ಕಾಣೆಯಾದ ಬರಹಗಳ ಬಗ್ಗೆ!

ಕಾಣೆಯಾದ ಬರಹಗಳ ಬಗ್ಗೆ!

Comments

ಬರಹ

ಸಂಪದದಲ್ಲಿ ಅನೇಕರ ಬ್ಲಾಗುಗಳು/ ಲೇಖನಗಳು ಕಾಣೆಯಾಗಿದ್ದಾವೆ ಅಂತ ಸಂಪದಿಗರು ಬರೀತಾ ಇರೋದನ್ನು ನೋಡ್ತಾ ಇದ್ದೇನೆ. ನನ್ನ ಅನೇಕ ಬ್ಲಾಗುಗಳೂ ಕಾಣೆಯಾಗಿದ್ದಾವೆ. 

ಸಂಪದದ ನಿರ್ವಹಣೆಯಲ್ಲಿ ಕೆಲಸ ಮಾಡ್ತಾ ಇರೋ 'ಕೆಲವೇ ಕೆಲವು' ಜನರು ತುಂಬಾ ಬ್ಯುಸಿ ಇದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದ್ದೆ. ಅವರಿಗೂ ತಮ್ಮ ವೈಯಕ್ತಿಕ ಜೀವನದ ಕೆಲಸಗಳು ಮೇಲಿನ ಆದ್ಯತೆ ಹೊಂದಿರುತ್ತವೆ ಅನ್ನೋದು ಅರ್ಥ ಆಗುತ್ತೆ. 
ಆದರೂ.......... ಕಳೆದು ಹೋಗಿರುವ ಸಂಪದಿಗರ ಬರಹಗಳನ್ನು ಸ್ವಲ್ಪ ಮುತುವರ್ಜಿ ವಹಿಸಿ ವಾಪಸು ತಂದರೆ ಸುಂಬ ಸಂತೋಷವಾಗುತ್ತೆ. ಕಾರಣ ಇಷ್ಟೇ... ಅನೇಕ ಬ್ಲಾಗುಗಳು ಆ ಕ್ಷಣ ಹುಟ್ಟಿದನ್ತವು. ಈಗ ಆ ಬ್ಲಾಗುಗಳನ್ನು ಬರೆಯಲು ಹೊರಟರೆ ಬರೆಯಲು ಆಗಲ್ಲ. ಹಾಗಾಗಿ ಅವು ತುಂಬಾ ಅಮೂಲ್ಯ. 
ನನ್ನ ಅತಿ ಹೆಚ್ಚಿನ ಬ್ಲಾಗುಗಲಂತೂ ಅಂದಂದಿಗೆ ಹುಟ್ಟಿದವು. ಅದೇ ಬ್ಲಾಗುಗಳನ್ನು, ಅದರಲ್ಲಿನ ವಿಷಯಗಳನ್ನು ಈಗ ಎಷ್ಟು ಕಷ್ಟ ಪಟ್ಟರೂ ಬರೆಯಲು ಆಗಲ್ಲ. ಅಲ್ಲದೆ ನಾನು ನೇರವಾಗಿ ಗೂಗಲ್ ಕನ್ನಡದಲ್ಲಿ ಟೈಪಿಸಿ ಸಂಪದದಲ್ಲಿ ಹಾಕ್ತ ಇದ್ದದ್ದರಿಂದ ನನ್ನ ಬಳಿ ಯಾವ backup ಕಾಪಿಯೂ ಇಲ್ಲ. ಅನೇಕರ ಬ್ಲಾಗುಗಳಿಗೂ ಇದು ಅನ್ವಯಿಸಬಹುದು. 
ಸ್ವಲ್ಪ ಲೇಟಾದರೂ ಪರವಾಗಿಲ್ಲ, ದಯವಿಟ್ಟು ಕಾಣೆಯಾಗಿರುವ ಹಳೆಯ ಬರಹಗಳನ್ನು ಮತ್ತೆ ಕಾಣುವಂತೆ ಮಾಡ ಬೇಕು ಅನ್ನೋದು ನನ್ನ ಕೋರಿಕೆ! 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet