ರವಿವಾರದ ವಿಶೇಷ ಕನ್ನಡ ಕೈಬರಹಗಳು !

ರವಿವಾರದ ವಿಶೇಷ ಕನ್ನಡ ಕೈಬರಹಗಳು !

ಬರಹ

ರವಿವಾರದ ವಿಶೇಷ ಕನ್ನಡ ಬರಹಗಳು !
ಕನ್ನಡದ ಸುಂದರ ಅಕ್ಷರಗಳಲ್ಲಿ ನಾವು ಸುಮಾರು ೧೦ ವರ್ಷಗಳಿಂದೀಚೆಗೆ ಬರೆಯುವುದನ್ನು ಪತ್ರವ್ಯವಹಾರ ಮಾಡುವುದನ್ನು ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ ಅವಶ್ಯಕತೆಇಲ್ಲವೇನೋ ಎಂದು ನಾವೇ ಅಂದುಕೊಂಡು ನಮ್ಮ ತಾಯ್ನುಡಿಯನ್ನು ಕಡೆಗಾಣಿಸಿ ಬದುಕಲು ಸಾಧ್ಯವೇ. ಅದನ್ನು ಉಳಿಸಿ-ಬೆಳಸಿ ನಮ್ಮ ಮುಂದಿನ ಪೀಳಿಗೆಗೆ ಸ್ಥಾನಾಂತರಿಸುವ ಗುರುತರ ಜವಾಬ್ದಾರಿ ನಮ್ಮಮೇಲಿಲ್ಲವೇ ?

ನಾವು ಸುಮಾರು ೧೦ ವರ್ಷಗಳಿಂದೀಚೆಗೆ, ಹೆಚ್ಚುಕಡಿಮೆ,  ಕನ್ನಡದ ಸುಂದರ ಅಕ್ಷರಗಳಲ್ಲಿ ಬರೆಯುವುದನ್ನು, ಪತ್ರವ್ಯವಹಾರ ಮಾಡುವುದನ್ನು, ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ ಅವಶ್ಯಕತೆಇಲ್ಲವೇನೋ ಎಂದು ನಾವೇ ಅಂದುಕೊಂಡು ನಮ್ಮ ತಾಯ್ನುಡಿಯನ್ನು ಕಡೆಗಾಣಿಸಿ ಬದುಕಲು ಸಾಧ್ಯವೇ. ಅದನ್ನು ಉಳಿಸಿ-ಬೆಳಸಿ ನಮ್ಮ ಮುಂದಿನ ಪೀಳಿಗೆಗೆ ಸ್ಥಾನಾಂತರಿಸುವ ಗುರುತರ ಜವಾಬ್ದಾರಿ ನಮ್ಮಮೇಲಿಲ್ಲವೇ ?

ಒಂದುಕಡೆ, ’ಶೈನಾ ಕನ್ನಡ ಕೈಬರಹದ ಪತ್ರಿಕೆ,’ ಜನ್ಮತಾಳಿ, ಹಲವಾರು ಕನ್ನಡ-ಪ್ರೇಮಿಗಳ ಮನಪಸಂದ್ ಕನ್ನಡ ಅಕ್ಷರಗಳಲ್ಲಿ, ಲೇಖನಗಳು ಬರುತ್ತಿವೆ. ಸಾವಿರಾರು ಜನ ಕನ್ನಡಿಗರು, ತಮ್ಮ ಮಾತೃ-ಭಾಷೆಯಲ್ಲಿ ಪತ್ರವ್ಯವಹಾರಮಾಡಲು ಹಾತೊರಿಯುತ್ತಿರುವುದು ಕಾಣಬರುತ್ತಿದೆ ! ಇದು ಒಂದು ಧನಾತ್ಮಕ ಬೆಳವಣಿಗೆಗಳಲ್ಲೊಂದು !