ನಾನು "ಬ್ರಾಂಡ್" ಆಗಿ ಬಿಟ್ಟಿರೋದು ಹೌದಾ...? ಓದುಗರೇ ನೀವೆನಂತೀರಿ...?

ನಾನು "ಬ್ರಾಂಡ್" ಆಗಿ ಬಿಟ್ಟಿರೋದು ಹೌದಾ...? ಓದುಗರೇ ನೀವೆನಂತೀರಿ...?

ನನ್ನ ಆತ್ಮೀಯ ಸ್ನೇಹಿತೆಯೊಬ್ಬರೊಂದಿಗೆ ಅಂತರ್ಜಾಲದ ಮೂಲಕ ಇಂದು ಇದೀಗ ಅರ್ಧ ಘಂಟೆಯ ಹಿಂದೆ ಈ ಮಾತುಕತೆ ನಡೆಯಿತು.


ಸ್ನೇಹಿತೆ: "ನಮಸ್ಕಾರ"
ನಾನು:  "ನಮಸ್ಕಾರ"
ಸ್ನೇಹಿತೆ: "ವಿಶೇಷ?"
ನಾನು: "ವಿಶೇಷ ಏನೂ ಇಲ್ಲ, ನೀವೇ ಹೇಳ್ಬೇಕು"
ಸ್ನೇಹಿತೆ: "ನೀವ್ಯಾಕೆ ಕವನ ಮಾತ್ರ ಬರೀತೀರಿ?"
ನಾನು: "ಮತ್ತೇನು ಬರೆಯಲಿ?... ಕವನವನ್ನೇ ಓದಿ ಪ್ರತಿಕ್ರಿಯಿಸೋಲ್ಲ...ಇನ್ನು ಗದ್ಯ ಬರೆದರೆ ಯಾರು ಓದುತ್ತಾರೆ?"
ಸ್ನೇಹಿತೆ: " ಓಹೋ..ನಾನು ಪ್ರತಿಕಿಯಿಸೊಲ್ಲ ಅಂತಾನ?"
ನಾನು: "ಅದೂ ಕಾರಣ. ಆದರೆ ಅದೇ ಕಾರಣ ಅಲ್ಲ. ಗದ್ಯ ಬರೆಯಲು...ಹೆಚ್ಚು ಸಮಯ ಬೇಕು. ಓದಲೂ ಹೆಚ್ಚು ಸಮಯ ಬೇಕು... ಮತ್ತು ಮಾನಸಿಕ ಶಾಂತಿ ಬೇಕು"
ಸ್ನೇಹಿತೆ: "ಹಾಗೇನಿಲ್ಲ"
ನಾನು: "ಗದ್ಯದಲ್ಲಿ ವ್ಯಾಕರಣದ ಬಗ್ಗೆ ಹೆಚ್ಚಿನ ಕಾಳಜಿ ಬೇಕು"
ಸ್ನೇಹಿತೆ: "ಕ್ರಿಯೇಟಿವಿಟಿ ಇರುವವರು ಬಳಸಿಕೊಳ್ಳಬೇಕು... ಸ್ವಲ್ಪ ದಿವಸ ವ್ಯಾಕರಣ ಸರಿಹೋಗುತ್ತೆ... ಬರೆದು ಬರೆದು"
ನಾನು: "ನಾನೂ ಈ ಬಗ್ಗೆ ಯೋಚಿಸುತ್ತಿದ್ದೇನೆ... ವಾರಾಂತ್ಯದಲ್ಲಿ ಬರೆಯುವ ಅಭ್ಯಾಸ ಮಾಡಿಕೊಂಡರೆ ಆದೀತೇನೋ...ಯಾಕಂದ್ರೆ ಹೆಚ್ಚಾಗಿ ನಾನು ಕಚೇರಿಯಲ್ಲಿ ಬರೆಯುತ್ತಿರುವುದು"
ಸ್ನೇಹಿತೆ: "ಎಲ್ಲರಿಗೂ ಒಂದು ತರಹದ ಬ್ರಾಂಡ್ ಆಗಿಹೋಗಿದ್ದೀರಿ...ಹಾಗಾಗೇ ಯಾರೂ ಪ್ರತಿಕ್ರಿಯಿಸೊಲ್ಲ...ಹೆಚ್ಚಾಗಿ"
ನಾನು: "ಅಂದರೆ ಇಷ್ಟ ಆಗುತ್ತಿಲ್ಲ ಅಂತಾನಾ"
ಸ್ನೇಹಿತೆ:  "ಹಾಗಲ್ಲ ...ನನಗೆ ವಿವರಿಸೋದಿಕ್ಕೆ ಗೊತ್ತಾಗ್ತಾ ಇಲ್ಲ... ಅಂದ್ರೆ ಏಕತಾನತೆ ಅನ್ನಿಸುತ್ತೆ.....ನೀವು ೨ ಲೈನ್ ಬರೆಯೋದ್ರಲ್ಲಿ ಸಿದ್ಧ ಹಸ್ತರು ಅಂತಾ ಎಲ್ಲರಿಗೂ ಗೊತ್ತಾಗಿ ಹೋಗಿದೆ"
ನಾನು: "ಹೂಂ"
ಸ್ನೇಹಿತೆ: "ಬೇರೆ ಬೇರೆ ಟ್ರೈ ಮಾಡ್ತಾ ಹೋಗಿ... ನಿಮಗೂ ಬದಲಾವಣೆ ಸಿಗುತ್ತೆ, ನಮಗೂ ..."


ನಾನು: "ಹೂಂ"
ಸ್ನೇಹಿತೆ: "ಬೇಸರಿಸಬೇಡಿ ಹೀಗಂದೆ ಅಂತಾ..."
ನಾನು: "ಇಲ್ಲಾ ಬೇಸರಿಸೋಲ್ಲ.."
ಸ್ನೇಹಿತೆ: "... ಸ್ವಲ್ಪ ಏಕತಾನತೆ, ಅದೇ ತರಹ, ಅದೇ ಸ್ಟೈಲು..ಹಾಗಾಗಿ ನೀವು ವಿಷಯಗಳಲ್ಲಿ ವೈವಿಧ್ಯತೆ ತೋರಿದರೂ...ನಮಗ್ಯಾರಿಗೂ ಅದು ಡಿಫರೆನ್ಸ್ ಅನ್ನಿಸೊಲ್ಲ...ಅದಕ್ಕೆ ನನಗೆ ಪ್ರತಿಕ್ರಿಯಿಸೋದಿಕ್ಕೆ ಗೊತ್ತಾಗ್ತಾ ಇಲ್ಲ...ಹಾಗಾಗಿ ಸುಮ್ಮನಾಗಿಬಿಟ್ಟಿದ್ದೀನಿ...ಓದಲ್ಲ ಅಂತಲ್ಲ, ಓದ್ತೀನಿ, ಆದ್ರೆ ನನ್ನ ಪ್ರತಿಕ್ರಿಯೆಗಳು ಸ್ಟಿರಿಯೋ ಟೈಪ್ ಆಗಿಬಿಡುತ್ತವೆ..."
ನಾನು: "ಹೂಂ...ಸರಿ..ಸದ್ಯ ಒಂದು ದೂರವಾಣಿ ಕರೆಗೆ ಉತ್ತರಿಸುತ್ತಿದ್ದೇನೆ..."


ಸ್ನೇಹಿತೆ: "ಸರಿ...ಕುಯ್ತಾ ಇದ್ದೀನಿ ಅಂತಾ ಗೊತ್ತಾಯಿತು... :-) ... ಕ್ಯಾರಿ ಆನ್"


ನಾನು: " ಇಲ್ಲ ಇಲ್ಲ ಹಾಗೇನಿಲ್ಲಾ..ಆಯ್ತು.. ಹೇಳಿ ಈಗ...ಇದು ನೀವು ಹೇಳುವ ಮೊದಲೇ ನಾನೂ ಯೋಚಿಸ್ತಾ ಇದ್ದೇನೆ...ನಾನು ಮೊನ್ನೆ ಒಬ್ಬರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆ ಕೂಡಾ"
ಸ್ನೇಹಿತೆ: "ಹು, ನಾನು ಓದ್ತೀನಿ ಆದ್ರೆ ಪ್ರತಿಕ್ರಿಯೆ ಏನಂಥ ಕೊಡೋದು, ಉಹು, ಗೊತ್ತಾಗೋದೆ ಇಲ್ಲ...ನಾನು ಫೇಮಸ್ ಆಗಿರೋದೆ ತನ್ನ ಕಮೆಂಟ್ ಗಳಿಂದ... ಹಾಗಾಗಿ ಸುಮ್ಮನಾಗಿಬಿಡ್ತೇನೆ.."
ನಾನು: "... ಒಂದು ವಿಷಯ, ಯಾರೇ ಆಗಲಿ ಬರೆಯುವುದು ತನಗಾಗಿ...ಪ್ರತಿಕ್ರಿಯೆಗಳ ಬಗ್ಗೆ ನಾನು ಹೇಳಿದ್ದು ತಮಾಷೆಗೆ...ನನಗೆ ಆ ಬಗ್ಗೆ ಚಿಂತೆ ಇಲ್ಲ ..."
ಸ್ನೇಹಿತೆ: "ಇಲ್ಲಾ ಮನಸ್ಸಿನ ಮೂಲೆಯಲ್ಲಿ ಪ್ರಶಂಸೆ ಬರಬೇಕು ಅನ್ನುವುದು ಇರುವುದು ಸ್ವಾಭಾವಿಕ"
ನಾನು: "ಹಾಗಿದ್ದಿದ್ದರೆ ಈ ೩೨ ವರುಷಗಳಲ್ಲಿ ಪ್ರಕಟಿಸದೇ ಗುಡ್ಡೆ ಹಾಕುತ್ತಿರಲಿಲ್ಲ ನಾನು...ಒಂದೂ ಪ್ರತಿಕ್ರಿಯೆ ಇರದ ಕವನಗಳು ಸಾಕಷ್ಟಿವೆ ನನ್ನವು ಸಂಪದದಲ್ಲಿ...ಆದರೆ ನಾನು ಬರೆಯುವುದನ್ನು ನಿಲ್ಲಿಸಿಲ್ಲ..."
ಸ್ನೇಹಿತೆ: "... ವಿಷಯ ವೈವಿಧ್ಯತೆ, ಬರೆಯುವ ಧಾಟಿ ಸ್ವಲ್ಪ ಬದಲಾಯಿಸಿಕೊಳ್ಳಿ...ನಿಮಗೆ ಟ್ಯಾಲೆಂಟ್ ಇದೆ, ಅದನ್ನು ಬಳಸಿಕೊಳ್ಳಿ ಅಂತಾ ಹೇಳಿದ್ದು ನಾನು...ನಮಗೆಲ್ಲಾ ಅಂದ್ರೆ ಇದೊಂದು ಟೈಮ್ ಪಾಸ್ ಅಷ್ಟೆ..."
ನಾನು: "ಅದು ಸರಿ ನಾನೂ ಈ ಬಗ್ಗೆ ಯೋಚಿಸಿದ್ದೇನೆ... ಯೋಚಿಸುತ್ತಿದ್ದೇನೆ...ಆದರೆ ನನಗೆ ಸಮಯದ ಸದುಪಯೋಗ ಮಾಡಿಕೊಳ್ಳಲು ಆಗ್ತಾ ಇಲ್ಲ...ವಾರದ ದಿನಗಳಲ್ಲಿ ಸಮಯ ಇಲ್ಲ... ವಾರಾಂತ್ಯದಲ್ಲಿ ತಾಳ್ಮೆ ಇರೋಲ್ಲ...ಮತ್ತು ಏಕಾಂತ ಇರೋಲ್ಲ..."
ಸ್ನೇಹಿತೆ: " ...ಮಾಡಿಕೊಳ್ಳಿ"
ನಾನು: "...ಮಾಡಿಕೊಳ್ಳಬೇಕು ಎನ್ನುವತ್ತ ನಾನೂ ಮನಸ್ಸು ಮಾಡ್ತಾ ಇದ್ದೇನೆ..."
ಸ್ನೇಹಿತೆ: "...ನೀವೇನೂ ೨-೩ ಪೇಜ್ ಬರೀರಿ ಅಂತಾ ಹೇಳ್ತಿಲ್ಲ..."
ನಾನು: "ಹೂಂ..."
ಸ್ನೇಹಿತೆ: "... ನೀವು ಬರೆಯುವ ಕವನದ ಸಮಯದಲ್ಲಿ ೨-೩ ಪ್ಯ್ರಾರವಂತೂ ಹೇಗೂ ಬರೆಯಬಹುದು... ಶುರು ಮಾಡಿ ಕಂಟಿನ್ಯೂ ಆಗುತ್ತೆ"
ನಾನು: "ಯಾವುದೇ ಸಾಧನೆಗೂ ಯಾರಾದರೂ ಕಾರಣರಾಗ್ತಾರೆ...: ಹಾಗೇ ನೀವೂ ಈಗ ಆಗ್ತಾ ಇದ್ದೀರಿ... :-)..."
ಸ್ನೇಹಿತೆ: "ಏನಿಲ್ಲ ... ನನಗೂ ರಿಪ್ಲೈ ಮಾಡೋದಿಕ್ಕೆ ವೈವಿಧ್ಯತೆ ಬೇಕು...ಅದಕ್ಕೆ ಅಷ್ಟೆ ;-)...ಸರಿ ...ಆ ಮೇಲೆ ಮಾತಾಡೋಣ...ನಾನೀಗ ಎಲ್ಲೋ ಹೋಗ್ಬೇಕು..."
ನಾನು: "ಸರಿ...ಹೋಗಿ ಬನ್ನಿ...ನಿಮ್ಮ ಸಲಹೆಯ ಬಗ್ಗೆ ಗಮನಕೊಡುತ್ತೇನೆ...ಕಾರ್ಯರೂಪಕ್ಕೆ ತರುವತ್ತಲೂ ಪ್ರಯತ್ನಿಸುತ್ತೇನೆ...ಧನ್ಯವಾದಗಳು...ಶುಭದಿನ"


******************************


 


ನಾನು "ಬ್ರಾಂಡ್" ಆಗಿ ಬಿಟ್ಟಿರೋದು ಹೌದಾ...? ಓದುಗರೇ ನೀವೇನಂತೀರಿ?


 


- ಆತ್ರಾಡಿ ಸುರೇಶ್ ಹೆಗ್ಡೆ.



 

Rating
No votes yet

Comments