ಪಶ್ಚಿಮ ಘಟ್ಟದ ಸುತ್ತ..

ಪಶ್ಚಿಮ ಘಟ್ಟದ ಸುತ್ತ..


"ಲಕ್ಷಾಂತರ ವರ್ಷದಲ್ಲಿ ರೂಪುಗೊಂಡ ಪಶ್ಚಿಮ ಘಟ್ಟವನ್ನು ಕೆಲವೇ ವರ್ಷಗಳಲ್ಲಿ ನಾಶಮಾಡಬಹುದು. ಆದರೆ ಮತ್ತೆ ಬೇಕೆಂದರೆ ಇದನ್ನೆಲ್ಲಾ ಸೃಷ್ಟಿಸಲು ಸಾಧ್ಯವಿದೆಯೇ?"


  ಸುಂದರಲಾಲ್ ಬಹುಗುಣ ಗುಂಡ್ಯ ಜಲವಿದ್ಯುತ್ ಯೋಜನೆ ವಿರೋದಿಸಿ ಹೇಳಿದ ಮಾತು, ವಿಜಯ ಕರ್ನಾಟಕದ(೨೨-೧೨-೦೯) ೧೩ನೇ ಪುಟದಲ್ಲಿತ್ತು.


ಇದನ್ನು ಮೊದಲ ಪುಟದಲ್ಲಿ ಹಾಕಿ, ವಿಧಾನ ಪರಿಷತ್ ಕಸರತ್ ರಿಸಲ್ಟನ್ನು ೧೪ನೇ ಪುಟದಲ್ಲಿ ಹಾಕಬೇಕಿತ್ತು.



ದಕ್ಷಿಣ ಭಾರತಕ್ಕೆ ಮುಕುಟಪ್ರಾಯವಾದ ಪಶ್ಚಿಮ ಘಟ್ಟದಲ್ಲಿ ಗುಂಡ್ಯಾ ಜಲವಿದ್ಯುತ್ ಯೋಜನೆ, ನೇತ್ರಾವತಿ ನದೀ ತಿರುವಿನಂತಹ ಅಪಾಯಕಾರಿ ಯೋಜನೆ ವಿರೋಧಿಸಲು ವಯಸ್ಸಾದ ಬಹುಗುಣ ಬಂದು ಹೋರಾಟ ಮಾಡಬೇಕಾ?


ಇದೇ ನೆಲದಲ್ಲಿ ಹುಟ್ಟಿದ, ನಮ್ಮ ನೆಚ್ಚಿನ ರಾಜಕಾರಣಿಗಳು ನಮ್ಮ ನೆಲದ ಇಂಚಿಂಚು ಹಂಚಿ, ತಮಗೆಷ್ಟು, ತಮ್ಮ ಪಾರ್ಟಿಗೆಷ್ಟು ಹಣ ಬರುವುದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.


ರೈತರ ಹೆಸರೇಳಿ, ರೈತರ ಜಮೀನು ಎಗರಿಸಿ, ಸೈಟ್, ಫ್ಲೈಟ್, ಫೈಟ್‌‌ನಲ್ಲಿ ಮುಳುಗಿದ್ದಾರೆ :(



ಅಲ್ಲಲ್ಲಿದ್ದ ನದಿ, ಕೆರೆಗಳನ್ನೆಲ್ಲಾ ಬತ್ತಿಸಿ, ಈಗ ೪೦೦-೫೦೦ರೂ ಕೊಟ್ಟು,fun, wonder..,ಎಂದು ಮೊಣಕಾಲು ಮಟ್ಟದ ನೀರಲ್ಲಿ ತಳಪಳ ಆಡಿ ಬರುತ್ತಿದ್ದೇವೆ.


ಪ.ಘಟ್ಟ ಸಮತಟ್ಟಾದ ಮೇಲೆ ಟ್ರೆಕ್ಕಿಂಗ್ ಮಾಡಲೂ fun, wonder..,ಎಂದು ಕಾಡು,ಗುಡ್ಡಗಳನ್ನು ಮಾಡಿಯಾರು. ಚಿಂತಿಸುವಂತಹದ್ದೇನಿಲ್ಲ :)


"ಸದ್ಯ ಪರಿಸರಕ್ಕೆ ಸಂಬಂಧಿಸಿ ಭಾರತದ ಜನ ನಿದ್ರಾವಸ್ಥೆಯಲ್ಲಿದ್ದಾರೆ. ಅವರು ಒಂದಾಗಿ ಘರ್ಜಿಸುವ ಕಾಲ ಬಂದೇ ಬರುತ್ತದೆ." ನಾನು ಹೇಳಿದ್ದಲ್ಲ. ಬಹುಗುಣರವರು ಹೇಳಿದ್ದು.


ಆ ಕಾಲ ಬೇಗನೆ ಬರಲಿ.


ಪ.ಘಟ್ಟ ಉಳಿಯಲಿ.


-ಗಣೇಶ.


 


 

Rating
No votes yet

Comments