ಮಾರುತಿಯ ಕರುಣೆ

ಮಾರುತಿಯ ಕರುಣೆ

ಬರಹ

ಮಾರುತಿ ಭಜನೆ 


ರಾಗ : ರೇವತಿ  ತಾಳ : ಆದಿ


 


ಮತಿ ನೀಡೆನಗೆ ನೀ ಮಾರುತಿ ನಾ,


ನುತಿಸುತಿಹೆನು ನಿನ್ನ ಕೀರುತಿ ||


 


ಧೃತಿಗೆಡದಂತೆ ಈ ಹುಲುಮಾನವನನು


ಸ್ಮೃತಿಯನುಳಿಸುತಲಿ ವರ ನೀ ಕಾಯೋ ||


 


 


ಹರಿ ನೀ ಹರಿಸುತನೆ , ಹರಿಸುತ ನೀ ಕರುಣೆ 


ಪರಿಪಾಲಿಸು ನೀ ಮೂಜಗವನ್ನೇ  ||


ಪರಿಪರಿಯಿಂದಲಿ ಮಾಡುವೆ ಸ್ಮರಣೆ


ವರವಾನರನೇ ದರುಶನವೀಯೋ ||


 


ಮತಿ ನೀಡೆನಗೆ ನೀ ...


 


[ಸೂ: ಹರಿ ಎಂದರೆ ಕಪಿ, ವಾಯು, ವಿಷ್ಣು ಹೀಗೆ ಬಹಳ ಅರ್ಥಗಳಿವೆ.]


(ಬಹಳ ವರ್ಷಗಳ ಹಿಂದೆ ಚಿಕ್ಕಮಗಳೂರಿನ ಜಯಪುರದಲ್ಲಿ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಕುಳಿತಾಗ ರಚಿಸಿದ ಪದ್ಯ)