ಈ ಸಾವು ನ್ಯಾಯವೇ...!

ಈ ಸಾವು ನ್ಯಾಯವೇ...!

ಬರಹ

ಗೆಳೆಯನೊಬ್ಬ ಮಿಂಚಂಚೆಯಲ್ಲಿ ಈ ಚಿತ್ರಗಳನ್ನು ಕಳಿಸಿ ತುಂಬ ದಿನವಾಯ್ತು.

ನೋಡಿದಾಗಿನಿಂದ ಮನಸ್ಸು ಕಲಕಿದಂತಾಗಿದೆ. ಭಾವನೆಗಳು ಮನುಷ್ಯರಿಗೆ ಮಾತ್ರ ಅಂದುಕೊಂಡ ನಾವೆಲ್ಲ ಇತರ ಜೀವಿಗಳಿಗೆ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಈ ಚಿತ್ರಗಳು ನನ್ನ ಸಾಕ್ಷಿಪ್ರಜ್ಞೆಯನ್ನು ಕಲಕಿಬಿಟ್ಟಿವೆ. ಘಟನೆ ಹೀಗಿದೆ:

ಅಪಘಾತವೊಂದರಲ್ಲಿ ಹಕ್ಕಿಯೊಂದು ಮಾರಣಾಂತಿಕವಾಗಿ ಗಾಯಗೊಂಡಿತು.

ಜೊತೆಗಾರ ಹಕ್ಕಿ ಸಂಗಾತಿಯ ನೆರವಿಗೆ ಧಾವಿಸಿ ಬಂತು. 

ಆದರೆ, ರಸ್ತೆಯ ಮಧ್ಯೆ ತೀವ್ರ ಗಾಯಗೊಂಡು ಬಿದ್ದಿದ್ದ ಅದಕ್ಕೆ ನೆರವು ನೀಡುವುದಾದರೂ ಹೇಗೆ?

ಜೊತೆಗಾರ ಹಕ್ಕಿ ಕೂಗುತ್ತದೆ, ಅರಚುತ್ತದೆ, ಯಾರನ್ನೋ ನೆರವಿಗೆ ಮೊರೆಯಿಡುತ್ತದೆ.

ನೆರವು ದೊರೆಯದೇ ಗಾಯಗೊಂಡ ಹಕ್ಕಿ ಸತ್ತುಹೋಗುತ್ತದೆ. ರಸ್ತೆ ಮಧ್ಯೆ ಬಿದ್ದಿರುವ ಸಂಗಾತಿಯ ಕಳೇಬರ ನೋಡಿ ಜೊತೆಗಾರ ಹಕ್ಕಿ ವ್ಯಕ್ತಪಡಿಸಿದ ನೋವು ಮನಸ್ಸನ್ನು ಕಲಕಿಬಿಡುತ್ತದೆ.

ಚಿತ್ರಗಳನ್ನು ನೋಡನೋಡುತ್ತ ಮನಸ್ಸು ಮೂಕವಾಗುತ್ತದೆ. ಮೌನವಾಗಿಯೇ ರೋದಿಸುತ್ತದೆ. ಹಕ್ಕಿಯ ನೋವು ಯಾವ ಮನುಷ್ಯನ ನೋವಿಗೂ ಕಡಿಮೆಯೇನಲ್ಲ. ಅದನ್ನೇ ನೆನೆಯುತ್ತ ಮಂಕಾಗುತ್ತದೆ.

ನಿಜ, ಸಾವು ಅಂತಿಮ. ವಿಷಾದ ಮಾತ್ರ ನಿರಂತರ.

- ಚಾಮರಾಜ ಸವಡಿ

(ಚಿತ್ರ ಕೃಪೆ: abunavaf.com - ಚಿತ್ರಗಳಲ್ಲಿ ಕಾಣಸಿಗುವ ವಿಳಾಸ)