಯಿಂದ ತಪ್ಪಿಸಿಕೊಂಡು ಓಡಾಡಲು ಭಾರಿ ಮಾನಸಿಕ ತೊಂದರೆ ಉಂಟು ಮಾಡಿತು. ಪ್ರತ್ಯೇಕ ಶೌಚಗಳಿಲ್ಲದೆ ಒಂದೇ ಟೆಂಟ್ ಅಡಿಯಲ್ಲಿಯೋ, ದೇವಸ್ಥಾನದಲ್ಲಿಯೋ ಜೀವನ ನೂಕಬೇಕಾಯ್ತು. ಹಿರಿಯ ಮಹಿಳೆಯರು ಹೇಳುವಂತೆ, "ನಮ್ಮ ಹೆಣ್ಮಕ್ಕಳ ಮಾನ ನೆರೆ ಹಾವಳಿ ಜೊತೇನೆ ಹೊರಟು ಹೋಯ್ತು".

ಇಂಥಹ ಇನ್ನು ಹತ್ತಲವು ಚಿತ್ರಣಗಳು ಮತ್ತು ಪರಿಹಾರದ ಸ್ಥಿತಿಗತಿ ಕುರಿತು ಮಾಹಿತಿಗಳನ್ನು ಈ ವರದಿ ನೀಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet