ಮನಸಿದು ಹಕ್ಕಿಯ ಗೂಡು!

ಮನಸಿದು ಹಕ್ಕಿಯ ಗೂಡು!

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ!


ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ


ಪೊಗಳುವದು ಮಣ್ಣನ್ನೇ ಹೊನ್ನೆಂದು!


 


ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ.


ಸಂತಸದಿಂದಿದ್ದರೆ ಮಳೆಯದು ಅಮ್ರುತ ಸಿಂಚನ,


ಮನ ಮುದುಡಿದ್ದರದುವೇ ಆಗಸದ ಆಕ್ರಂದನ!


 


ಎಲ್ಲಿ ನೋಡಿದರಲ್ಲಿ ಮನಗಳ ನರ್ತನ,


ಬಯಕೆಗಳ ಹಿಂದೆ ಬೆಂಬಿಡದ ಪಯಣ.


ಓ ಸೂತ್ರಧಾರ ಪ್ರಭುವೇ ಬಂದು ಸಲಹು,


ಮೂಡಲಿ ನಿನ್ನೆಡೆ ಒಲವು ಎಲ್ಲರಲೂ.

Rating
No votes yet

Comments