ಜಿಯೋಟ್ಯಾಗಿಂಗ್ - ಭೌಗೋಳಿಕ ಮಾಹಿತಿಗಾಗಿ
ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ, ರೇಖಾಂಶ ಕಕ್ಷೆ ಗಳನ್ನು ಒಳಗೊಂಡಿದ್ದು, ಅಲ್ಟಿಟ್ಯೂಡ್, ದತ್ತಾಂಶದ ನಿಖರತೆ ಹಾಗೂ ಸ್ಥಳದ ಹೆಸರು ಇತ್ಯಾದಿಗಳನ್ನೂ ಒಳಗೊಂಡಿರಬಹುದು. ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಸೇವೆ ಕೊಡುವ ಉಪಗ್ರಹಗಳಿಂದ ಈ ದತ್ತಾಂಶಗಳು ನಮ್ಮ ಜಿ.ಪಿ.ಎಸ್ ಸಾಧನದ ಮಡಿಲು ಸೇರುತ್ತವೆ.
ಜಿಯೋಟ್ಯಾಗಿಂಗ್ ಬಳಕೆ
ಜಿಯೋಟ್ಯಾಗಿಂಗ್ ಬಳಕೆದಾರರಿಗೆ ತಮ್ಮಲ್ಲಿರುವ ಚಿತ್ರದ ಅಥವಾ ಇನ್ಯಾವುದೇ ರೂಪದಲ್ಲಿರುವ ಮಾಹಿತಿಯ ನಿಖರ ವಿಳಾಸವನ್ನು ತಿಳಿಯಲು, ಹಾಗೂ ಮಾಧ್ಯಮ ವೇದಿಕೆ (media platform) ತಂತ್ರಾಂಶಗಳು(ಉದಾ: ಗೂಗಲ್ ಅರ್ಥ್)ತೋರಿಸುವ ಯಾವುದೇ ಒಂದು ಸ್ಥಳದ ಬಗ್ಗೆ ಹೆಚ್ಚಿನ ವಿವರವನ್ನು ನೀಡಲು ಬಳಸಬಹುದಾಗಿದೆ. ಮೊಬೈಲ್ ತಂತ್ರಾಶಗಳಲ್ಲಿ ಈ ತಂತ್ರಜ್ಞಾನದ ಬಳಕೆ ಸುಲಭ ಸಾಧ್ಯವಾಗಿದೆ.
ಜಿ.ಪಿ.ಎಸ್ ಸಾಧನ ಹಾಗೂ ಕ್ಯಾಮೆರಾ, ಅಥವಾ ಜಿ.ಪಿ.ಎಸ್ ಸಾಧನವಿರುವ ಮೊಬೈಲ್ ಬಳಸಿ ನೀವು ಜಿಯೋಟ್ಯಾಗಿಂಗ್ ಮಾಡಬಹುದಾಗಿದೆ.
ವಿಕಿಪೀಡಿಯಾದಲ್ಲಿ
ವಿಕಿಪೀಡಿಯಾದಲ್ಲೂ ಜಿಯೋಟ್ಯಾಗ್ ಮಾಡಿದ ಮಾಹಿತಿಯನ್ನು ಲೇಖನಗಳಲ್ಲಿ (ಹಾಗೂ ಚಿತ್ರಗಳಲ್ಲೂ) , template {{coord}} ಬಳಸಿ ಉಪಯೋಗಿಸಬಹುದು. ಅದು ಈರೀತಿ ಕಂಡು ಬರುತ್ತದೆ.