ಇನ್ನಾದರೂ ನಿಂತೀತೇ ಆನ್ಯಾಯ ...

ಇನ್ನಾದರೂ ನಿಂತೀತೇ ಆನ್ಯಾಯ ...

೧೯ನೆಯ ಶತಮಾನದಿಂದ ಶ್ರೀಮಂತ ದೇಶಗಳು ಕೈಗಾರಿಕೋದ್ಯಮದಲ್ಲಿ ತಾವು ಆರ್ಥಿಕ ಅಭಿವೃದ್ಧಿ ಹೊಂದಲು ಭೂಮಿಯ ವಾತಾವರಣ ಬದಲಾವಣೆಗೆ ಅಪಾರ ಪ್ರಮಾಣದಲ್ಲಿ ಕೊಡುಗೆಗಳನ್ನು ನೀಡಿವೆ. ಇಂದು ಅವರ ಈ ಶ್ರೀಮಂತಿಕೆಗೆ ಅವರ ಕೃತ್ಯಗಳೇ ಕಾರಣ. ಈಗ ಅವರು ತಮ್ಮನ್ನು ಶ್ರೀಮಂತರಾಗಲು ಕಾರಣವಾಗಿರುವ ಈ ಭೂಮಿಯ ಬಗ್ಗೆ ಕಾಳಜಿ ವಹಿಸಲಿಲ್ಲ. ಆದರೆ ಭೂಮಿಯು ಹದಗೆಡುತ್ತಿರುವ ಕಾಲಕ್ಕೆ ಎಚ್ಚೆತ್ತುಗೊಂಡ ಈ ರಾಷ್ಟ್ರಗಳು ವಿಶ್ವದ ಎಲ್ಲ ದೇಶಗಳನ್ನು ಒಂದೆಡೆ ಸೇರಿಸಿ ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಚರ್ಚಿಸಿ ಒಂದು ಸೂತ್ರವನ್ನು ಕಂಡುಕೊಳ್ಳಲು ನಿರ್ಧರಿಸಿದವು. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ತಿರ್ಮಾನಿಸಲು ಕೋಪನ್ ಹೇಗನ್ ಎಂಬ ನಗರದಲ್ಲಿ ವಿಶ್ವದ ಎಲ್ಲ 192 ದೇಶಗಳ ಪ್ರತಿನಿಧಿಗಳು, ವಿಜ್ಞಾನಿಗಳು, ಪರಿಸರವಾದಿಗಳು ಸೇರಿ ಶೃಂಗಸಭೆಯನ್ನು ಆಯೋಜಿಸಲಾಯಿತು.
ಅಲ್ಲಿ ಭಾಗವಹಿಸಿದ ದೇಶಗಳಲ್ಲಿ ಹೆಚ್ಚಿನ ತೃತೀಯ ದೇಶಗಳು ಪ್ರತಿನಿಧಿಸಿದವರು ಈ ಶೃಂಗಸಭೆಯಲ್ಲಿ ಕೈಗೊಂಡ ಒಪ್ಪಂದ ತಿರ್ಮಾನ ಹಾಗೂ ಒಡಂಬಡಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿ ತಿರಸ್ಕರಿಸಿದವು. ಹಾಗಾಗಿ ಕೋಪನ್‌ಹೇಗ್‌ನಲ್ಲಿ ನಡೆದ ೨೦೦೯ನೇಯ ಈ ಶೃಂಗಸಭೆಯು ವಿಫಲವಾಯಿತು. ಇಲ್ಲಿ ಸೇರಿದ ವಿಶ್ವದ 192 ದೇಶಗಳಲ್ಲಿ ಅನೇಕ ರಾಷ್ಟ್ರಗಳು ಮುಖ್ಯವಾಗಿ, ಸಣ್ಣ ಹಾಗೂ ಆಫ್ರಿಕನ್ ದೇಶಗಳು ಶ್ರೀಮಂತ ದೇಶಗಳು ಮಂಡಿಸಿದ ವಾದ, ಒಡಂಬಡಿಕೆಗಳನ್ನು ತಿರಸ್ಕರಿಸಿದವು. ಶ್ರೀಮಂತ ದೇಶಗಳು ಅಭಿವೃದ್ಧಿಶೀಲ ದೇಶಗಳಿಗೆ ವರ್ಷಕ್ಕೆ ಇಷ್ಟೆ ಪ್ರಮಾಣದಲ್ಲಿ ವಾತಾವರಣಕ್ಕೆ ಇಂಗಾಲಾಮ್ಲವನ್ನು ಹೊರಸೂಸಬೇಕೆಂಬ ಷರತ್ತು ವಿಧಿಸಿದ್ದರು. ಆದರೆ ತಮಗೆ ಇದರಲ್ಲಿ ವಿನಾಯಿತಿ ಇರಿಸಿಕೊಂಡಿದ್ದರು. ಈ ನೀತಿಯು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಾಯಿತು. ಅದು ಅಲ್ಲದೆ ಇದರಲ್ಲಿ ಅವರ ಇನ್ನೊಂದು ಸ್ವಾರ್ಥ ಬುದ್ಧಿಯೂ ಇತ್ತು. ಅವುಗಳಿಗೆ ವಿಶ್ವದ ಇತರ ಸಣ್ಣ ದೇಶಗಳು ಅವರನ್ನೇ ಅವಲಂಬಿತವಾಗಿರಬೇಕು. ಇದರಿಂದ ಹಿಂದುಳಿದ ಸಣ್ಣ ದೇಶಗಳು ಹಾಗೂ ಆಫ್ರಿಕನ್ ರಾಷ್ಟ್ರವನ್ನು ಕಸದ ತೊಟ್ಟಿ ತರಹ ಕಾಣುತ್ತಿವೆ. ಅವರಿಗೆ ತಮ್ಮ ದೇಶದಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನು ವಿಸರ್ಜಿಸಲ್ಲ ಕಸದ ತೊಟ್ಟಿ ತರಹ ಕಾಣುವ ಪ್ರಗತಿ ಹೊಂದಲು ಹಾತೊರೆಯುತ್ತಿರುವ ಈ ಸಣ್ಣ ದೇಶಗಳ ಅಗತ್ಯವಿದೆ. ಅವರ ಈ ಹಾವು ಸಾಯಬೇಕು ಕೋಲು ಮುರಿಯ ಬಾರದು ಎಂಬ ನೀತಿಯಿಂದ ಕೋಪನ್ ಹೇಗನ್ ಶೃಂಗಸಭೆಯ ಒಡಂಬಡಿಕೆ ನೀತಿಯು ಸಫಲವಾಗಲು ಸಾಧ್ಯವಾಗಿಲ್ಲ.
ಅಂದಹಾಗೆ ಕೋಪನ್ ಹೇಗನ್‌ನಲ್ಲಿ ನಡೆದ ಈ ಶೃಂಗಸಭೆ ಮೊದಲನೆಯದೆನಲ್ಲ ಹಲವು ವರ್ಷಗಳಿಂದ ವಿಶ್ವದ ಎಲ್ಲ ದೇಶಗಳು ಒಂದು ನಗರದಲ್ಲಿ ಒಟ್ಟು ಸೇರಿ ಇಂತಹ ಒಂದು ಶೃಂಗಸಭೆ ನಡೆಸಿ ಅನೇಕ ಒಡಂಬಡಿಕೆಗಳನ್ನು ಕಾನೂನುಗಳನ್ನು ಹೊರಡಿಸಿದ್ದಾರೆ. ಆದರೆ ಇದನ್ನು ಹೊರಡಿಸಿದ ಪಾಶ್ಚಿಮಾತ್ಯ ದೇಶಗಳು ನಂತರ ಅವುಗಳು ಪಾಲಿಸುವಲ್ಲಿ ವಿಫಲವಾಗುತ್ತಿವೆ. ಆದರೆ ಅವರು ಸಣ್ಣ ದೇಶಗಳು ಷರತ್ತು ವಿಧಿಸಿ ಅದನ್ನು ಪಾಲಿಸಬೇಕು ಎಂಬ ಆದೇಶ ಹೊರಡಿಸುವ ತಮ್ಮ ಅಧಿಕಾರವೆಂಬಂತೆ ನಡೆದುಕೊಳ್ಳುತ್ತಿವೆ.
ಪಾಶ್ಚಿಮಾತ್ಯ ಶ್ರೀಮಂತ ದೇಶಗಳ ದರ್ಪ, ಸ್ವಾರ್ಥಬುದ್ದಿ, ಕುಟಿಲ ದ್ವಿನೀತಿ, ಷಡ್ಯಂತ್ರಗಳು ಕೋಪನ್ ಹೇಗನ್‌ನಲ್ಲಿ ನಡೆದ ಶೃಂಗಸಭೆ ಮುರಿದು ಬೀಳಲು ಕಾರಣವಾದವು. ಬದಲಾಗಿ ವಿಶ್ವದ ಯೋಗಕ್ಷೇಮವನ್ನು ಗಮನದಲ್ಲಿರಿಸಿದ್ದರೆ ಈ ಸಭೆ ಯಶಸ್ವಿಯಾಗುತ್ತಿತ್ತು. ಉರಿಯುವ ಮನೆಯಲ್ಲಿ ಗಳ ಹಿರಿಯಲು ಹೊರಟ ಕಾರಣ ಸಭೆ ಮುರಿದು ಬಿತ್ತು..

Rating
No votes yet