ಬಾಳ ಭರವಸೆ
ನನ್ನ ಬಾಳ ಭರವಸೆಯೇ ನೀನಾದೆ ಗೆಳೆಯಾ
ನಾ ನಡುಗುವಾಗ ಸೂರ್ಯನ ಶಾಖವಾಗಿ
ಬಿಸಿಯೇರಿ ಕಂಪಿಸುವಾಗ
ಚಂದ್ರಮನ ಶೀತಲ ಕಿರಣದಂತೆ,
ನೀ ಎನ್ನ ಪಾಲಿಗೆ
ಸರ್ವ ಋತುಗಳ ವೈಭವ
ನಿನ್ನಲ್ಲೇ ಮೇಳೈಸಿದ್ದಾದರೂ ಹೇಗೆ ಗೆಳೆಯಾ..
ನಿಲ್ಲಲಾರದೆ ಕೊಚ್ಚಿಹೋಗಿರುವೆ
ನಿನ್ನ ಭಾವನೆಗಳ ವರ್ಷಧಾರೆಯಲಿ...
ನಿನ್ನ ಪ್ರೀತಿಯ ಪ್ರವಾಹದೆದುರು
ಕೊಚ್ಚಿ ಹೋಯಿತು ಮನದ ಬೇರೆಲ್ಲ ಭಾವವು..
ಕಂಗೊಳಿಸುತ್ತಿರುವುದೊಂದೇ ಮುತ್ತಿನ ಹಾಸವು
ನಿನ್ನ ಒಲವ ಸಾಮ್ರಾಜ್ಯದಲ್ಲಿ ಇದಕ್ಕಿಲ್ಲ ಬರವೆನ್ನುತ್ತಾ..
Rating
Comments
ಉ: ಬಾಳ ಭರವಸೆ
In reply to ಉ: ಬಾಳ ಭರವಸೆ by asuhegde
ಉ: ಬಾಳ ಭರವಸೆ
ಉ: ಬಾಳ ಭರವಸೆ
In reply to ಉ: ಬಾಳ ಭರವಸೆ by bhalle
ಉ: ಬಾಳ ಭರವಸೆ