ಬೋರಿಂಗ್ ಬಾಯ್ ಫ್ರೆಂಡ್ ಅಂತ ಹೇಳುವ ಮೊದಲು !!!

ಬೋರಿಂಗ್ ಬಾಯ್ ಫ್ರೆಂಡ್ ಅಂತ ಹೇಳುವ ಮೊದಲು !!!

“ನೀನು ಬೋರಿಂಗ್ ಬಾಯ್ ಫ್ರೆಂಡ್. ನಿನ್ನಂತಹ ಹುಡುಗನ್ನ ಯಾವ ಹುಡುಗೀನು ಇಷ್ಟಪಡಲ್ಲ. You are not crazy. ನಿನ್ನಲ್ಲಿ ಆ ಪಂಚ್ ಇಲ್ಲ.You can be good friend but not a great Boy Friend. ಇನ್ನು ಮುಂದೆ ನಾವಿಬ್ಬರು ಫ್ರೆಂಡ್ಸ್ ಆಗಿರೋಣ. I am sorry”, ಹಾಗೆ ಅವನು ಹೇಳಬೇಕಾದ್ರೆ ಅವನಲ್ಲಿ ಆ ನೋವಿತ್ತು. ಈ ಥರ ಅವನ ಸೊ ಕಾಲ್ಡ್ ಗರ್ಲ್ ಫ್ರೆಂಡ್ ಅವನಿಗೆ ಹೇಳಿದ್ಲಂತೆ. ಕಣ್ಣ ಕೊನೆಯಲ್ಲಿ ಕಣ್ಣೀರು ಬರೂ ಆತುರದಲ್ಲಿತ್ತು, ಮುಖವೆಲ್ಲಾ ಕಳೆಗುಂದಿ ನೋವಲ್ಲಿ ಮಿಂದೊಗಿತ್ತು. ಆತ ನಾ ತಿಳಿದಹಂಗೆ ಒಳ್ಳೆ ಹುಡುಗ, ಜಾಣ ಕೂಡ. ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ. ತಿಂಗಳಿಗೆ ಎಪ್ಪತ್ತು ಸಾವಿರ ಸಂಬಳ. ಆವತ್ತು ಒಂದಿನ, ಸುಮಾರು ಮೊರು ತಿಂಗಳ ಹಿಂದೆ, “ ಮಗಾ, ’ಆ ಹುಡುಗಿ’ (ಇನ್ನು ಮುಂದೆ “ಅವಳು” ಅಂತ ಸಂಭೋದಿಸುತ್ತೇನೆ) ನನಗೆ ಪ್ರಪೊಸ್ ಮಾಡಿದ್ಳು ಕಣೊ. ನನ್ನ Behaviour, character, silence ಅವಳಿಗೆ ಇಷ್ಟ ಆಗಿದೆಂತೆ. ಏನ್ ಮಾಡ್ಲೊ, I am scared”. ಆ ಅತುರದಲ್ಲಿ ಒಂದು ರೀತಿಯ ಭಯ ಮತ್ತು ಕಾತರ ಇತ್ತು. ಆಸೆ ಕೂಡ ಅಡಗಿತ್ತು ಅಂತ ಹೇಳಲು ಮರೆತರೆ ಮೊರ್ಖತನ. 


“ಅವಳು ಚೆನ್ನಾಗಿದಾಳಾ? ಹುಡುಗಿ ಮಾರ್ಡ್ ನ್ ಇದಾಳಾ?. ನಿನ್ಗೆ ಇಷ್ಟ ಆಗ್ತಳಾ?”, ನನ್ನ  ’ಳಾ’ ಪ್ರಶ್ನೆ ಗಳಿಗೆ ಆತ ಉತ್ತರ ಹುಡುಕುವಷ್ಟರಲ್ಲಿ, ಪ್ರೀತಿಯ ಬಲೆಯಲ್ಲಿ ಬಿದ್ದಾಗಿತ್ತು. ನಮ್ಮಲಿನ ಒಬ್ಬ ಒಳ್ಳೆ ಹುಡುಗ ಅವಳ ಜೊತೆಯಲ್ಲಿ ಮಗ್ನನಾಗಿದ್ದ. ನಾನು ಕೂಡ ಸರಿ ಅಂತಾ ಹೇಳಿದೆ, ( ಅವನು ಕೇಳುವ ಸ್ತಿತಿಯಲ್ಲಿರಲಿಲ್ಲಾ ನಿಜ , ಆದರೂ ಗೆಳೆಯಾ ಅಲ್ವ) ಪ್ರೀತಿ ತುಂಬ ಗಾಢವಾಗಿತ್ತು. ದಿನ ಅವರಿಬ್ಬರ ಸವಾರಿ ಜೋಡಿಯಾಗಿ, ಜೊತೆಯಾಗಿ, ಒಂದಾಗಿ , ಹೀಗೆ ನಡೆದಿತ್ತು ಇಷ್ಟು ದಿನ. ಆದರೆ, ಈಚೆ ಕೆಲವೂಂದು ದಿನದಿಂದ ಅವಳು ಬರ್ತಾಯಿಲ್ಲಾ ಅಂತ ಹೇಳಿದ್ದಾ. ನಾನು ಬಹಳ ಕೇಳಲಿಲ್ಲಾ. ಯಾಕೆಂದರೆ ಪ್ರೀತಿಯಲ್ಲಿ ಇದ್ದಾಗ ಗೆಳೆಯರ ಹೇಳಿಕೆ ಮತ್ತು ಕೇಳಿಕೆ ಅಷ್ಟಾಗಿ ರುಚಿಸುವುದಿಲ್ಲಾ.(ನನ್ನ ಅನುಭವದ ಮಾತು). ಆದರೆ ಇವತ್ತು ನನ್ನ ಪ್ರೀತಿಯಿಲ್ಲದ ಮನಸ್ಸಿನಲ್ಲಿ ಏನೂ ನೋವು , ಆತನಿಗೆ ಹಾಗಾಗ ಬಾರದಾಗಿತ್ತು. ಹೌದು ಪ್ರೀತಿಯ ಮಾಯೆನೇ ಅಂತಹುದು. ಪ್ರೀತಿ ಮಾಯೆ ಹುಷಾರು, ಕಣ್ಣೀರ್ ಮಾರೊ ಬಜಾರು”, ಬಹಳ ಸರಿ. ಆದರೆ ನನ್ನ ವಿಚಾರ ಅವಳು ಹೇಳಿದ ಮೊದಲ ವಾಕ್ಯದ ಮೇಲೆ ಕೇಂದ್ರಿಕ್ರತವಾಯಿತು. ಹೌದು ಹುಡುಗೀಯರಿಗೆ ಬೋರಿಂಗ್ ಬಾಯ್ ಫ್ರೆಂಡ್ ಇಷ್ಟಾಗಲ್ಲ. ಇವನ್ನಲ್ಲಿದ್ದ ಆ ಬೋರಿಂಗ್ ಅಂಶದ ಸಂಶೋಧನೆಯಲ್ಲಿ ತೊಡಗಿದೆ. ಆತ ಒಳ್ಳೆ ಮನಸ್ಸಿನ ಹುಡುಗ ಆದರೆ ಸ್ವಲ್ಪ introvert. ತನ್ನ ಬಗ್ಗೆ ಅಧಿಕ ಹೇಳಲು ಇಷ್ಟಪಡಲ್ಲ. ಅದಕ್ಕೊ ಮಿಕ್ಕಿ ಇನ್ನೊಬ್ಬರನ್ನ ಹೇಗೆ ಹೊಗಳಬೇಕು ಅಂತ ಗೊತ್ತಿಲ್ಲದವ. ಮುಂಜಾನೆ ಎದ್ದು ಸ್ನಾನ ಪೊಜೆ ಮಾಡದೇ ಟೀ-ಕಾಫಿ ಕುಡಿಯಲ್ಲ. ಆಮೇಲೆ ಹೊರಗಿನ ಜಗತ್ತಿನ ಅರಿವು ಕಡಿಮೆ ಅಂತ ಹೇಳಿದ್ರೇ ಅತಿಶಯೋಕ್ತಿ ಅಲ್ಲ. ಬೈಕ್ ನ 30 ಕೀ.ಮೀ.ಕಿಂತ ಜೋರಾಗಿ ಹೋಗಿದ್ದೇಯಿಲ್ಲಾ. ಜೋರಾಗಿ ಹೋಗಿ ಬ್ರೇಕ್ ಹಾಕಿದ್ರೆ ,ಹಿಂದೆ ಕುಳಿತಿರೋ ಅವಳಿಗೆ ಆ ಜರ್ಕ್ ಯಿಂದ ತೊಂದರೆ ಆಗಬಹುದು.ಗಟ್ಟಿಯಾಗಿ ಕೈ ಹಿಡಿದ್ರೆ ಅವಳಿಗೆ ನೋವಾಗುತ್ತೆ ಅಂತಾ ಮೆತ್ತಗೆ ಹೊವಿನ ಸ್ಪರ್ಶ ನೀಡೊ ಹುಡುಗ. ಬಿಗಿಯಾಗಿ ತಬ್ಬಿ ಹಿಡಿದ್ರೆ ಅವಳಿಗೆ ಉಸಿರು ಕಟ್ಟುತ್ತೆನೋ ಅಂತ ಭಯ. ಮುತ್ತು ಕೊಟ್ರೆ ಅವಳಿಗೆ ಮುಜುಗರ ಆಗುತ್ತೆನೋ ಅನ್ನೋ ಅತಂಕ. ಪಾರ್ಕಲ್ಲಿ ಎಲ್ಲರ ದ್ರಷ್ಟಿಗೆ ಬಿದ್ದರೆ ಅವಳಿಗೆ ಕಸಿವಿಸಿಯಾಗಬಹುದು ಅಂತ ಚಿಂತೆ. ಸಿನಿಮಾ ಮಂದಿರದಲ್ಲಿ ಹೆಗಲ ಮೇಲೆ ಕೈ ಹಾಕಿದರೆ, ಅವಳಿಗೆ insecure ಅನಿಸಬಹುದು ಅಂತ. ಬಾರ್ ಮತ್ತು ರೆಸ್ಟೋರೆಂಟ್ ಲ್ಲಿಗೆ ಹೋಗೊಕ್ಕಿಂತ ಮನೆಯಲ್ಲಿನ ಅಡುಗೆ ರುಚಿ-ಮತ್ತು ಶುಚಿ ಮತ್ತು ಅವಳ ಆರೋಗ್ಯಕ್ಕೆ ಒಳ್ಳೆದು ಅನ್ನೊ ನಂಬಿಕೆ. Pizza – burger ನ ತಾತ್ಕಾಲಿಕ ರುಚಿ, ನಮ್ಮ ಅಡುಗೆಮನೆಯ ದೋಸೆ – ಇಡ್ಲಿ, ತಾಲಿಪಿಟ್ಟು- ಅಕ್ಕಿ ರೋಟ್ಟಿ ಯ ರುಚಿಗೆ ಸಮನಲ್ಲ ಅನ್ನೂ ಖುಷಿ. ಅಂತ ರುಚಿ ಅವಳು ಸವಿಯಲಿ. ಕಾಫಿ ಡೇ ಅನ್ನೋ ಜಂಕ್ಷನ್ ನಿನ ಗಿಜ-ಗಿಜದಿಂದ ಅವಳ privacy ಗೆ ತೊಂದರೆ ಆಗಬಹುದು. ಅವಳಿಗೆ ದೇವಸ್ಥಾನದಲ್ಲಿ ಸಿಗಬಹುದಾದ ಶಾಂತಿ, ಯಾವ ಪಬ್ ಲ್ಲಿ ಸಿಗಲ್ಲಾ ಅನ್ನೋ ಅಂಬೋಣ. ರಾತ್ರಿ ಹೊತ್ತು ಬಹಳ ಮಾತಾಡಿದ್ರೆ, ನಿದ್ರೆಗೆ ತೊಂದರೆಯಾಗಿ ನಾಳೆ ಅವಳಿಗೆ ಆಫೀಸಿನಲ್ಲಿ ಕಷ್ಟ ಆಗಬಹುದು ಅನ್ನೋ ಕಾಳಜಿ.             


                                                                 


ಯಸ್ ! ಇಂತಹ ಒಬ್ಬ ಹುಡುಗ ನಿಜವಾಗ್ಲು Cannot be a GREAT BOY FRIEND. ಹೌದು ಈತ ಬೋರಿಂಗ್ ಬಾಯ್ ಫ್ರೆಂಡ್

Rating
No votes yet

Comments