ಉತ್ಪಾತ
ಜುಳು ಜುಳು ಝರಿಯು,
ಬಿರಬಿರನೇ ಹರಿದು
ಶರಧಿಯ ಸುಶ್ರಾವ್ಯ ನೀನಾದ
ಕರಣ ಪಟಿಲ ಹರಿದು
ಹಸಿರೆಲೆಯ ತಾಳವು ,
ಕಿವಿಗೆ ಭಾರವಾಗಿ,
ಗಿರಿಗಗನಗಳು
ಥರಥರನೆ ನಡುಗಿ
ತಂಪು ಗಾಳಿಯು,
ವಿಷವನು ಪಸರಿಸಿ,
ದಿಗಂತದ ರವಿಯು
ತಾ ಮೊಖನಾಗಿ
ಸಾರ್ಥಕ ಬದುಕು,
ನಿರರ್ಥಕದೆಡೆಗೆ ತಿರುಗಿ
ಭವ-ಭಾಂದವ್ಯದ,
ತಾತ್ಪರ್ಯ ಮರೆತು
ಪ್ರಪಂಚದ ಕಡಿವಾಣ ಮುರಿದುಬಿದ್ದಿದೆ !!
Rating