ಸ್ವಲ್ಪ ಕಾಲದ ಬಗ್ಗೆ -- ಭಾಗ -೧
ಕಾಲ ಅನ್ನೋದು ಯಾರ ಮನೆಯ ಸ್ವತ್ತಲ್ಲ ನೋಡಿ. ನಾವೆಲ್ಲಾ ಕಾಲದ ವೇಗಕ್ಕೆ ಕೊರಗೋದು ಜಾಸ್ತಿ. ಜೀವನದ ಪ್ರತಿ ಕ್ಷಣವನ್ನು ಕಾಲದ ಘಟ್ಟ ಅಂತ ಕರೆದರೆ, ಆ ಘಟ್ಟದಲ್ಲಿ ನಾವು ಮಾಡದ ಕೆಲಸದ ನೋವು, ಹೇಳದ ಮಾತುಗಳ ತಳಮಳ, ತೋರದ ಪ್ರೀತಿಯ ಅಳುಕು, ಬದುಕಿನ ಅಂತಿಮ ಕ್ಷಣದವರೆಗೂ ನಮ್ಮ ನೆನಪಿನಂಗಳವನ್ನು ಅಲಂಕರಿಸುತ್ತದೆ. ಹಾಗಾಗಿ ಕಾಲ ನಮಗೆ ಯಾವ ರೀತಿಯ ಕಾಲಾವಕಾಶ ಕೂಡದೆ ತನ್ನತನವನ್ನ ನಮ್ಮಲ್ಲಿ ಅಚ್ಚಳಿಸುತ್ತದೆ. ಇಂತಹ ಕಾಲದ ಕೂಸಾಗಿರುವ ನಾವು ಅದರೊಡನೆ ಸ್ಪರ್ಧೆಯಲ್ಲಿ ಸೋಲುವುದು ಬಹುತೇಕ ಖಚಿತ. ಹಾಗದರೆ ಈ ಕಾಲದೂಡನೆ ಸ್ಪರ್ಧಿಸಿ ಗೆಲ್ಲೋದು ಹೇಗೆ ಅಂತಹ ವಿಚಾರ ಮಾಡಿದಾಗ, ಕನ್ನಡ ಚಿತ್ರನಟ ಶಂಕರ್ ನಾಗ್ ರ ನುಡಿ ನೆನಪಾಗುತ್ತೆ
“We got lots of time to sleep after Death. Let’s Work more when we are Alive”
ಈ ವಾಕ್ಯದ ಸತ್ಯಾಸತ್ಯತೆಯ ಚರ್ಚೆ ನನಗೆ ಅನಗತ್ಯ ಅನ್ನಿಸುತ್ತದೆ. ನನಗೆ ಬಂದಿದ್ದ ಒಂದು SMS ಇಂತಹ ಚಿಂತನೆಗೆ ನಾಂದಿ ಹಾಡಿತು. ಯಸ್ ಕಾಲದ ಪ್ರಖರತೆನೆ ಅಷ್ಟು. ವಾಸ್ತವ ಅರಿವಿಗೆ ಬರುವ ಹೊತ್ತಿಗೆ ಕಾಲಮಾನ ಅಳಿಸಿ ಹೋಗುತ್ತದೆ. ಕಡತಗಳು ಹಳೆಯದಾಗಿ ಹೊಸ ಕಡತಗಳ ಭಾರ ಹೊರಲು ಸಜ್ಜಾಗಿರುತ್ತದೆ. ಆದರೆ ಆ ಕಡತಗಳಲ್ಲಿ ಅಡಕವಾದ ಆಗದೆಯಿದ್ದ ಕೆಲಸದ ಚಿಂತನೆ ಅಗತ್ಯ ಅನಿಸುತ್ತದೆ. ನಿಜ ನಾವು ಕಳೆದು ಹೋದ ಕಾಲದ ಬಗ್ಗೆ ಯೊಚಿಸುವುದು ಎಷ್ಟು ಸಮಂಜಸ ಅಂತ ವಿಚಾರ ಮಾಡಿದರೆ, ಯೋಚಿಸದೆಯಿರುವುದು ಅಷ್ಟೆ ಖೇದನೀಯ. ಕಾಲಗರ್ಭವನ್ನು ಅಗೆದರೆ ಸಿಗುವ ನೆನಪಿನ ಧೊಳಿಗೆ, ಗಣಿಯಷ್ಟು ಬೆಲೆ ಸಿಗದಿದ್ದರೊ, ಅದರ ಬೆಲೆ ಮನಸ್ಸಿನ ಮಾರ್ಕೆಟ್ನಲ್ಲಿ ಅಗಣಿತ.
“ಯಾಕೆ ಈ ಸ್ವಾರ್ಥ ತುಂಬಿದ ಭೂಮಿಗೆ ನನ್ನ ಕರೆತಂದೆ” ಅಂತ ನಮ್ಮ ಪ್ರಥಮ ಅಳು, ಅದರೂ ಅನಿವಾರ್ಯ ಅನ್ನುವ ಅಳು ನಮ್ಮ ಕಾಲದೋಡನೆ ಸಮರ ಸಾರುವುದಕ್ಕೆ ರಣಕಹಳೆ ಇರಬಹುದು. ಅಲ್ಲಿಂದ ಶುರುವಾಗುವ ಸಮರಕ್ಕೆ ಸಜ್ಜಾಗುವ ರೀತಿ ಇನ್ನು ವಿಶೇಷ ಅನ್ನಿಸುತ್ತದೆ. ತಾಯಿಯ ಎಂಬ ಗುರುವಿನ ಮಾರ್ಗದರ್ಶನದಲ್ಲಿ ರಣ ಪಟ್ಟುಗಳನ್ನು ಕಲಿಯುವ ನಮ್ಮ ಪ್ರಯತ್ನ ಸ್ವಲ್ಪ ನಿಧಾನವಾದರೂ, ಕರಾರುವಾಕ್ಕಾಗಿ ಕಲಿಸುವ ಹೊಣೆಯಲ್ಲಿ ಗುರುವೆಂದು ವಿಮುಖರಾಗುವುದಿಲ್ಲ. ಬರಬರುತ್ತ ಕಾಲದ ಕಾಷ್ಠತೆಗೆ ನಮ್ಮ ಒಗ್ಗುವಿಕೆ ಅನಿವಾರ್ಯವಾದೆಂತಲ್ಲಾ ಯುದ್ಧ ಗೆಲ್ಲೂ ಚತುರತೆ ಮತ್ತು ಚಾಣಾಕ್ಷತನದ ಅಗತ್ಯ ಹೆಚ್ಚಾಗುತ್ತದೆ. ಈ ಅಗತ್ಯ ಪೂರೈಸುವ ಓದಿಗೆ ಶಾಲೆಯೆಂಬ ಸಮವಸ್ತ್ರವಿರುವ ವ್ಯವಸ್ಥೆಯು ನಮ್ಮಲ್ಲಿ ಜಾರಿಯಿದೆ. ಆದರೆ ಇಲ್ಲಿ ಕೆಲವೊಂದು ಅಕ್ಷೇಪ ವ್ಯಕ್ತವಾಗುತ್ತದೆ. ಇಲ್ಲಿ ಕಲಿತ ತಂತ್ರಗಳು ಎಷ್ಟರಮಟ್ಟಿಗೆ ನಮ್ಮ ಕಾಲದೊಂದಿನ ಸಮರದಲ್ಲಿ ಬಳಕೆಯಾಗುತ್ತದೆ ಏನ್ನೋ ವಿಚಾರದಲ್ಲಿ ಭಿನ್ನ ನಿಳುವಳಿಕೆಯಿದೆ. ಆದರೆ ಈ ತಂತ್ರಗಳು ನಮ್ಮ ಮುಂದಿನ ಮತ್ತು ಅಂತಿಮ ಅನ್ನಬಹುದಾದ ಸಮರಾಭ್ಯಾಸಕ್ಕೆ ಕೀಲೀ ಕೈ. ಇಷ್ಟು ಪಟ್ಟುಗಳನ್ನು ಕಲಿಯುವ ಹೂತ್ತಿಗೆ, ಕಾಲ ನಮಗೆ ಕೊಟ್ಟಿರುವ ಕ್ವಾರ್ಟರ್ ಸಮಯವನ್ನು ಮುಗಿಸಿಬಿಟ್ಟಿರುತ್ತೇವೆ.
ಈ ಸಮಯದಲ್ಲಿ ಆತ್ಮವಲೋಕನ ಅಗತ್ಯ. ಹಾಗೆ ಕುಳಿತು ತಿರುಗಿ ನೋಡಿದರೆ, ನಾವು ಮರೆತ ಅವಶ್ಯಕತೆ ಅನಿಸುವ ತಂತ್ರಗಳು, ಆ ಸಮಯದಲ್ಲಿ ನಾವು ಮಾಡಬಹುದಾದ ಕೆಲಸ, ನಾವು ಮಾಡದೆಯಿದ್ದ ಕಾರ್ಯ. ಛೇ , ಅವತ್ತು ಈ ತರಹ ಮಾಡಬೇಕಾಗಿತ್ತು ಅನ್ನೊ ಕೊರಗು ನಮ್ಮನ್ನು ಆವರಿಸಿ ಬಿಡುತ್ತದೆ.
------- ಇಷ್ಟಕ್ಕೆ ಇಂದು ಸಾಕಾಗಿತ್ತು,, ಕಾಲದ ಆಕಳಿಕೆಗೆ ನಿದ್ದೆ ಆವರಿಸಿತ್ತು , ನಾಳೆ ಮುಂದುವರಿಸುವ