ನೆರಳ ಬೆಳಕಿನಾಟ ಈ ಸಂಸಾರದ ಕೂಟ

ನೆರಳ ಬೆಳಕಿನಾಟ ಈ ಸಂಸಾರದ ಕೂಟ

ನೆರಳ ಬೆಳಕಿನಾಟ ಈ ಸಂಸಾರದ ಕೂಟ
ತಿಳಿದುಬದುಕಬೇಕು ಇದು ನಿಲ್ಲದ ಆಟ

ಹೂವೊಂದೆಅಲ್ಲ ಮುಳ್ಳಿಹಿದು ಮಗ್ಗುಲಲ್ಲಿ
ಬಿಸಿಲೊಂದೆ ಅಲ್ಲ ಬೆಳದಿಂಗಳುಂಟು ಇಲ್ಲಿ  

ಸುಖದಸೋಗಿನಲ್ಲಿ ಹುದುಗಿಹುದು ದುಃಖ
ಆಚೆನೋಡು ನೀ ನಿಂತಿಹುದು ಸುಖವು ಪಕ್ಕ

ಕೆಸರೊಂದೆ ಅಲ್ಲ ಅರಳಿಹಿದು ಕಮಲ ಇಲ್ಲಿ
ಹುಟ್ಟು  ಮತ್ತದೇ ಸಾವು  ನಿಯಮವಿಲ್ಲಿ

ಕತ್ತಲೆಯು ಕವಿದಾಗ ಕಂಗೆಟ್ಟು  ಕೂಡದಿರು
ಬೆನ್ನಟ್ಟಿ  ಬರುವ ಬೆಳಕು ನೀ ಕಾಯುತಿರು

ನೆರಳ ಬೆಳಕಿನಾಟ ಈ ಸಂಸಾರದ ಕೂಟ

ತಿಳಿದುಬದುಕಬೇಕು ಇದು ನಿಲ್ಲದ ಆಟ .

Rating
No votes yet

Comments