ಕಸಬ್ ತಂದೆಯ ಸಂದರ್ಶನ !!!

ಕಸಬ್ ತಂದೆಯ ಸಂದರ್ಶನ !!!

ರವಿ ಬೆಳಗೆರೆಯವರ ಮುಸ್ಲಿಂ ಪುಸ್ತಕ ಓದಿದ ಮೇಲೆ ನನಗ್ಯಾಕೊ ಒಮ್ಮೆ ಯಾರಾದ್ರೂ ಭಯೋತ್ಪಾದಕನನ್ನು ಸಂದರ್ಶಿಸಲೇಬೇಕೆಂಬ ಆಸೆ ಒಳಗೆ ಕೊರೆಯುತ್ತಿತ್ತು. ಕೊನೆಗೂ ಮನೆಯವರ್ಯಾರಿಗೂ ಹೇಳದೆ ಹೊರಟೇ ಬಿಟ್ಟೆ. ಎಲ್ಲಿಗ್ ಹೋಗೋದು ಎನ್ನುವುದು ಒಂದು ಕ್ಷಣ ಕಾಡಿದರೂ, ಭಯೋತ್ಪಾದಕರು ಅಂದ್ರೆ ಸಿಗೋದೆ ಪಾಕಿಸ್ಥಾನದಲ್ಲಿ. ಹೌದಲ್ವ? ನೇರ manufacturing unit ಗೆ ಹೋದ್ರೆ ಒಳ್ಳೆ ಮಾಲು ಸಿಗೋದು ಖಚಿತೆವೆಂದೆನಿಸಿ ಸರಿ ಅಲ್ಲಿಗೆ ಹೋಗೋಣ ಎಂದು ತೀರ್ಮಾನಿಸಿ ಹೊರಟೇಬಿಟ್ಟೆ.

ಹೋಗೋದ್ ಹೇಗೆ? ಕಳೆದ ಏಪ್ರಿಲ್ ನಲ್ಲಿ ವಾಘಾ ಗಡಿ ಸಂದರ್ಶಿಸಿದ್ದರಿಂದ ಆ ಮೂಲಕವೇ ಯಾವ್ದಾದ್ರೂ ಈರುಳ್ಳಿ ಲಾರಿ ಒಳ್ಗೆ ಸೇರ್ಕೊಂಡು ಹೋದ್ರಾಯ್ತು ಅನ್ಕೊಂಡೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗ್ಬೇಕೂಂದ್ರೆ ವೀಸಾ ಬೇಕು, ಹುಹ್ ಏನ್ಮಾಡೋದು ಅದೆ ಅಲ್ಲಿಂದ ಇಲ್ಲಿಗ್ ಬರ್ಲಿಕ್ಕೆ ಒಂದು ಕ್ರಿಕೆಟ್ ಮ್ಯಾಚ್ ಇದ್ರೆ ಸಾಕು. ಇಲ್ವ ಒಂದು ಗನ್ ಸಾಕು ನೋಡಿ.
***
ಪಾಕಿಸ್ತಾನ ಏನೋ ಸೇರ್ಕೊಂಡಿದ್ದಾಯ್ತು ಇನ್ನು ಯಾರನ್ನು ಸಂದರ್ಶನ ಮಾಡೋದು ಅಂತ ಯೋಚ್ನೆ. ಹೌದು ಮುಂಬೈ ದಾಳಿಯಲ್ಲಿನ ಕಸಬ್ ತಂದೆನ ಸಂದರ್ಶಿಸಿದರೆ ಹೇಗೆ? ಅದೆ ಸರಿ. ಪಾಕಿಸ್ತಾನದಲ್ಲಿನ ಕಾಶ್ಮೀರ ಉಗ್ರರ ಸ್ವರ್ಗವಾದ್ರೂ ಅಲ್ಲಿಗ್ ಬಿಡಲ್ಲ ಯಾಕೇಂದ್ರೆ? ಸ್ವತಃ ಪಾಕಿಸ್ತಾನದ ಸರ್ಕಾರವೇ ಅಲ್ಲಿಗೆ ಬೇರೆಯವ್ರು ಹೋಗದಹಾಗೆ ಸ್ವತಃ ಕಟ್ಟೆಚ್ಚರ ವಹಿಸಿದೆ. ಯಾರಿಗೂ ಹೋಗ್ಲಿಕ್ಕೆ ಬಿಡಲ್ಲ ಅದ್ರಲ್ಲೂ ಭಾರತದ ಬುದ್ದಿಜೀವಿಗಳನ್ನಂತೂ ಸುತರಾಂ ಬಿಡೋದೆ ಇಲ್ಲ.  ಸರ್ಕಾರನೇ ಐಎಸೈ ಮೂಲಕ ತರಭೇತಿ ಕೊಡ್ತಾ ಇರೋ ವಿಷ್ಯ ಪ್ರಪಂಚದಲ್ಲಿ ಎಲ್ರಿಗೂ ಗೊತ್ತಿದ್ರೂ ಈ ಭಾರತೀಯ ಬುದ್ದಿಜೀವಿಗಳು ನಮ್ಮ ಬೆಂಬಲಕ್ಕೆ ನಿಂತಿದರೆ ಅನ್ನೊ ವಿಷ್ಯ ಪಾಕಿಸ್ತಾನದ ಸರ್ಕಾರಕ್ಕೆ ಗೊತ್ತಿರೊದ್ರಿಂದ ಅವ್ರಾದ್ರೂ ನಮ್ಮ ಬೆಂಬಲಕ್ಕಿರ್ಲಿ ಅನ್ನುವ ಮುಂದಾಲೋಚನೆ, ಇರ್ಲಿ ಬಿಡಿ.

ಅಲ್ಲಿಗ್ ಬಿಡದೇ ಇದ್ದದ್ದು ಒಳ್ಳೆದಾಯ್ತು ಇಷ್ಟಕ್ಕೂ ಭಯೋತ್ಪಾದಕರ ಉತ್ಪಾದಕನನ್ನು ಸಂದರ್ಶಿಸುವ ಅವಕಾಶ ಒಳ್ಳೆಯದಲ್ವೆ?
ಹಾಗೂ ಹೀಗೂ ಮಾಡಿ ಕಸಬ್ ತಂದೆ ನಂಗೆ ಸಂದರ್ಶನ ಕೊಡ್ಲಿಕ್ಕೆ ಒಪ್ಪಿದ ಅದೂ ೨೫೦೦೦ ಕೊಡ್ತೀನಿ ಅಂದ್ಮೇಲೆ

ಮೊದಲನೇ ಪ್ರಶ್ನೆ: ಸಾರ್ ಯಾವ ಕಾರಣಕ್ಕೆ ನೀವು ನಿಮ್ಮ ಮಗನನ್ನ ಭಯೋತ್ಪಾದಕನಾಗಿ ಮಾಡೋದಿಕ್ಕೆ ಒಪ್ಪಿದ್ರಿ?
ಕಸಬ್ ತಂದೆ: ಬಡತನ, ಈಗ ನೋಡಿ ಇವತ್ತಿನ ಸಂಪಾದನೆ ೨೫೦೦೦. ಒಂದು ಗಂಟೆಗೆ. ಬೇಗ ಮುಗ್ಸಿ ಇನ್ನೂ ಡಾಲರ್ ಕೊಡೋವ್ರು ಕಾಯ್ತಿರ್ತರೆ.

ಪ್ರಶ್ನೆ: ನಿಮ್ಗೆ ಅದು ಸರಿ ಅನ್ಸುತ್ತ? ನಿಮ್ಮ ಮಗ ಬೇರೆ ದೇಶದಲ್ಲಿ ಹೋಗಿ ಸಿಕ್ಕಿಹಾಕಿಕೊಂಡು ನಿಮ್ಮ ದೇಶಕ್ಕೆ ಕೆಟ್ಟ ಹೆಸ್ರು ತರ್ತನಲ್ಲ?
ಉತ್ತರ: ನಮ್ಗೆ ದೇಶಕ್ಕಿಂತ ಧರ್ಮ ಮುಖ್ಯ. ನಂಗೆ ಅವ್ನೊಬ್ನೆ ಮಗ ಅಲ್ಲ ಇನ್ನೂ ಇದರೆ. ಇಷ್ಟಕ್ಕೂ ಅವ್ನೇನು ಸತ್ತೇನು ಹೋಗಿಲ್ವಲ್ಲ. ಮೊಂದೊಂದು ದಿನ ಬಂದೇ ಬರ್ತನೆ ಅನ್ನೊ ನಂಬಿಕೆ ಇದೆ ನಂಗೆ.

ಪ್ರಶ್ನೆ: ಅದು ಹೇಗೆ ಸಾರ್ ಅಷ್ಟೊಂದು ವಿಶ್ವಾಸ?
ಉತ್ತರ: ನಿಮ್ಮ ಸರ್ಕಾರದ ಮೇಲೆ ನನಗೆ ವಿಶ್ವಾಸವಿದೆ. ಭಾರತೀಯರು ಕರುಣಾಮಯಿಗಳು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅಲ್ಲಿ ನಮ್ಮ ಬೆಂಬಲಿಗರು ಸಹಾಯ ಮಾಡೇ ಮಾಡ್ತರೆ.

ಪ್ರಶ್ನೆ: ಯಾರು ಸಾರ್ ನಿಮ್ಮ ಬೆಂಬಲಿಗರು? ಮಾನವ ಹಕ್ಕುಗಳ ಆಯೋಗನ?
ಉತ್ತರ: ಇಲ್ಲ, ಅಲ್ಲಿನ ಬುದ್ದಿಜೀವಿಗಳು. ಯಾವುದೇ ಕಾರಣಕ್ಕೂ ಅವನನ್ನು ನೇಣಿಗೇರಿಸಲು ಅವ್ರು ಬಿಡಲ್ಲ, ಅಲ್ಲಿನ ಸರ್ಕಾರಕ್ಕೂ ನಮ್ಮವ್ರ ಓಟ್ ಬೇಕಾಗಿರೋವರ್ಗೂ ನನ್ ಮಗ ಸೇಫ್.

ಇದ್ದಕ್ಕಿದ್ದಂತೆ ಮನೆ ಮುಂದೆ ಜನಗಳು ಸೇರ್ಲಿಕ್ಕೆ ಶುರು ಆಯ್ತು ನಂಗೆ ಭಯ. ಭಯ ಪಟ್ಕೋಬೇಡಿ ಅವ್ರು ನಿಮ್ಗೆ ಏನೂ ಮಾಡ್ಲಿಕ್ಕೆ ಬಂದಿಲ್ಲ,  ಬೇಗ ನಿಮ್ ಕೊನೆ ಪ್ರಶ್ನೆ ಕೇಳಿ ನಾನು ಹೊರ್ಡಬೇಕು.

ಎಲ್ಲಿಗ್ ಹೋಗ್ತಿದೀರ ಸಾರ್? ಇಷ್ಟೊಂದು ಜನ ಇಲ್ಲಿ ಯಾಕೆ ಸೇರ್ತಿದರೆ?

ನಾವೆಲ್ಲ ಸೇರಿ ಲಷ್ಕರ್ ಎ ತೋಯ್ಬ ಆಫೀಸ್ಗೆ ಹೋಗ್ತಾ ಇದೀವಿ ಅದಕ್ಕೆ.

ಯಾಕೆ ಸಾರ್?

ನಮ್ಮ ಮಕ್ಕಳನ್ನೆಲ್ಲ ಅವರ ಕ್ಯಾಂಪಿಗೆ ಸೇರಿಸ್ಕೊಳಿ ಅಂತ ಹೇಳಲಿಕ್ಕೆ.
ಓಹ್ ಎಲ್ರನ್ನೂ ಭಯೋತ್ಪಾದಕರನ್ನ ಮಾಡ್ಕೊಳಿ ಅಂತ ಕೇಳ್ತಿದೀರಾ?

ಹೌದು! ಆದ್ರೆ ಒಂದು ಕಂಡೀಶನ್ ಹಾಕ್ದಿವಿ.
ಏನು ಸಾರ್ ಕಂಡಿಶನ್ ನಮ್ ಮಕ್ಕಳನ್ನೆಲ್ಲ ಬರೀ ಭಾರತದ ಮೇಲೆ ಮಾತ್ರ ಭಯೋತ್ಪಾದಕರಾಗಿ ಕಳಿಸ್ಬೇಕು ಬೇರೆಲ್ಲೂ ಕಳಿಸ್ಬಾರ್ದು ಅಂತ.

ಓಹ್ ಯಾಕೆ ಸಾರ್ ನಿಮ್ಗೆ ಭಾರತದ ಮೇಲಿಷ್ಟು ದ್ವೇಷ?

ದ್ವೇಷನೂ ಇಲ್ಲ ಮಣ್ಣೂ ಇಲ್ಲಯ್ಯ. ಅಲ್ಲಿಗ್ ಹೋಗಿ ಸಿಕ್ಕಾಕೊಂಡ್ರೆ ನಮ್ಮ ಮಕ್ಳಿಗೆ ರಾಜಾತಿಥ್ಯ ಸಿಗುತ್ತೆ. ತಿಂಗಳಿಗೆ ಕೊಟ್ಯಾಂತರ ಖರ್ಚು ಮಾಡಿ ಸಾಕ್ಕೊಳ್ತರೆ. ಶಿಕ್ಷೆ ಅಂತೂ ಆಗೋದೆ ಇಲ್ಲ.  ವಿಚಾರಣೆ ನೆಪದಲ್ಲಿ ಅವನ ಜೀವನ ಪೂರ್ತಿ ಅಲ್ಲೆ ಇದ್ದು ಕೊನೆಗೊಂದು ದಿನ ಅಲ್ಲಿಯ ಪೌರತ್ವವೂ ಸಿಗುತ್ತೆ ಮುಂದೊಂದು ದಿನ ಮಂತ್ರಿ ಆದ್ರೂ ಆಗ್ಬಹುದು!!! ಇಲ್ಲಿದ್ರೆ ಏನ್ ಸಿಗುತ್ತೆ?

Rating
No votes yet

Comments