ನಾನು ನನ್ನ ಕನಸೂ.......

ನಾನು ನನ್ನ ಕನಸೂ.......

ನಾನು ಚಿಕ್ಕವಳಿದ್ದಾಗಿನಿಂದ ಇಲ್ಲಿಯವರೆಗೆ ಕಂಡಂತಹ ಕನಸನ್ನೇ ಮತ್ತೆ ಮತ್ತೆ ಕಂಡಿದ್ದೆಂದರೇ ನಾನು ಸೈಕಲ್ ಓಡಿಸಿದ್ದು.......! ನಾನು ಚಿಕ್ಕಂದಿನಲ್ಲಿಯೇ ಅಂದರೇ ನಾಲ್ಕನೇಯ ತರಗತಿಯಲ್ಲಿದ್ದಾಗಿನಿಂದಲೇ ಸೈಕಲ್ ಕಲೆಯಲು ಪ್ರಾರಂಭಿಸಿದ್ದೇನೆ, ಆದರೆ ಇಲ್ಲಿಯವರೆಗೂ ಅದು ಪೂರ್ಣವಾಗಿಲ್ಲ. ಕಲಿಯಲು ಶುರು ಮಾಡಿದಾಗಲೆಲ್ಲಾ ನೂರೆಂಟು ವಿಘ್ನಗಳು.


ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಶುರು ಮಾಡುತ್ತೇನೆ, 2 ದಿನಗಳಲ್ಲಿಯೇ ಮತ್ತೆ ಬಿಟ್ಟು ಬಿಡುತ್ತೇನೆ. ಕಲಿಯುವ ನನಗೇ ಬೇಸರ ಬಂದರೂ ಕಲಿಸುವ ನನ್ನ ತಮ್ಮ ಮಾತ್ರ ಬೇಸರಗೊಳ್ಳುವುದಿಲ್ಲ.......


ನನ್ನ ಈ ಸೈಕಲ್ ಕಲಿಯುವ ಹುಚ್ಚಿನಿಂದ ಮನೆಯವರೆಲ್ಲ ಬೈದರೂ ನನ್ನ ತಮ್ಮ ಮಾತ್ರ ಯಾವಾಗಲೂ ನನ್ನ ಬೆಂಬಲಕ್ಕಿರುತ್ತಾನೆ. ಇಷ್ಟು ದೊಡ್ಡವಳಾಗಿದ್ದೀಯಾ ಇನ್ನು ಸೈಕಲ್ ಕಲಿಯುವ ಹುಚ್ಚು ನಿನಗೆ ಎಂದು ಅಜ್ಜಿ ಬೈದಾಗಲೆಲ್ಲ ಸುಮ್ಮನಾಗುತ್ತೇನೆ. ಮತ್ತೆ ಒಂದು ವಾರ ಬಿಟ್ಟು ತಿರುಗಾ ತಮ್ಮನ ಜೊತೆ ಸೈಕಲ್ ಕಲೆಯಲು ಹೊರಡುತ್ತೇನೆ......


ಈಗ್ಗೆ ಒಂದು ಹದಿನೈದು ದಿವಸಗಳಿಂದ ದಿನಾ ಬಿಟ್ಟೂ ಬಿಡದೇ ಅಭ್ಯಾಸ ಮಾಡುತ್ತಿದ್ದೇನೆ. ಈ ಸಾರಿ ಕಲಿಯಲೇಕೆಂಬ ಗಟ್ಟಿ ನಿರ್ಧಾರವನ್ನು ಮಾಡಿದ್ದೇನೆ. ಅದಕ್ಕೆ ಮುಖ್ಯ ಕಾರಣವೆಂದರೇ ನಾನು ಕೆಲಸ ಮಾಡುವ ಸ್ಥಳ ತುಂಬಾ ದೂರವಿದೆ. ದಿನಾ ಅಲ್ಲಿಗೆ ನಡೆದುಕೊಂಡೇ ಹೋಗುತ್ತೇನೆ. ಸೈಕಲ್ ಕಲೆತರೇ ಸ್ಕೂಟಿಯನ್ನು ಸುಲಭವಾಗಿ ಕಲಿಯಬಹುದೆಂಬ ನಂಬಿಕೆ.......!


ನನ್ನ ಈ ಮರೆತ ಕನಸನ್ನು ಬರೆಯಲು ಸ್ಫೂರ್ತಿಯಾಗಿದ್ದು ಪ್ರಕಾಶ್ ರೈಯವರ ಸಿನಿಮಾದ ಬಗ್ಗೆ ಪತ್ರಿಕೆಯಲ್ಲಿ ಓದಿದ್ದು. ನನ್ನ ಕನಸನ್ನು ನೆನಪಿಸಿದ ಪ್ರಕಾಶ ರೈ ಅವರಿಗೆ ತುಂಬಾ ಧನ್ಯವಾದಗಳು.

Rating
No votes yet

Comments