8 ಮಾತ್ರೆ, 8 bits etc...

8 ಮಾತ್ರೆ, 8 bits etc...

ಇದನ್ನ ಕೆಲವು ತಿಂಗಳ ಹಿಂದೇ ಬರೆದಿದ್ದೆ... ಸಂಪದದ arhive ನಿಂದ ಆಳಿಸಿ ಹೋಗಿದ್ದರಿಂದ ಮತ್ತೊಮ್ಮೆ post ಮಾಡ್ತಿದ್ದೇನೆ.


ಕೆಲವು ತಿಂಗಳ ಹಿಂದೆ ಒಬ್ಬ ಹಳೆಯ ಗೆಳೆಯನನ್ನು ಭೇಟಿಯಾಗುವ ಅವಕಾಶವಾಯಿತು. ಆತ ತುಂಬಾ ಚೆನ್ನಾಗಿ ತಬಲಾ ನುಡಿಸುತಿದ್ದ. ನಿನ್ನ ತಬ ಕೇಳಿ ತುಂಬಾ ದಿನ ಆಯಿತು ಏನಾದರೂ ನುಡಿಸು ಎಂದಾಗ "ತ್ರಿತಾಳ" ಎಂಬ ತಾಳದ ಪ್ರಕಾರ ಗಳನ್ನು ನುಡಿಸಲು ಶುರು ಮಾಡಿದ. ನಾನು ಅರ್ಧಕ್ಕೇ ನಿಲ್ಲಿಸಿ, "ನೀನು ರೂಪಕ ತಾಳದಲ್ಲೊಂದು ಕಾಯದ ನುಡಿಸುತ್ತಿದ್ದೆಯಲ್ಲ ಆದನ್ನು ನುಡಿಸು" ಎಂದೆ. "ಅದು ನನಗೆ ಮರೆತು ಹೋಗಿದೆ" ಅಂದ. ಇದು ನಾನು ಮಾಡಿದ ಒಂದು ಸಣ್ಣ ಪ್ರಯೋಗ ವಾಗಿತ್ತು. ಏಕೆಂದರೆ ನಾನೂ ಒಬ್ಬ ತಬಲಾ ವಾದಕ. ಆಭ್ಯಾಸ ನಿಲ್ಲಿಸಿ ೧೦ ವರ್ಷ ವಾಯಿತು... ಈಗ ಯಾರಾದರು ಬಂದು ಏನಾದ್ರೂ ನುಡಿಸಿ ತೋರಿಸು ಅಂದ್ರೆ ನಾನು ಶುರು ಮಾಡುವುದೂ ತ್ರಿತಾಳದಿಂದಲೇ.ಬೇರೆ ತಾಳ ಗಳನ್ನು ನುಡಿಸಬೇಕಾದರೆ, ಪುಸ್ತಕ ತೆರೆಯಬೇಕಾಗುತ್ತದೆ.. ಇದಕ್ಕೆ ೨ ಕಾರಣ ಗಳಿರಬಹುದು

೧. ನಾವು ಮೊದಲು ಕಲಿತ ತಾಳ "ತ್ರಿತಾಳ". ಮತ್ತು ನಾವು ತ್ರಿತಾಳ ವನ್ನು ಬೇರೆ ತಾಳಗಳಿಗಿಂತ ಹೆಚ್ಚು ಅಭ್ಯಾಸ ಮಾಡಿದ್ದೇವೆ. ೨. ತ್ರಿತಾಳ ೧೬ ಮಾತ್ರೆಯ ತಾಳ ಆದ್ದರಿಂದ ಮನುಷ್ಯನ ಮೆದುಳಿಗೆ ಅದು ಸುಲಭದಲ್ಲಿ ನೆನಪಿಗೆ ಇರುತ್ತದೆ.
ಈ ಎರಡನೇ ಕಾರಣ ಸತ್ಯವೇ...?
ಸಂಗೀತ ಶಾಲೆ ಗಳಲ್ಲಿ ೪, ೮ ಅಥವಾ ೧೬ ಮಾತ್ರೆಯ ತಾಳಗಳನ್ನೇ ಮೊದಲು ಏಕೆ ಕಲಿಸುತ್ತಾರೆ ...?

ಈಗ ಯಾವುದಾದರೊಂದು ಸಂಸ್ಕೃತ ಶ್ಲೋಕವನ್ನು ಜ್ಞಾಪಿಸಿಕೊಳ್ಳಿ ನೋಡೋಣ .. ಆದೂ ೮ ಮಾತ್ರೆಯ ಶ್ಲೋಕವೇ .....?ಕೆಲವು ಮಕ್ಕಳು ಭಗವದ್ಗೀತೆಯ ಯಾವುದಾದರು ಆಧ್ಯಾಯವನ್ನು ಕಂಠ ಪಾಠ ಮಾಡಿರುತ್ತಾರೆ ... ದೊಡ್ಡವರಾದ ಮೇಲೆ ಮರೆತಿರುತ್ತಾರೆ... ಆದರೆ ಯಾವುದೇ ಶ್ಲೋಕದ ಮೊದಲ ಸಾಲು ನೆನಪಿಸಿ ಕೊಡಿ ಸಂಪೂರ್ಣ ಶ್ಲೋಕವನ್ನು ಹೇಳುತ್ತಾರೆ ...ಭಗವದ್ ಗೀತೆಯ ಶ್ಲೋಕಗಳು ೮ ಮಾತ್ರೆಯದಾಗಿರುವುದೇ ಇದಕ್ಕೆ ಕಾರಣವೇ?

ಬಹುಶ: ಮನುಷ್ಯನ ಮಿದುಳಿಗೆ ನೆನಪಿಡಲು ೮ ಮಾತ್ರೆ ತುಂಬಾ ಸುಲಭ ಅಂತ ಕಾಣತ್ತೆ .....

ಸರಿ... ಮನುಷ್ಯನ ಮಿದಿಳು ಬಿಟ್ಟು ಈಗ ಕಂಪ್ಯೂಟರ್ ಮಿದುಳಿಗೆ ಬನ್ನಿ ..... ಯಾರಾದರು 9 bits ಆಥವ 65bits processors ಕೇಳಿದ್ದೀರಾ ...? ಮೈಕ್ರೋ ಪ್ರೋಸೆಸ್ಸೋರ್ ಗಳಲ್ಲಿರುವ registerಗಳು 8 ಆಥವ multiple of 8 ಆಗಿರುತ್ತವೆ ... ಈ register ಗಳಲ್ಲಿ 8 ಬಿಟ್ಸ್ ನ್ನೇ ಏಕೆ ಉಪಯೋಗಿಸುತ್ತಾರೆ ? ಕಂಪ್ಯೂಟರ್ಗಳಲ್ಲಿ ಉಪಯೋಗಿಸುವುದು Hexadecimal number system ಹಾಗಾಗಿ ಈ register ಗಳು 8 ಬಿಟ್ಸ್ ಇರುತ್ತವೆ ಎನ್ನಬಹುದು. ಪ್ರೋಸೆಸ್ಸೋರ್ ಡಿಸೈನ್ ಮಾಡಿರುವುದು ಮನುಷ್ಯ ... hexadecimal systm ನೇ ಏಕೆ ಉಪಯೋಗಿಸಿದ ..? ಶತಮಾನಗಳಿಂದ ಉಪಯೋಗಿಸುತಿದ್ದ ದಶಮಾಂಶ ಪದ್ದತಿಯನ್ನೇಕೆ ಉಪಯೋಗಿಸಲಿಲ್ಲ ....? 8 ಬಿಟ್ಸ್ ಪ್ರೋಸೆಸ್ಸೋರ್ ಡಿಸೈನ್ ಮಾಡಿದವನಿಗೆ 9 ಬಿಟ್ಸ್ ಮಾಡಲು ಬರುತಿರಲಿಲ್ಲವೇ ...?

ಬಹುಶ: hexadecimal ಸಿಸ್ಟಮ್ ಸುಲಭ .... 9 ಬಿಟ್ಸ್ ಗಿಂತ 8 ಬಿಟ್ಸ್ design ಸುಲಭ ...ಆದರೆ ಯಾಕೆ ...?

ಮನುಷ್ಯ ಚೆಸ್ ಆಟ ಕಂಡು ಹಿಡಿದ ... ಆದರಲ್ಲಿ ೮ ಮನೆ ಗಳನ್ನೇಕಿಟ್ಟ ...? ಚನ್ನೆ ಮಣೆ ಯಲ್ಲೂ ೮ + ೮ = ೧೬ ಮನೆಗಳು...ನಾನು ೯ ಮಣೆಯೆ ಚೆಸ್ ಹಾಗು ೧೮ ಮಣೆ ಯೆ ಚನ್ನೇಮಣೆ ಕಂಡು ಹಿಡಿದು ಆಡೋಣ ಅಂತಿದ್ದೀನಿ ,,, ಏನಂತಿರ ...?
Rating
No votes yet

Comments