ನನ್ನ ಕನಸಿನ ಭವನ
ಬರಹ
ಎಲ್ಲ ಸಂಪದಗರಿಗೆ ನನ್ನ ಮೊದಲ ಕವನದ ಅರ್ಪಣೆ. ಇಂದಿನಿಂದ ಆರಂಭ ನನ್ನ ಪಯಣ.
ನನ್ನ ಕನಸಿನ ಭವನ
ಕೆಲವು ವರುಷಗಳ ಹಿಂದೆ
ಹೃದಯಕ್ಕಾದದ್ದು ಗಾಯ
ಕಾದು ನೋಡುತಿಹೆನಿಂದು
ಆಗುವುದೆಂದು ಮಾಯ
ಕುಡಿಲೊಡೆದಿದೆ ಆಸೆ ಇಂದು
ಹಳೆಯ ಗಾಯ ಮಾಗುವುದೆಂದು
ನೋವನಳಿಸುವ ಬಯಕೆ
ನಿನಗಿದೆಯೇ ಮನಸು ಇದಕೆ
ಆವರಿಸಿರುವೆ ಮನದ ತುಂಬಾ
ಸದಾ ಕಣ್ಣಲ್ಲಿ ನಿನ್ನ ಬಿಂಬ
ಸಾಕಾಗಿ ಹೋಯ್ತು ಕಳಿಸಿ ಎಸ್ಸೆಮ್ಮೆಸ್
ಯಾವಾಗಾಗುವೆ ನನ್ನ ಮಿಸ್ಸೆಸ್
ತೀವ್ರವಾಗಿದೆ ಉತ್ತರ ಕೇಳುವ ಬಯಕೆ
ಕೊಡುವೆಯ ಸ್ವಲ್ಪ ಸಮಯ ಇದಕೆ.
ಕಾಯುತ್ತಿರುವೆ ಕಟ್ಟಲು ಕನಸಿನ ಭವನ
ಮಾಡು ನೀ ಅದನು ನನ್ನ ಶ್ವೇತ ಭವನ.
- ತೇಜಸ್ವಿ.ಎ.ಸಿ.