ಸಾಂಸ್ಕೃತಿಕ ಸಂಜೆ
ಛತ್ತೀಸಗಢ ರಾಜ್ಯದ ರಾಜಾನಂದಗಾಂವ್ ನಿಂದ "ಜುರ್ಮಿಲ್ ಮೋರ್ಚ" ಅನ್ನುವ ಕಲಾತಂಡ ಬೆಂಗಳುರಿಗೆ ಬಂದಿದೆ. ಈ ಕಲಾತಂಡ ಜಾನಪದ ಗೀತೆ, ಸಂಗೀತ ಮತ್ತು ಗೊಂಬೆಯಾಟಗಳಿಂದ ಜನರಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಈ ತಂಡ ಅರಿವು ಮೂಡಿಸಲಿದೆ.
ಜುರ್ಮಿಲ್ ಮೋರ್ಚದ ಬಗ್ಗೆ:
ಛತ್ತೀಸಗಢದಲ್ಲಿ ಮಕ್ಕಳ ಹಕ್ಕು, ಬಲವಂತದ ವಲಸೆ, ಆರೋಗ್ಯ, ಮಹಿಳಾ ಸಮಸ್ಯೆಗಳು ಮತ್ತು ಅಸಮಾನತೆಯ ವಿರುದ್ದ ಹೋರಾಡುತ್ತಿರುವ ಹಾಗೂ ಆದಿವಾಸಿ ಮತ್ತು ಇತರ ಅಲ್ಪ ಸಂಖ್ಯಾತರ ವರ್ಗಗಳನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ವಿರೋದಿಸಲು ಹುಟ್ಟಿದ ತಂಡವಾಗಿದೆ.
ಇದರ ಜೊತೆಗೆ ಕರ್ನಾಟಕದಿಂದ ಹಲವಾರು ಕಲಾವಿದರು ಭಾಗವಹಿಸಿ, ಭಾಷಣ, ಹಾಡು ಮತ್ತು ನಾಟಕಗಳನ್ನು ಮಾಡುತ್ತಿದ್ದಾರೆ ಈ ಕಾರ್ಯಕ್ರಮ ಇಂದು ಸಂಜೆ 5:00 ರಿಂದ 9:00 ಗಂಟೆಯವರೆಗೆ ಸಂಸ ರಂಗಮಂದಿರ ದಲ್ಲಿ(ರವೀಂದ್ರ ಕಲಾಕ್ಷತ್ರದ ಹಿಂಭಾಗ) ನಡೆಯಲಿದೆ. ತಾವುಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆದಿವಾಸಿಗಳಿಗೆ ನಾಗರೀಕ ಆಡಳಿತವನ್ನು ಪುನಃ ಪ್ರಾರಂಬಿಸಲಿಕ್ಕೆ ನಿಮ್ಮ ಕೈ ಜೋಡಿಸಿ.