ನಿಮ್ಮ ನೆನಹು
ನಿಮ್ಮಗಳ ಚರಣಾಮೃತವ ಕೇಳಿದಡೆ
ದವಡೆಗೆ ಮೂಲ ಎಂಬರಯ್ಯಾ
ಅರಿವ ಮಾತ ಹೇಳಿದಡೆ ಇರಿವ ಮಾತ
ಅರುವಹುವರಯ್ಯಾ
ನಿಮ್ಮ ನೆನಹು ನೆಮ್ಮದಿಗೆ ಮೂಲವೆಂದರೂ
ಕಟಕಿಯಾಡುವರಯ್ಯಾ
ನಿಮ್ಮ ನಾಲಗೆಯ ಬಲವಿಲ್ಲದೇ ನಾವು ಸೂತ್ರವಿಲ್ಲದ ಗೊಂಬೆಯಂತೆ
ಜಗದಿ ನಿಜದಿ ಬದುಕುವ ಜನಕೆ ತಾವಿಲ್ಲವಯ್ಯಾ
ನಿಮ್ಮ ನೆನಹನೆಂದು ಮರೆಯದಂತೆ ಮಾಡಯ್ಯಾ
ನಿಮ್ಮ ಶರಣರ ನುಡಿಯ ಬಿಡಿಸದಿರಯ್ಯಾ
ಪರ್ವತ ನದಿಯ ಆಯ್ದಿತ್ತು
ದೇವಳವೂ ಮೂರ್ತಿಯ ಆಯ್ದಿತ್ತು
ಶಿಷ್ಯ ಗುರುವ ಆಯ್ದಿದ್ದ
ನೀವು ನನ್ನ ಆದಿರಿ,ಸುಪ್ರೀತ ಪ್ರಿಯ ಸ್ವಘಟ್ಟಿಶ್ವರ
Rating
Comments
ಉ: ನಿಮ್ಮ ನೆನಹು
ಉ: ನಿಮ್ಮ ನೆನಹು