ಓ ನವಿಲೆ

ಓ ನವಿಲೆ


ಓ ನವಿಲೆಓ ನವಿಲೆ



 


ನವಿಲೆ ನಿನ್ನ ನಾಟ್ಯ ಚೆಂದ


ದಿಟ್ಟಿಸಿ ವೀಕ್ಷಿಸಿದರೆ ಮನಸ್ಸಿಗಾನಂದ


ನೋಡಬೇಕು ನಿನ್ನ ಗರಿಯ ನೋಟ


ನಿನ್ನಲ್ಲಿದೆ ಎಂಥಹ ಮೈಮಾಟ


ಕೂಗಿದರೆ ಕೇಳಿಬರುವುದು ದೂರದೀ ನಿನ್ನಯ ಧ್ವನಿ


ತಂಪೆನಿಸುವುದಿಲ್ಲವೇ ನಿನ್ನ ಗರಿಗೆ ಬಿದ್ದರೆ ಮಳೆಯ ಹನಿ


ಹುಳು ಹುಪ್ಪಟೆಗಳನ್ನು ಆಯ್ದು ತಿನ್ನುವೆ ನೀನು


ಸೊಪ್ಪು ತರಕಾರಿ, ಹಣ್ಣು-ಹಂಪಲು ಬೇಡವೇನು??


ಸಹಿಸಲಾರೆ ಮೃಗಾಲಯದಲ್ಲಿ ನಿನ್ನ ವನವಾಸ


ಇರಬಹುದು ಕಾಡಲ್ಲಿ ನಗುನಗುತ ಪ್ರತಿದಿವಸ


ಆಗಿರುವೆ ನೀನು ಸುಬ್ರಹ್ಮಣ್ಯನ ವಾಹನ


ನಿನ್ನ ನಾಟ್ಯಕ್ಕೆ ಕೊಡುವೆಯಾ ಆಹ್ವಾನ


ನಿನ್ನ ಲಕ್ಷಣಕ್ಕೆ ಹೋಲುವುದಿಲ್ಲ ಯಾವ ಪಕ್ಷಿ


ಆದ್ದರಿಂದ ನಾವೆಲ್ಲರೂ ಮಾಡಿರುವೆವು ರಾಷ್ಟ್ರಪಕ್ಷಿ


(ನಾನು ಈ ಪುಟ್ಟ ಕವನವನ್ನು ೧೯೯೭ ರಲ್ಲಿ ಬರೆದಿದ್ದು. ಏನೋ ಹುಡುಕುತ್ತಿದ್ದಾಗ ಹಳೇ ಡೈರಿ ಸಿಕ್ಕಿತು. ತೆಗೆದು ನೋಡಿದರೆ ಪುಟ್ಟ ಪುಟ್ಟ ಕವನಗಳ ಜೊತೆ ಇದೂ ಕೂಡ ಅವಿತುಕೊಂಡಿತ್ತು.)

Rating
No votes yet

Comments