ಕ್ರಿಕೆಟ್ಟೊಂದೆ ಅಲ್ಲ

ಕ್ರಿಕೆಟ್ಟೊಂದೆ ಅಲ್ಲ

ಬರಹ

ವೀರ, ಧೀರ, ಶೂರ ನಮ್ಮ ವೀರು
ತತ್ತರಿಸಿತು ಆಟಕೆ ನೆಲ ಜೋರು!

ಸೆಹವಾಗನ ಆಟ ಅಂದ್ರೆ ಅಬ್ಬ!
ನೋಡುವವರ ಕಣ್ಣುಗಳಿಗೆ ಹಬ್ಬ

ಧೋನಿ ಸಾಧನೆಯೂ ಇಲ್ಲ ಕಮ್ಮಿ
ದೋಣಿಯನ್ನು ದಡ ಸೇರಿಸ್ತಾನಮ್ಮಿ!

ನಮ್ಮ ಕ್ರಿಕೆಟ್ ಟೀಮು ಇಂದು ಚಿನ್ನ
ಇಂಥ ಆಟ ನೋಡಲು ಬಲು ಚೆನ್ನ

ಆದರೂನು ಒಂದು ದುಃಖ ನನಗೆ
ಇರಲು ಸಾಧ್ಯ ಅದೇ ದುಃಖ ನಿಮಗೆ

ಕ್ರಿಕೆಟ್ಟೊಂದೆ ಅಲ್ಲವಲ್ಲ ಆಟ
ಒಲಿಂಪಿಕ್ಸಿನಲ್ಲಿ ನಮಗೆ ಗೂಟ!

ಕ್ರಿಕೆಟ್‌ನಂತೆ ಎಲ್ಲ ಆಟಗಳಿಗು
ಪ್ರೋತ್ಸಾಹವು ಇರಲಿ, ಬರಲಿ ಬೆಡಗು