ಆಟೋಗ್ರಾಫ್

ಆಟೋಗ್ರಾಫ್

ಏಳೆಂಟು ವರ್ಷಗಳ ಹಿಂದಿನ ಘಟನೆ. ಒಂದು ಪ್ರಖ್ಯಾತ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವಿತ್ತು. ಸಮಾರಂಭ ವೀಕ್ಷಿಸಲು ಬಹಳ ಜನರನ್ನು ಅವ್ಹಾನಿಸಿದ್ದರು.
ಹಾಗಾಗಿ ನಮಗೂ, ನಮ್ಮ ಅಕ್ಕ ಪಕ್ಕದ ಮನೆಯವರಿಗೂ ಆಮಂತ್ರಣ ಸಿಕ್ಕಿತ್ತು.
ಕಾರ್ಯಕ್ರಮಕ್ಕೆ ತೆಲುಗಿನ ಕಿರುತೆರೆ ನಿರೂಪಕಿ ಉದಯಭಾನು ಅವರು ಮುಖ್ಯ ಅಥಿತಿಯಾಗಿ ಬರುತ್ತಿರುವುದಾಗಿ ಪ್ರಕಟಿಸಿದ್ದರು.
ನಮ್ಮೂರು ಕಡೆ ಕನ್ನಡ ಹಾಗು ತೆಲುಗು ಎರಡು ಭಾಷೆಯ ಕಿರುತೆರೆಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಹಾಗಾಗಿ ಉದಯಭಾನು ನಮ್ಮ ಕಡೆ ಚಿರಪರಿಚಿತ.
ನಾನು, ನನ್ನ ತಮ್ಮ, ಪಕ್ಕದ ಮನೆಯ ನನ್ನ ತಮ್ಮನ ಸ್ನೇಹಿತ ಮಲ್ಲಿ (ಮಲ್ಲಿಕಾರ್ಜುನ) ಹಾಗು ಇನ್ನು ಕೆಲವು ಸ್ನೇಹಿತರು ಸೇರಿ ಕಾರ್ಯಕ್ರಮ ವೀಕ್ಷಿಸಲು ಹೊರೆಟೆವು. ಹೆಚ್ಚು ಕಮ್ಮಿ ನಾವು ಹೋಗಿದ್ದು ಉದಯಭಾನು ನೋಡಲು ಅನ್ಕೊಳ್ಳಿ. :P
ಕಾರ್ಯಕ್ರಮ ಶುರು ಆಯ್ತು. ಉದಯಭಾನು ಕೂಡ ಬಂದಿದ್ರು.
ಶಾಲೆಯ ಮಕ್ಕಳ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ಎಲ್ಲ ಚನ್ನಾಗಿ ನಡೆಯಿತು.
ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಉದಯಭಾನು ವಾಪಸ್ ಹೊರಡಲು ತಮ್ಮ ಕಾರಿನತ್ತ ಹೋಗುತ್ತಿದ್ದರು. ಆಟೋಗ್ರಾಫ್ ಪಡೆಯಲು ಅವಳ ಹಿಂದೆ ಜನರು ಓಡಿದರು. ಅಸ್ಟರಲ್ಲಿ ನಮ್ಮ ಮಲ್ಲಿ, ತಾನು ಕೂಡ ಆಟೋಗ್ರಾಫ್ ತಗೊಂಡು ಬರ್ತೀನಿ ಅಂದ. ಅವನ ಹತ್ರ ಪೆನ್ನು ಮಾತ್ರ ಇತ್ತು. ಪೇಪರ್ ಇರ್ಲಿಲ್ಲ. ನನ್ ಹತ್ರ ಚಿಕ್ಕ ಟೆಲಿಫೋನ್ ಡೈರಿ ಇತ್ತು. ಸರಿ ಅದನ್ನೇ ತೆಗೆದುಕೊಂಡು ಓಡಿದ.
ಸ್ವಲ್ಪ ಸಮಯದ ಬಳಿಕ ಹಿಂತಿರಿಗಿದ. ನಮಗೆಲ್ಲ ಅವಳ ಆಟೋಗ್ರಾಫ್ ತೋರಿಸಿದ. "With Love, Udayabhanu" ಅಂತ ಇತ್ತು.
ಅಸ್ಟು ಜನರಿದ್ದರೂ, ಅವರ ಮಧ್ಯ ತೂರಿ ಆಟೋಗ್ರಾಫ್ ತಗೊಂಡು ಬಂದೆಯಲ್ಲ, ಶಹಬಾಶ್ ಎಂದು ಹೊಗಳಿದೆವು. ಅವನು ಕೂಡ ಹರ್ಷದಿಂದ ಬೀಗಿದ.
ಎಲ್ಲ ಮುಗಿಸಿಕೊಂಡು ಮನೆಗೆ ಹೋದೆವು.
ಮರುದಿನ ಬೆಳಿಗ್ಗೆ ನಾನು ಒಬ್ಬನೇ ಇದ್ದಾಗ, ಮಲ್ಲಿ ನಮ್ಮ ಮನೆಗೆ ಬಂದು ಮಾತಾಡಿಸುತ್ತ ನಿಮಗೊಂದು ಹೇಳ್ಬೇಕು ಅಂದ.
ಏನೋ ? ಅಂದೆ.
ಆಗ ಅವನು : "ನಿನ್ನೆ ಆಟೋಗ್ರಾಫ್ ತಗೊಳೋಕೆ ಓಡಿ ಹೋದ್ನಾ ?, ನಾನು ಹೋಗುವುದರೊಳಗಾಗಿ ಉದಯಭಾನು ಹೋಗಿಬಿಟ್ಟಿದ್ರು. ಆಟೋಗ್ರಾಫ್ ಇಲ್ಲದೆ ಹಿಂತಿರುಗಿದರೆ ನೀವೆಲ್ಲ ಅಪಹಾಸ್ಯ ಮಾಡ್ತೀರಿ ಅಂತ, ನಾನೇ "With Love, Udayabhanu" ಅಂತ ಬರೆದುಕೊಂಡು ಬಂದೆ."

Rating
No votes yet