ಗೊರವರು ಬರೆದ ಚಿತ್ತಾರ...

ಗೊರವರು ಬರೆದ ಚಿತ್ತಾರ...

ತಾಳಗುಪ್ಪಾದಲ್ಲಿ ಕಳೆದ ಗುರುವಾರ ಚಿಪ್ಪಿಗರ ಮದುವೆ ಕಾರ್ಯಕ್ರಮವೊಂದರಲ್ಲಿ ನಾ ಕಂಡ ಅಪರೂಪದ ಚಿತ್ತಾರ. ಇದು ಮದುವೆಯ ಮುನ್ನಾ ದಿನ ನಡೆಯುವ ಕುಲ ದೈವ ಮೈಲಾರೇಶ್ವರನ ಪ್ರೀತ್ಯರ್ಥ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೌರೋಹಿತ್ಯ ವಹಿಸಿದ್ದ ಗೊರವಯ್ಯಗಳು (ಮೈಲಾರ ಲಿಂಗನ ಭಕ್ತರು) ಕಪ್ಪು ಕಂಬಳಿಯ ಮೇಲೆ ಬಂಡಾರದಲ್ಲಿ ಹೂಡಿದ ಅಕ್ಕಿಯಿಂದ ರಚಿಸಿದ ಉಬ್ಬು ಚಿತ್ತಾರ ಇದಾಗಿದ್ದು, ಇದರಲ್ಲಿ ಇಬ್ಬರು ಕುದುರೆಯೊಂದರ ಮೇಲೆ ಕುಳಿತು ಯುದ್ಧ ಮಾಡುವಂತೆ ಕಾಣುತ್ತಿದೆ. ಇಬ್ಬರು ಹೋರಾಟಗಾರರಂತೆ ಕಾಣುತ್ತಿದ್ದಾರೆ. ನಾಯಿಯೊಂದು ಕಾಲಾಳುವಿನ ಮೇಲೆ ಎರಗುತ್ತಿರುವಂತೆ ಭಾಸವಾಗುತ್ತಿದೆ. ಮೂರು ತಂಬಿಗೆಗಳಲ್ಲಿ ಕಳಶಗಳನ್ನು ಹೂಡಿ ಅದರ ಕೆಳಭಾಗದಲ್ಲಿ ಈ ರೀತಿಯ ಚಿತ್ತಾರ ಬರೆದಿದ್ದು , ಮಲೆನಾಡಲ್ಲಿ ಈ ರೀತಿಯ ಚಿತ್ರಗಳು ತುಂಬಾ ಅಪರೂಪವೇ ಸರಿ.

ಇದನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸಿ ತಮಗಾಗಿ ಇಲ್ಲಿಟ್ಟಿದ್ದೇನೆ.

Rating
No votes yet

Comments